Gold Discovery: ಅಬ್ಬಬ್ಬಾ ಲಾಟ್ರಿ! ರೈತನ ಗದ್ದೆಯಲ್ಲಿ ಪತ್ತೆಯಾಯಿತು ಭಾರಿ ಚಿನ್ನದ ನಿಕ್ಷೇಪ
ಮಧ್ಯ ಫ್ರಾನ್ಸ್ ನ ಆವೆರ್ಗ್ನೆ ಪ್ರದೇಶದ 52 ವರ್ಷದ ರೈತ ಮೈಕೆಲ್ ಡುಪಾಂಟ್ ಎಂಬವರ ಗದ್ದೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ತನ್ನ ಗದ್ದೆಯಲ್ಲಿ ಚಿನ್ನ ಪತ್ತೆಯಾದ ಖುಷಿ ಆ ರೈತನಿಗೆ ಹೆಚ್ಚು ಕಾಲ ಇರಲಿಲ್ಲ. ಯಾಕೆಂದರೆ ಈ ಸುದ್ದಿ ದೇಶಾದ್ಯಂತ ಸದ್ದು ಮಾಡಿದ್ದು ಸರ್ಕಾರ ಪರಿಶೀಲನೆಗಾಗಿ ಆ ಪ್ರದೇಶದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.

ಸಾಂದರ್ಭಿಕ ಚಿತ್ರ.

ಪ್ಯಾರಿಸ್: ರೈತನೊಬ್ಬ ಗದ್ದೆಯಲ್ಲಿ (Gold in farmer land) ಕೆಲಸ ಮಾಡುವಾಗ ಭಾರಿ ಪ್ರಮಾಣದ ಚಿನ್ನ (Gold Discovery) ಪತ್ತೆಯಾದ ಘಟನೆ ಮಧ್ಯ ಫ್ರಾನ್ಸ್‌ನಲ್ಲಿ (France) ನಡೆದಿದೆ. ಸುಮಾರು 3,000 ಕೋಟಿ ರೂ. ಗೂ ಹೆಚ್ಚಿನ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕ್ಷಣ ಮಾತ್ರದಲ್ಲಿ ಈ ಸುದ್ದಿ ದೇಶದ ಗಮನ ಸೆಳೆದಿದ್ದು, ಗದ್ದೆಯಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಸ್ಥಗಿತಗೊಳಿಸಿ ಫ್ರೆಂಚ್ ಸರ್ಕಾರ ಆದೇಶಿಸಿದೆ. ಮಣ್ಣಿನಲ್ಲಿ ಹೊಳಪು ಕಂಡು ಬಂದಿದ್ದು, ಇದೇನಿರಬಹುದು ಎನ್ನುವ ಕುತೂಹಲದಿಂದ ರೈತ ಅಗೆಯುತ್ತಾ ಸಾಗಿದಂತೆ ಸುಮಾರು ನಾಲ್ಕು ಬಿಲಿಯನ್ ಯುರೋಗಿಂತ ಹೆಚ್ಚು ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಮಧ್ಯ ಫ್ರಾನ್ಸ್‌ನ ಆವೆರ್ಗ್ನೆ ಪ್ರದೇಶದ 52 ವರ್ಷದ ರೈತ ಮೈಕೆಲ್ ಡುಪಾಂಟ್ ಎಂಬವರ ಗದ್ದೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ತನ್ನ ಗದ್ದೆಯಲ್ಲಿ ಚಿನ್ನ ಪತ್ತೆಯಾದ ಖುಷಿ ಆ ರೈತನಿಗೆ ಹೆಚ್ಚು ಕಾಲ ಇರಲಿಲ್ಲ. ಯಾಕೆಂದರೆ ಈ ಸುದ್ದಿ ದೇಶಾದ್ಯಂತ ಸದ್ದು ಮಾಡಿದ್ದು ಸರ್ಕಾರ ಪರಿಶೀಲನೆಗಾಗಿ ಆ ಪ್ರದೇಶದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಸುಮಾರು ನಾಲ್ಕು ಬಿಲಿಯನ್ ಯುರೋಗಿಂತ ಹೆಚ್ಚಿನ ಮೌಲ್ಯದ ಚಿನ್ನದ ನಿಕ್ಷೇಪ ರೈತನ ಜಮೀನಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ತನಿಖೆಯ ಕಾರಣವನ್ನು ಉಲ್ಲೇಖಿಸಿ ಫ್ರಂಚ್ ಸರ್ಕಾರವು ಸ್ಥಳದಲ್ಲಿನ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಮುಂದಿನ ಕ್ರಮಗಳಿಗೆ ಅನುಮತಿ ನೀಡುವ ಮೊದಲು ಇದರಿಂದ ಪರಿಸರದ ಮೇಲೆ ಬೀರುವ ಪರಿಣಾಮ ಮತ್ತು ಕಾನೂನು ಏನಿದೆ ಎನ್ನುವುದರ ಕುರಿತು ನಿರ್ಣಯಿಸಿ ಹೇಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರೈತ ಮೈಕೆಲ್ ಡುಪಾಂಟ್ ಎಂದಿನಂತೆ ತಮ್ಮ ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಹತ್ತಿರದ ಹೊಳೆಯಲ್ಲಿ ಹೊಳಪನ್ನು ಗಮನಿಸಿದರು. ತಕ್ಷಣ ಅವರು ಸ್ವಲ್ಪ ಆಳವಾಗಿ ಅಗೆದಾಗ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಯಿತು.
ಈ ಸುದ್ದಿ ಬಹುಬೇಗನೆ ಎಲ್ಲಡೆ ಹರಡಿತ್ತು. ಭೂವಿಜ್ಞಾನ ತಜ್ಞರ ಗಮನ ಸೆಳೆದಿದ್ದು, ಆರಂಭಿಕ ಅಂದಾಜುಗಳ ಪ್ರಕಾರ ಇಲ್ಲಿ 150 ಟನ್‌ಗಳಿಗಿಂತ ಹೆಚ್ಚು ಚಿನ್ನ ಇರಬಹುದು ಎಂದು ಅಂದಾಜಿಸಲಾಗಿದೆ. ಫ್ರೆಂಚ್ ನೈಸರ್ಗಿಕ ಸಂಪನ್ಮೂಲ ಕಾನೂನುಗಳ ಅಡಿಯಲ್ಲಿ ಸಂಪೂರ್ಣ ಪರಿಸರ ಮತ್ತು ಕಾನೂನು ವಿಮರ್ಶೆಗಳು ಪೂರ್ಣಗೊಳ್ಳುವವರೆಗೆ ಇಲ್ಲಿ ಯಾವುದೇ ಗಣಿಗಾರಿಕೆ ಅಥವಾ ಹೊರತೆಗೆಯುವಿಕೆಯನ್ನು ಅನುಮತಿಸಲಾಗುವುದಿಲ್ಲ ಎಂದು ಸರ್ಕಾರದ ಅಧಿಕಾರಿಗಳು ಮೈಕೆಲ್‌ಗೆ ತಿಳಿಸಿದರು.
ಇದನ್ನೂ ಓದಿ: Mutual Fund SIP: 10,000 ರೂ. ಹೂಡಿಕೆಯಿಂದ ಕೋಟ್ಯಧಿಪತಿಯಾಗಿ!
ನೈಸರ್ಗಿಕ ಸಂಪನ್ಮೂಲವೊಂದು ಖಾಸಗಿ ಆಸ್ತಿಯಲ್ಲಿ ಕಂಡು ಬಂದಿರುವುದರಿಂದ ಇದಕ್ಕೆ ಸಂಬಂಧಿಸಿ ನಿಯಮಗಳು ಏನಿವೆ ಎನ್ನುವುದರ ಪರಿಶೀಲನೆ ಅಗತ್ಯವಿದೆ. ಇದನ್ನು ಮೈಕಲ್ ಕೂಡ ಒಪ್ಪಿಕೊಂಡಿದ್ದಾರೆ.
ಫ್ರಾನ್ಸ್‌ನಲ್ಲಿ ನೈಸರ್ಗಿಕ ಸಂಪನ್ಮೂಲಗಳು ಖಾಸಗಿ ಆಸ್ತಿಯಲ್ಲಿ ಕಂಡುಬಂದರೂ ಸಹ ಬಿಗಿ ನಿಯಮವನ್ನು ಅನುಸರಿಸಲಾಗುತ್ತದೆ. ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಸಂಪೂರ್ಣ ಅಧಿಕಾರ ಇರುವುದರಿಂದ ಯಾವುದೇ ಆವಿಷ್ಕಾರ ನಡೆಸುವ ಮೊದಲು ಅನುಮೋದನೆ ಪ್ರಕ್ರಿಯೆ ಅತೀ ಅಗತ್ಯವಾಗಿರುತ್ತದೆ.
ರೈತನ ಭೂಮಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವುದು ಸ್ಥಳೀಯ ಕೆಲವರಲ್ಲಿ ಆತಂಕ ಉಂಟು ಮಾಡಿದೆ. ಇದರ ಪ್ರಕ್ರಿಯೆಗಳು, ಬಿಗಿ ನಿಯಮಗಳಿಂದ ತಮ್ಮ ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.