ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಅರುಣಾಚಲ ಪ್ರದೇಶದಲ್ಲಿ 3.8 ತೀವ್ರತೆಯ ಲಘು ಭೂಕಂಪನ

ದಿಬಾಂಗ್ ಕಣಿವೆಯ ಪಕ್ಕದ ಪ್ರದೇಶದಲ್ಲಿ ಶನಿವಾರ 12 ಕಿಲೋ ಮೀಟರ್ ಆಳದಲ್ಲಿ 3.4 ತೀವ್ರತೆಯ ಭೂಕಂಪ (Earthquake) ಸಂಭವಿಸಿತ್ತು. ಇದಾದ ಬಳಿಕ ಭಾನುವಾರ ಮುಂಜಾನೆ ದಿಬಾಂಗ್ ಕಣಿವೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದೆ. 3.8 ತೀವ್ರತೆಯ ಭೂಕಂಪ ಸುಮಾರು 10 ಕಿಲೋ ಮೀಟರ್ ಆಳದಲ್ಲಿ ನಡೆದಿದೆ.

ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪನ

ಅರುಣಾಚಲ ಪ್ರದೇಶ: ದಿಬಾಂಗ್ ಕಣಿವೆಯಲ್ಲಿ (Dibang Valley) ಭಾನುವಾರ ಮುಂಜಾನೆ ಲಘು ಭೂಕಂಪನ (Earthquake) ಸಂಭವಿಸಿದೆ. ಈ ಪ್ರದೇಶದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದ ಅನಂತರ ಅರುಣಾಚಲ ಪ್ರದೇಶದಲ್ಲೂ (Arunachal Pradesh) ಸ್ವಲ್ಪ ಕಂಪನ ಉಂಟಾಯಿತು. ದಿಬಾಂಗ್ ಕಣಿವೆ ಜಿಲ್ಲೆಯ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Centre for Seismology) ತಿಳಿಸಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು 3.8 ತೀವ್ರತೆಯ ಭೂಕಂಪ 10 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿರುವುದಾಗಿ ತಿಳಿಸಿದೆ.

ದಿಬಾಂಗ್ ಕಣಿವೆಯ ಪಕ್ಕದ ಪ್ರದೇಶದಲ್ಲಿ ಶನಿವಾರ 12 ಕಿಲೋ ಮೀಟರ್ ಆಳದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ಬಳಿಕ ಭಾನುವಾರ ಮುಂಜಾನೆ ದಿಬಾಂಗ್ ಕಣಿವೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದೆ. 3.8 ತೀವ್ರತೆಯ ಭೂಕಂಪ ಸುಮಾರು 10 ಕಿಲೋ ಮೀಟರ್ ಆಳದಲ್ಲಿ ನಡೆದಿದೆ. ಭಾನುವಾರ ಮುಂಜಾನೆ ಸರಿಸುಮಾರು 5:06 ಗಂಟೆಗೆ ಇದು ಉಂಟಾಗಿದೆ. ಭೂಕಂಪದ ಕೇಂದ್ರಬಿಂದು ಉತ್ತರ 28.78 ಅಕ್ಷಾಂಶ ಮತ್ತು ಪೂರ್ವ 95.70 ರೇಖಾಂಶದಲ್ಲಿತ್ತು.



ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯಲ್ಲಿ ಭಾನುವಾರ 3.8 ತೀವ್ರತೆಯ ಭೂಕಂಪ ಉಂಟಾಗಿರುವುದರಿಂದ ಇದು 24 ಗಂಟೆಗಳ ಒಳಗೆ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಎರಡನೇ ಭೂಕಂಪವಾಗಿದೆ. ಇನ್ನೊಂದು ಭೂಕಂಪನ ಶನಿವಾರ ಮಧ್ಯಾಹ್ನ ಸಂಭವಿಸಿತ್ತು. ಶನಿವಾರ ಸಂಭವಿಸಿದ ಭೂಕಂಪದ ನಿಖರವಾದ ಕೇಂದ್ರಬಿಂದು ಉತ್ತರ 28.78 ಅಕ್ಷಾಂಶ, ಪೂರ್ವ 95.70 ರೇಖಾಂಶವಾಗಿದೆ.

ಇದನ್ನೂ ಓದಿ: Bike Taxi services: ಬೈಕ್ ಟ್ಯಾಕ್ಸಿ ಸೇವೆ ಕಾನೂನುಬದ್ಧಗೊಳಿಸಿ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಬಿಟಿಎ ಮನವಿ

ಭೂಕಂಪನದಿಂದ ಹೆಚ್ಚಿನ ಹಾನಿಯಾಗಿಲ್ಲ. ಇಲ್ಲಿ ಸಾಮಾನ್ಯವಾಗಿ ಭೂಕಂಪನ ಉಂಟಾಗುತ್ತಿರುತ್ತದೆ. ಆಗಾಗ್ಗೆ ಕಡಿಮೆ ಮತ್ತು ಮಧ್ಯಮ ತೀವ್ರತೆಯ ಭೂಕಂಪಗಳು ಇಲ್ಲಿನ ಜನರ ಅನುಭವಕ್ಕೆ ಬಂದಿದೆ.