ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಕೆಕೆಆರ್‌ನ ಐಪಿಎಲ್‌ ಗೆಲುವಿನ ಶ್ರೇಯ ಶ್ರೇಯಸ್‌ ಅಯ್ಯರ್‌ಗೆ ಸಿಕ್ಕಿರಲಿಲ್ಲʼ-ಸುನೀಲ್‌ ಗವಾಸ್ಕರ್‌!

Sunil Gavaskar on Shreyas Iyer: ಕಳೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪ್ರಶಸ್ತಿ ಗೆಲುವಿನ ಶ್ರೇಯ ಶ್ರೇಯಸ್‌ ಅಯ್ಯರ್‌ಗೆ ಸರಿಯಾಗಿ ಸಿಕ್ಕಿರಲಿಲ್ಲ. ಇವರ ಬದಲಿಗೆ ಬೇರೆಯವರಿಗೆ ಲಭಿಸಿತ್ತು ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ದೂರಿದ್ದಾರೆ.

ಶ್ರೇಯಸ್‌ ಅಯ್ಯರ್‌ಗೆ ಐಪಿಎಲ್‌ ಗೆಲುವಿನ ಶ್ರೇಯ ಸಿಕ್ಕಿರಲಿಲ್ಲ: ಗವಾಸ್ಕರ್‌

ಶ್ರೇಯಸ್‌ ಅಯ್ಯರ್‌ ಬಗ್ಗೆ ಸುನೀಲ್‌ ಗವಾಸ್ಕರ್‌ ಮೆಚ್ಚುಗೆ.

Profile Ramesh Kote May 18, 2025 4:20 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ (RCB vs kKR) ನಡುವಣ ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 58ನೇ ಪಂದ್ಯ ಮಳೆಗೆ ಬಲಯಾಯಿತು. ಆ ಮೂಲಕ ಉಭಯ ತಂಡಗಳು ಒಂದೊಂದು ಅಂಕವನ್ನು ಹಂಚಲಾಗಿತ್ತು. ಇದರ ಹೊರತಾಗಿಯೂ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ ತಂಡದ ಪ್ಲೇಆಫ್ಸ್‌ ಹಾದಿ ಬಹುತೇಕ ಬಂದ್‌ ಆಯಿತು. ಇದರ ಬೆನ್ನಲ್ಲೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಕೋಲ್ಕತಾ ಫ್ರಾಂಚೈಸಿಯನ್ನು ಟೀಕಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿತ್ತು, ಆದರೂ ಅಂದಿನ ನಾಯಕ ಶ್ರೇಯಸ್‌ ಅಯ್ಯರ್‌ಗೆ (Shreyas Iyer) ಇದರ ಯಶಸ್ಸಿನ ಶ್ರೇಯ ಸಿಕ್ಕಿರಲಿಲ್ಲ ಎಂದು ಮಾಜಿ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಬ್ಯಾಟ್ಸ್‌ಮನ್‌ ಆಗಿ ಹಾಗೂ ನಾಯಕನಾಗಿ ಯಶಸ್ವಿಯಾಗಿದ್ದರು. ಅವರು ಆಡಿದ್ದ 14 ಇನಿಂಗ್ಸ್‌ಗಳಿಂದ 351 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಇವರ ಸರಾಸರಿ 39 ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಮೂರನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದರ ಹೊರತಾಗಿಯೂ ಶ್ರೇಯಸ್‌ ಅಯ್ಯರ್‌ ಅವರನ್ನು ಕೋಲ್ಕತಾ ಫ್ರಾಂಚೈಸಿ ಉಳಿಸಿಕೊಂಡಿರಲಿಲ್ಲ. ಮೆಗಾ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ 26.75 ಕೋಟಿ ರೂ. ಗಳಿಗೆ ಶ್ರೇಯಸ್‌ ಅಯ್ಯರ್‌ ಅವರನ್ನು ಖರೀದಿಸಿತ್ತು.

IPL 2025 Final: ಫೈನಲ್‌ ಕೋಲ್ಕತಾದಿಂದ ಸ್ಥಳಾಂತರಿಸುವುದು ಸುಲಭವಿಲ್ಲ; ಗಂಗೂಲಿ

ಅದರಂತೆ ಪಂಜಾಬ್‌ ಕಿಂಗ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿರುವ ಶ್ರೇಯಸ್‌ ಅಯ್ಯರ್‌, ವೈಯಕ್ತಿಯಾಗಿಯೂ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಶ್ರೇಯಸ್‌ ಅಯ್ಯರ್‌ 11 ಇನಿಂಗ್ಸ್‌ಗಳಿಂದ 50.62ರ ಸರಾಸರಿಯಲ್ಲಿ 405 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಅಗ್ರ 10 ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿದ್ದಾರೆ.

ಶ್ರೇಯಸ್‌ ಅಯ್ಯರ್‌ಗೆ ಗವಾಸ್ಕರ್‌ ಮೆಚ್ಚುಗೆ

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ಶ್ರೇಯಸ್‌ ಅಯ್ಯರ್‌ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಕೆಕೆಆರ್‌ ತಂಡದ ಯಶಸ್ಸನ್ನು ಇಲ್ಲಿ ಉಲ್ಲೇಖಿಸಿದ ಅವರು, ಮೈದಾನದಲ್ಲಿ ಸಾಕಷ್ಟು ತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದರ ಹೊರತಾಗಿಯೂ ಇದರ ಶ್ರೇಯ ನಾಯಕನಿಗೆ ಸಿಗದೆ ಬೇರೆ ಯಾರಿಗೂ ಸಿಕ್ಕಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

IPL 2025: ವಿರಾಟ್‌ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ಕೆ.ಎಲ್‌ ರಾಹುಲ್‌

"ಕಳೆದ ಆವೃತ್ತಿಯಲ್ಲಿ ಐಪಿಎಲ್‌ ಗೆಲುವಿನ ಶ್ರೇಯವನ್ನು ಅವರು (ಶ್ರೇಯಸ್‌ ಅಯ್ಯರ್‌) ತೆಗೆದುಕೊಂಡಿರಲಿಲ್ಲ. ಎಲ್ಲಾ ಯಶಸ್ಸಿನ ಶ್ರೇಯ ಬೇರೆ ಯಾರಿಗೋ ಸಿಕ್ಕಿತ್ತು. ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಪ್ರಮುಖ ಪಾತ್ರವನ್ನು ನಾಯಕ ನಿರ್ವಹಿಸುತ್ತಾರೆ. ಆದರೆ, ಡಗೌಟ್‌ನಲ್ಲಿ ಕುಳಿತುಕೊಂಡಿರುವವರು ಈ ಕೆಲಸವನ್ನು ಮಾಡಲ್ಲ. ಈ ವರ್ಷ ಅವರಿಗೆ ಎಷ್ಟೊಂದು ಶ್ರೇಯ ನೀಡಲಾಗುತ್ತಿದೆ ನೀವೇ ನೋಡಿ. ಯಾರೋಬ್ಬರೂ ಕೋಚ್‌ ರಿಕಿ ಪಾಂಟಿಂಗ್‌ಗೆ ಹೆಚ್ಚಿನ ಶ್ರೇಯ ನೀಡುತ್ತಿಲ್ಲ," ಎಂದು ಅವರು ತಿಳಿಸಿದ್ದಾರೆ.

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ಇಲ್ಲಿಯ ತನಕ ಆಡಿದ 11 ಪಂದ್ಯಗಳಿಂದ ಏಳರಲ್ಲಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ ಹಾಗೂ ಪ್ಲೇಆಫ್ಸ್‌ ಸನಿಹದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ ಪಂಜಾಬ್‌ ಕಿಂಗ್ಸ್‌ ಪ್ಲೇಆಫ್ಸ್‌ಗೆ ಬಹುತೇಕ ಅರ್ಹತೆ ಪಡೆಯಲಿದೆ.