ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diabetes in Children: ಮಧುಮೇಹ ಹೊಂದಿರುವ ಮಗುವಿನ ಶಾಲಾ ಕಲಿಕೆ ಸುಲಭಗೊಳಿಸಲು ಕೆಲವು ಸಲಹೆಗಳು

ಕಾಳಜಿಯಿಂದ ಮತ್ತು ಸೂಕ್ತ ಕ್ರಮಗಳ ಮೂಲಕ ಮಧುಮೇಹ ಇರುವ ಮಗುವಿನ ಆರೈಕೆ ಮಾಡ ಬೇಕಾ ಗುತ್ತದೆ. ಹಾಗಿದ್ದಾಗ ಮಾತ್ರ ಆ ಮಗು ಆರೋಗ್ಯಕರ ಶಾಲಾ ಜೀವನವನ್ನು ಹೊಂದಬಹುದು. ಶಾಲೆ ಯಲ್ಲಿ ಆ ಮಕ್ಕಳು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳಲು ಕೊಂಚ ಸಿದ್ಧತೆ ಬೇಕು. ಜೊತೆಗೆ ಶಾಲಾ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂವಹನ ನಡೆಸಬೇಕು ಮತ್ತು ಅಗತ್ಯ ಸಾಮಗ್ರಿಗಳನ್ನು ಸಿದ್ಧವಾಗಿಡಬೇಕು.

ಮಧುಮೇಹ ಹೊಂದಿರುವ ಮಗುವಿಗೆ ಕಲಿಕೆ ಸುಲಭಗೊಳಿಸಲು ಸಲಹೆಗಳು

Profile Ashok Nayak May 17, 2025 10:58 PM

ಹೊಸ ಶೈಕ್ಷಣಿಕ ವರ್ಷ ಇನ್ನೇನು ಆರಂಭವಾಗುತ್ತಿದೆ. ಮಕ್ಕಳ ಪೋಷಕರಿಗೆ ಒಂದು ಕಡೆ ಸಂಭ್ರಮ ವಾದರೆ ಮತ್ತೊಂದು ಕಡೆ ಆತಂಕವೂ ಇರುತ್ತದೆ. ಅದರಲ್ಲಿಯೂ ಮಧುಮೇಹವಿರುವ ಮಕ್ಕಳ ಪೋಷಕರಿಗಂತೂ ಕೊಂಚ ಜಾಸ್ತಿಯೇ ಆತಂಕ ಇರುತ್ತದೆ. ಟೈಪ್ 1 ಮಧುಮೇಹ ಅನ್ನುವುದು ಮನುಷ್ಯರ ರೋಗನಿರೋಧಕ ವ್ಯವಸ್ಥೆಯು ಮೇದೋಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿ ಸುವ ಕೋಶಗಳನ್ನು ಆಕ್ರಮಿಸಿದಾಗ ಉಂಟಾಗುವ ಒಂದು ಸ್ಥಿತಿ. ಈ ಸ್ಥಿತಿಯಲ್ಲಿ ರಕ್ತದ ಸಕ್ಕರೆ ಯನ್ನು ನಿಯಮಿತವಾಗಿ ಪರೀಕ್ಷಿಸಬೇಕಾಗುತ್ತದೆ.

ಕಾಳಜಿಯಿಂದ ಮತ್ತು ಸೂಕ್ತ ಕ್ರಮಗಳ ಮೂಲಕ ಮಧುಮೇಹ ಇರುವ ಮಗುವಿನ ಆರೈಕೆ ಮಾಡ ಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಆ ಮಗು ಆರೋಗ್ಯಕರ ಶಾಲಾ ಜೀವನವನ್ನು ಹೊಂದ ಬಹುದು. ಶಾಲೆಯಲ್ಲಿ ಆ ಮಕ್ಕಳು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಇರುವಂತೆ ನೋಡಿ ಕೊಳ್ಳಲು ಕೊಂಚ ಸಿದ್ಧತೆ ಬೇಕು. ಜೊತೆಗೆ ಶಾಲಾ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂವಹನ ನಡೆಸಬೇಕು ಮತ್ತು ಅಗತ್ಯ ಸಾಮಗ್ರಿಗಳನ್ನು ಸಿದ್ಧವಾಗಿಡಬೇಕು.

ಈ ಕುರಿತು ಬೆಂಗಳೂರಿನ ಹಲ್ಸ್ ಕ್ಲಿನಿಕ್ ನ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿಸ್ಟ್ ಡಾ. ಅಂಜನಾ ಹಲ್ಸ್ ಅವರು, “ಟೈಪ್ 1 ಮಧುಮೇಹವಿರುವ ಮಗುವಿಗೆ ಪ್ರತಿದಿನ ನಿಯಮಿತ ದಿನಚರಿ ರೂಪಿಸ ಬೇಕಾಗುತ್ತದೆ ಮತ್ತು ದೈಹಿಕ ಚಟುವಟಿಕೆಯನ್ನು ಅವರ ಜೀವನದ ಭಾಗವಾಹಿಸಬೇಕಿರುತ್ತದೆ. ಪೋಷಕರು ಉತ್ತಮ ಆಹಾರ ಒದಗಿಸುವ, ಸೂಕ್ತ ವ್ಯಾಯಾಮ ಮಾಡಿಸುವ ಮತ್ತು ನಿರಂತರವಾಗಿ ಗ್ಲೂಕೋಸ್ ಮೇಲ್ವಿಚಾರಣೆ ಮಾಡುವ ಮೂಲಕ ಮಗುವಿನ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ. ಈಗ ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ಸಾಧನಗಳಂತಹ ಅತ್ಯಾಧುನಿಕ ಸಾಧನಗಳನ್ನು ಬಳಸಿಕೊಂಡು ಸರಳವಾಗಿ ಮಧುಮೇಹ ವನ್ನು ನಿರ್ವಹಿಸಬಹುದಾಗಿದೆ.

ಇದನ್ನೂ ಓದಿ: Health Tips: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಏನು ನಂಟು?

ಈ ಸಾಧನಗಳು ದಿನವಿಡೀ ಗ್ಲೂಕೋಸ್ ಮಟ್ಟವನ್ನು ಅಳೆಯುತ್ತಿರುತ್ತದೆ ಮತ್ತು ಆಹಾರ, ಚಟು ವಟಿಕೆ, ಇನ್ಸುಲಿನ್ ಪ್ರಮಾಣದಂತಹ ಅಂಶಗಳಿಗೆ ರಕ್ತದಲ್ಲಿರುವ ಸಕ್ಕರೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಮಾಹಿತಿಯನ್ನು ಒದಗಿಸುತ್ತವೆ” ಎಂದು ಹೇಳುತ್ತಾರೆ. ಸಿಜಿಎಂ ತಂತ್ರಜ್ಞಾನದ ಬಹಳ ಉತ್ತಮ ಪ್ರಯೋಜನವೆಂದರೆ ಅದು ಪೋಷಕರ ಮೇಲಿನ ಒತ್ತಡವನ್ನು ಬಹಳ ಕಡಿಮೆ ಮಾಡು ತ್ತದೆ.

ಮಗುವಿನ ರಕ್ತದ ಸಕ್ಕರೆಯ ಅಂಶಗಳು ಏರುಪೇರಾದಾಗ ಪೋಷಕರ ಫೋನ್ ಗೆ ಹೈಪೋಗ್ಲೈಸೆ ಮಿಯಾ ಮತ್ತು ಹೈಪರ್ ಗ್ಲೈಸೆಮಿಯಾ ಮಾಹಿತಿಗಳನ್ನು ಕಳುಹಿಸುತ್ತದೆ. ಹಾಗಾಗಿ ಪೋಷಕರು ಮಗು ಶಾಲೆಯಲ್ಲಿರುವಾಗ ಮಗುವಿನ ಗ್ಲೂಕೋಸ್ ಮಟ್ಟ ಎಷ್ಟಾಗಿದೆಯೋ ಎಂಬುದರ ಕುರಿತು ಚಿಂತೆ ಪಡುವ ಅಗತ್ಯ ಇರುವುದಿಲ್ಲ. ಸಿಜಿಎಂ ಸಾಧನಗಳು ಮಗುವಿನ ಮಾಹಿತಿಯನ್ನು ಪೋಷಕರು ಮತ್ತು ವೈದ್ಯಕೀಯ ತರಜ್ಞರ ಜೊತೆ ಹಂಚಿಕೊಳ್ಳುವುದಕ್ಕೂ ಅನುವು ಮಾಡಿ ಕೊಡುತ್ತದೆ.

ಇದರಿಂದ ಪೋಷಕರು ಮತ್ತು ವೈದ್ಯಕೀಯ ಸಿಬ್ಬಂದಿ ಜಂಟಿಯಾಗಿ ಮಗುವಿನ ಮಧುಮೇಹವನ್ನು ನಿರ್ವಹಿಸಬಹುದು. ಈ ವ್ಯವಸ್ಥೆಯು ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದಲ್ಲದೆ, ಯಾವುದೇ ಸಮಸ್ಯೆ ಉಂಟಾದಾಗ ಅದನ್ನು ತಕ್ಷಣವೇ ಪರಿಹರಿಸುವ ಭರವಸೆಯನ್ನು ನೀಡುತ್ತದೆ. ಹೀಗಾಗಿ ಪೋಷಕರು ಶಾಂತಿಯಿಂದ ಇರಬಹುದಾಗಿದೆ. ಈ ಕುರಿತು ಅಬಾಟ್ ನ ಡಯಾಬಿಟೀಸ್ ಡಿವಿಷನ್ ನ ಮೆಡಿಕಲ್ ಅಫೇರ್ಸ್ ಡೈರೆಕ್ಟರ್ ಡಾ. ಕೆನೆತ್ ಲೀ ಅವರು, “ಮಧುಮೇಹವನ್ನು ನಿರ್ವಹಿಸುವುದು ಕಷ್ಟ, ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ನಿರ್ವಹಣೆ ಮಾಡುವುದು ಕಷ್ಟ.

ಇಂತಹ ಸಂದರ್ಭಗಳಲ್ಲಿ ಪೋಷಕರ ಜವಾಬ್ದಾರಿ ಜಾಸ್ತಿ ಇರುತ್ತದೆ. ಪ್ರಸ್ತುತ ಮಧುಮೇಹವನ್ನು ಸುಲಭವಾಗಿ ನಿರ್ವಹಿಸಲು ಮತ್ತು ಅದಕ್ಕಾಗಿ ಮನೆಮಂದಿಗೆ ಸಹಾಯ ಮಾಡಲು ಸಿಜಿಎಂನಂತಹ ಸಾಧನಗಳು ಲಭ್ಯವಿದೆ. ಹಳೆಯ ಸಿಜಿಎಂ ತಂತ್ರಜ್ಞಾನವು ಕೇವಲ ಹಳೆಯ ಮಾಹಿತಿಯನ್ನು ಒದಗಿ ಸುತ್ತಿತ್ತು. ಆದರೆ ಆಧುನಿಕ ಸಿಜಿಎಂಗಳು ಆಯಾ ಕ್ಷಣದ ಕಾರ್ಯಸಾಧುವಾದ ಮಾಹಿತಿಯನ್ನು ನೀಡುತ್ತವೆ.

ಇದರಿಂದ ಪೋಷಕರು ಮತ್ತು ಮಕ್ಕಳು ಏರಿಳಿತಗಳಿಗೆ ತಕ್ಷಣವೇ ಪ್ರತಿಕ್ರಿಯಿಸಬಹುದು. ಸ್ಮಾರ್ಟ್‌ ಫೋನ್ ಜೊತೆಗೆ ಕನೆಕ್ಟ್ ಆಗಿರುವುದರಿಂದ ಪೋಷಕರು ತಮ್ಮ ಮಗುವಿನ ಗ್ಲೂಕೋಸ್ ಏರಿಳಿತ ಗಳನ್ನು ದೂರದಿಂದಲೇ ಗಮನಿಸಬಹುದು ಮತ್ತು ಅನಿರೀಕ್ಷಿತ ಏರಿಳಿತಗಳ ಬಗ್ಗೆ ಎಚ್ಚರಿಕೆಗಳನ್ನು ಪಡೆಯಬಹುದು. ಇದರಿಂದ ಸಮಯಕ್ಕೆ ಸರಿಯಾಗಿ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗು ತ್ತದೆ.

ಈ ರೀತಿಯ ಡೇಟಾ ಆಧಾರಿತ ಮಾಹಿತಿಯು ಗ್ಲೂಕೋಸ್ ನಿರ್ವಹಣಾ ರೀತಿಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಮಕ್ಕಳ ಶಾಲಾ ಕಲಿಕಾ ಅನುಭವವನ್ನು ಉತ್ತಮಗೊಳಿಸುತ್ತದೆ” ಎಂದು ಹೇಳಿದರು. ಮಗುವಿನ ಮಧುಮೇಹ ನಿರ್ವಹಣೆಗೆ ಸಹಾಯ ಮಾಡಲು ಐದು ಸಲಹೆಗಳು ಇಲ್ಲಿವೆ:

1.ರಕ್ತದ ಸಕ್ಕರೆಯನ್ನು ನಿಯಮಿತವಾಗಿ ಪರೀಕ್ಷಿಸಿ: ಮಗು ಶಾಲೆಗೆ ಹೋಗುವ ಮೊದಲು ಪೋಷ ಕರು ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಬೇಕು. ಮುಂದಿನ ಇನ್ಸುಲಿನ್ ಡೋಸೇಜ್ ಅನ್ನು ನಿರ್ಧರಿ ಸಲು ಈ ಪರೀಕ್ಷೆ ಸಹಾಯ ಮಾಡುತ್ತದೆ. ಸಿಜಿಎಂ ಸಾಧನಗಳಿಂದ ಇದನ್ನು ಸುಲಭವಾಗಿ ಮಾಡ ಬಹುದು. ಸ್ಮಾರ್ಟ್‌ ಫೋನ್ ಆಪ್ ಮೂಲಕ ಪೋಷಕರು ದೂರದಿಂದಲೇ ಗ್ಲೂಕೋಸ್ ಮಟ್ಟವನ್ನು ಗಮನಿಸ ಬಹುದು, ಈ ಮೂಲಕ ಮಗು 70–180 mg/dL ಟಾರ್ಗೆಟ್ ರೇಂಜ್ ನಲ್ಲಿ ಇದೆಯೇ ಇಲ್ಲವೇ ಎಂದು ನೋಡಿಕೊಳ್ಳಬಹುದು. ಒತ್ತಡ, ಆಹಾರ, ಅಥವಾ ವ್ಯಾಯಾಮದಿಂದ ಉಂಟಾಗುವ ಏರಿಳಿತಗಳನ್ನು ತಿಳಿಯಲು ಸಿಜಿಎಂ ಮಾಹಿತಿ ಸಹಾಯ ಮಾಡುತ್ತದೆ. ಇದರಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ. 2.ಖುಷಿ ಕೊಡುವ ವ್ಯಾಯಾಮ ಹೇಳಿಕೊಡಿ: ಮಕ್ಕಳನ್ನು ಆಕ್ಟಿವ್ ಆಗಿ ಇಡಲು ಸುಲಭ ಮಾರ್ಗ ವೆಂದರೆ ಅವರಿಗೆ ಇಷ್ಟವಾದ, ಖುಷಿಕೊಡುವ ವ್ಯಾಯಾಮವನ್ನು ಹೇಳಿ ಕೊಡುವುದು. ಮಕ್ಕಳು ಗುಂಪಾಗಿ ಮಾಡಬಹುದಾದ ವ್ಯಾಮ ಇದ್ದರೆ ಇನ್ನೂ ಒಳ್ಳೆಯದು. ಸೈಕಲ್ ಓಡಿಸುವುದು, ನೃತ್ಯ, ಕ್ರಿಕೆಟ್ ಆಡುವುದು ಅಥವಾ ಕೋಕೊ, ಕಬಡ್ಡಿ ಯಂತಹ ಆಟಗಳನ್ನ ಬಂಧುಗಳು ಮತ್ತು ಸ್ನೇಹಿತರ ಜೊತೆಗೆ ಆಡುವುದು ಸಹ ಒಳ್ಳೆಯದು. ಒಂಟಿತನವನ್ನು ತಪ್ಪಿಸಲು ಇಡೀ ಕುಟುಂಬ ಒಳಗೊಳ್ಳು ವಂತೆ ನೋಡಿಕೊಳ್ಳಿ. ಟೈಪ್ 1 ಮಧು ಮೇಹ ವಿರುವ ಮಕ್ಕಳಿಗೆ ವಿಶ್ರಾಂತಿಯೂ ಮುಖ್ಯವಾದು ದರಿಂದ, ಅವರು ಸಾಕಷ್ಟು ನಿದ್ರೆ ಮಾಡು ವಂತೆ ನೋಡಿಕೊಳ್ಳಿ.

3.ಒತ್ತಡ ನಿರ್ವಹಣೆ ಮತ್ತು ಸ್ವಯಂ ಕಾಳಜಿ ವಹಿಸುವುದನ್ನು ಕಲಿಸಿ: ಶಾಲಾ ಹಂತದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಕಾರಣಕ್ಕೆ ಒತ್ತಡ ಉಂಟಾಗುತ್ತದೆ. ಈ ಒತ್ತದ ರಕ್ತದ ಗ್ಲೂಕೋಸ್ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಿಮ್ಮ ಮಗುವಿಗೆ ಒತ್ತಡದ ಲಕ್ಷಣಗಳನ್ನು ಗುರುತಿಸಲು ಕಲಿಸಿ ಮತ್ತು ಅಗತ್ಯವಿದ್ದಾಗ ವಿರಾಮ ತೆಗೆದುಕೊಳ್ಳಲು ಹೇಳಿಕೊಡಿ. ಓದುವುದು, ಜರ್ನಲ್ ಬರೆಯು ವುದು, ಅಥವಾ ಸ್ನೇಹಿತರೊಂದಿಗೆ ಸಂವಾದ ಮಾಡುವುದು ಹೀಗೆ ಒತ್ತಡವನ್ನು ನಿರ್ವಹಿಸುವು ದನ್ನು ಕಳಿಸಿ. ಸ್ವಯಂ ಕಾಳಜಿ ಮಧುಮೇಹ ನಿರ್ವಹಣೆಯಲ್ಲಿ ಬಹಳ ಮುಖ್ಯ ವಾಗುತ್ತದೆ.

4.ಮಧುಮೇಹ ಜರ್ನಲ್ ಇಡಿ: ನಿಮ್ಮ ಮಗುವಿನ ಸಕ್ಕರೆ ಮಟ್ಟವು ವಿವಿಧ ಆಹಾರಗಳು ಮತ್ತು ಚಟುವಟಿಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಹಾಗಾಗಿ ಅವರ ರಕ್ತದ ಗ್ಲೂಕೋಸ್ ಮಟ್ಟ, ತಿನ್ನುವ ಆಹಾರ, ಮತ್ತು ವ್ಯಾಯಾಮ ಇತ್ಯಾದಿ ಮಾಹಿತಿಯನ್ನು ಸಮಯದ ಜೊತೆಗೆ ದಾಖಲಿಸಿ. ಇದರಿಂದ, ಯಾವುದು ಕೆಲಸ ಮಾಡುತ್ತಿದೆ ಮತ್ತು ಯಾವುದು ಕೆಲಸ ಮಾಡುತ್ತಿಲ್ಲ ಎಂಬುದು ತಿಳಿಯುತ್ತದೆ. ಅದರ ಆಧಾರದ ಮೇಲೆ ಯೋಜನೆ ಗಳನ್ನು ರೂಪಿಸಬಹುದು. ಉದಾಹರಣೆಗ ತಿಂಡಿಯ ಸಮಯವನ್ನು ಬದಲಾಯಿಸುವುದು, ಬೆಳಗಿನ ಜಾಗಿಂಗ್ ಅಥವಾ ಸಂಜೆಯ ನಡಿಗೆ ಸಮಯ ಬದಲಿಸುವುದು ಹೀಗೆ ಪ್ಲಾನ್ ಬದಲಿಸಲು ಅನುಕೂಲವಾಗುತ್ತದೆ. ನಿಮ್ಮ ಮಗುವಿನ ದಿನಚರಿಯಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ಅಥವಾ ಯಾವುದೇ ಪ್ರಶ್ನೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.

5.ಆಹಾರ ಸೇವನೆ ಯೋಜನೆ ಬಹಳ ಮುಖ್ಯ: ಶಾಲಾ ಊಟದ ಸಮಯ ಬದಲಾಗಬಹುದಾದ್ದ ರಿಂದ ಮತ್ತು ಅನಿರೀಕ್ಷಿತ ಕಾರ್ಯಕ್ರಮಗಳಿಂದ ಊಟ ಸೇವನೆ ಸಮಯವನ್ನು ನಿಭಾಯಿಸುವುದು ಕಷ್ಟ ವಾಗಬಹುದು. ಹಾಗಾಗಿ ನಿಮ್ಮ ಮಗುವಿಗೆ ಸಮತೋಲಿತ ಊಟ ಮಾಡುವ ರೀತಿಯನ್ನು ಕಲಿಸಿ ಮತ್ತು ವಿವಿಧ ಆಹಾರಗಳು ಅವರ ಗ್ಲೂಕೋಸ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಮಕ್ಕಳ ಮಧುಮೇಹವನ್ನು ನಿರ್ವಹಿಸುವುದು ಒಂದು ಟೀಮ್ ವರ್ಕ್. ಮೇಲೆ ನೀಡಿರುವ ಸರಳ ಸಲಹೆಗಳ ಮೂಲಕ ನೀವು ಅವರ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣ ದಲ್ಲಿಟ್ಟುಕೊಂಡು ಅವರು ಆಕ್ಟಿವ್ ಆಗಿರುವಂತೆ ನೋಡಿಕೊಳ್ಳಬಹುದು.