Viral News: 140 ಜನ ಅತಿಥಿಗಳು... 2ಲಕ್ಷ ರೂ. ಬಿಲ್! ಬಜೆಟ್ ಫ್ರೆಂಡ್ಲಿಯೂ.. ಲಕ್ಷುರಿಯೂ-ಭಾರೀ ವೈರಲ್ ಆಗ್ತಿದೆ ಈ ವೆಡ್ಡಿಂಗ್ ವೆನ್ಯೂ
ದೇವಸ್ಥಾನ, ಚರ್ಚ್, ಮದುವೆ ಮಂಟಪ, ಇತರ ಖಾಸಗಿ ಸಭಾಂಗಣದಲ್ಲಿ ಮದುವೆ ಆಗುವುದು ಸಾಮಾನ್ಯ ಆದರೆ ಇಲ್ಲೊಂದು ನವ ಜೋಡಿ ತಮ್ಮ ಮದುವೆಯನ್ನು ಚೀನಾದ ರೆಸ್ಟೋರೆಂಟ್ ವೊಂದರಲ್ಲಿ ಗ್ರ್ಯಾಂಡ್ ಆಗಿ ಆಯೋಜನೆ ಮಾಡಿದೆ. ರುಚಿ ರುಚಿಯಾದ ಖಾದ್ಯ ತಯಾರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದ ರೆಸ್ಟೋರೆಂಟ್ ಇದೀಗ ಮದುವೆ ಥೀಮ್ ಮೂಲಕ ಅನೇಕ ಜನರ ಗಮನ ಸೆಳೆಯುತ್ತಿದೆ. ರೆಸ್ಟೋರೆಂಟ್‌ನಲ್ಲಿ ಮದುವೆಯಾದ ಈ ದಂಪತಿಗಳ ಫೋಟೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.


ಬೀಜಿಂಗ್: ಮದುವೆ ಜೀವನದಲ್ಲಿ ಅತ್ಯಮೂಲ್ಯ ಕ್ಷಣವಾಗಿದ್ದು ಈ ದಿನವನ್ನು ಅವೀಸ್ಮರಣೀಯವಾಗಿರಲು ಗ್ರ್ಯಾಂಡ್ ಮದುವೆ ಆಗಲು ಅನೇಕರು ಇಷ್ಟ ಪಡುತ್ತಾರೆ. ಅಂತೆಯೇ ಮದುವೆಯನ್ನು ಕೆಲವರು ಅದ್ದೂರಿಯಾಗಿ ಮಾಡಿಕೊಂಡರೆ ಇನ್ನು ಕೆಲವರು ಸರಳ ರೀತಿಯಲ್ಲಿ ಮದುವೆಯಾಗಲು ಇಷ್ಟ ಪಡುತ್ತಾರೆ.ದೇವಸ್ಥಾನ, ಚರ್ಚ್, ಮದುವೆ ಮಂಟಪ, ಇತರ ಖಾಸಗಿ ಸಭಾಂಗಣ ದಲ್ಲಿ ಮದುವೆ ಆಗುವುದು ಸಾಮಾನ್ಯ ಆದರೆ ಇಲ್ಲೊಂದು ನವ ಜೋಡಿ ತಮ್ಮ ಮದುವೆಯನ್ನು ಚೀನಾದ ರೆಸ್ಟೋರೆಂಟ್ ವೊಂದರಲ್ಲಿ ಗ್ರ್ಯಾಂಡ್ ಆಗಿ ಆಯೋಜನೆ ಮಾಡಿದೆ.ರುಚಿ ರುಚಿ ಯಾದ ಖಾದ್ಯ ತಯಾರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದ ರೆಸ್ಟೋರೆಂಟ್ ಇದೀಗ ಮದುವೆ ಥೀಮ್ ಮೂಲಕ ಅನೇಕ ಜನರ ಗಮನ ಸೆಳೆಯುತ್ತಿದೆ. ರೆಸ್ಟೋರೆಂಟ್ ನಲ್ಲಿ ಮದುವೆ ಯಾದ ಈ ದಂಪತಿಗಳ ಫೋಟೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ (Viral News) ಆಗುತ್ತಿದೆ.
ಸಾಮಾನ್ಯವಾಗಿ ರೆಸ್ಟೋರೆಂಟ್ ಗೆ ಭೇಟಿ ಕೊಡುವಾಗ ಅಲ್ಲಿ ನಾನಾ ತರನಾದ ಆಹಾರ ಖಾದ್ಯಗಳನ್ನು ಸೇವಿಸುತ್ತೇವೆ. ಆದರೆ ರೆಸ್ಟೋರೆಂಟ್ ಅನ್ನೇ ಮದುವೆ ಮಂಟಪವಾಗಿ ಸಿದ್ಧಪಡಿಸಿ ಚೀನಾದ ನವದಂಪತಿಗಳು ಸಪ್ತಪದಿ ತುಳಿದಿದ್ದಾರೆ. ಮದುವೆ ಕಾರ್ಯಕ್ರಮಕ್ಕಾಗಿ ರೆಸ್ಟೋರೆಂಟ್ ಅನ್ನು ಬಲೂನ್ , ಲೈಟಿಂಗ್ಸ್ ಸೇರಿದಂತೆ ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಸುಮಾರು 140 ಜನ ಅಥಿತಿಗಳಿಗೆ ಔತಣಕೂಟ ಅದರ ಜೊತೆ ಚೀನಾದ ಲಯನ್ಸ್ ಡ್ಯಾನ್ಸ್ ಇಂತಹ ಮನೋರಂಜನೆ ಕಾರ್ಯಕ್ರಮ ಅದ್ಧೂರಿಯಾಗಿ ಆಯೋಜನೆ ಮಾಡಲಾಗಿದೆ. ಈ ಎಲ್ಲ ವ್ಯವಸ್ಥೆ ಮಾಡಲು 22 ಸಾವಿರ ಯುವೆನ್ ಅಂದರೆ ಭಾರತದ ಕರೆನ್ಸಿಯಲ್ಲಿ 2.56 ಲಕ್ಷ ರೂಪಾಯಿನಷ್ಟು ಮೊತ್ತ ಖರ್ಚಾಗಿದೆಯಂತೆ. ಇದು ಚೀನಾದ ಸಾಮಾನ್ಯ ಮದುವೆ ಹಾಲ್ ನಲ್ಲಿ ನಡೆಯುವ ಖರ್ಚಿಗಿಂತ ಕಡಿಮೆ ಇದ್ದು ಬಜೆಟ್ ಫ್ರೆಂಡ್ಲಿ ಯಾಗಿದೆ ಎಂದು ನವದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಚೀನಾದ ಝಾವೋ ಎಂಬ ಮಹಿಳೆಯ ವಿವಾಹವನ್ನು ಚೀನಾದ ಮದುವೆ ಮಂಟಪವೊಂದರಲ್ಲಿ ಆಯೋಜಿಸ ಲಾಗಿ ತ್ತು. ಆದರೆ ಆ ಮದುವೆ ಮಂಟಪದಲ್ಲಿ ದುರಸ್ತಿ ಕಾರ್ಯವಿದ್ದ ಕಾರಣ ಅಲ್ಲಿ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಮದುವೆ ಯನ್ನು ಬೇರೆ ಸ್ಥಳದಲ್ಲಿ ಬಜೆಟ್ ಫ್ರೆಂಡ್ಲಿಯಾಗಿ ಆಯೋಜಿಸಲು ವಧು ಝಾವೋ ಸಾಕಷ್ಟು ಹುಡುಕಾಟ ಮಾಡಿದ್ದಾರೆ. ಹೊಸ ವ್ಯವಸ್ಥೆಗಳನ್ನು ಮಾಡಲು ತಮಗೆ ಬಹಳ ಕಡಿಮೆ ಸಮಯವಿದ್ದ ಕಾರಣ ಸ್ನೇಹಿತರ ಸಲಹೆ ಯಂತೆ ಚೀನಾದ ಶಾಂಕ್ಸಿ ಪ್ರಾಂತ್ಯದ ತೈಯುವಾನ್‌ನಲ್ಲಿರುವ ಹೈಡಿಲಾವೊ ರೆಸ್ಟೋರೆಂಟ್ ನಲ್ಲಿ ಆಯೋಜನೆ ಮಾಡಿದ್ದಾರೆ.
ತಮಾಶೆಗೆ ಆಡಿದ ಮಾತು ನಿಜವಾಯ್ತು!
ಮದುಮಗಳು ಝಾವೋ ಈ ಹಿಂದೆಯೆ ತಮ್ಮ ಪತಿಯ ಜೊತೆಗೆ ಚೀನಾದ ಶಾಂಕ್ಸಿ ಪ್ರಾಂತ್ಯದ ತೈಯುವಾನ್‌ನಲ್ಲಿರುವ ಹೈಡಿಲಾವೊ ಔಟ್‌ಲೆಟ್‌ನಲ್ಲಿರುವ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದರಂತೆ. ಆಗ ನಮ್ಮ ಮದುವೆ ಇಲ್ಲೆ ನಡೆಯುತ್ತೆ ಎಂದು ತಮಾಷೆಗೆ ಮಾತನಾಡಿ ಕೊಂಡಿದ್ದರಂತೆ, ಇದೀಗ ಅದೇ ತಮಾಷೆಯ ಕಲ್ಪನೆ ನಿಜವಾಗಿದ್ದಾಗಿ ಝಾವೋ ಅವರು ಖುಷಿ ವ್ಯಕ್ತಪಡಿಸಿದ್ದಾರೆ.ಸುಮಾರು ಎರಡು ಗಂಟೆಗಳ ಕಾಲ ಮದುವೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಬಂದ ಅತಿಥಿಗಳನ್ನು ರೆಸ್ಟೋರೆಂಟ್ ಸಿಬಂದಿಗಳು ಬಹಳ ಆತಿಥ್ಯದಲ್ಲಿ ಬರಮಾಡಿಕೊಂಡರು. ಮದುವೆಯ ಔತಣ ಕೂಟ ಕೂಡ ಬಹಳ ಅದ್ದೂರಿಯಾಗಿ ನಡೆದಿದ್ದು ಲಯನ್ ಡ್ಯಾನ್ಸ್ ನೋಡುಗರ ಮನ ಸೆಳೆಯುವಂತೆ ಮಾಡಿದೆ.