ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Universe Karnataka: ವಂಶಿ ಮುಡಿಗೇರಿದ ಮಿಸ್‌ ಯುನಿವರ್ಸ್‌ ಕರ್ನಾಟಕ 2025ರ ಕಿರೀಟ

ಉದ್ಯಾನನಗರಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ ಮಿಸ್‌ ಯುನಿವರ್ಸ್‌ ಕರ್ನಾಟಕ-2025ರ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್‌ ಯೂನಿವರ್ಸ್‌ ಕರ್ನಾಟಕ ಟೈಟಲ್‌ ಹಾಗೂ ಕಿರೀಟವನ್ನು ವಂಶಿ ಮುಡಿಗೇರಿಸಿಕೊಂಡರು. ಅಸ್ಮಿತಾ ಮೊದಲನೇ ರನ್ನರ್‌ ಅಪ್‌ ಆದರು. ಲೇಖನಾ ಎರಡನೇ ರನ್ನರ್‌ ಅಪ್‌ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಮಿಸ್‌ ಯುನಿವರ್ಸ್‌ ಕರ್ನಾಟಕ  2025 ಸೌಂದರ್ಯ ಸ್ಪರ್ಧೆ ಯಶಸ್ವಿ

ಮಿಸ್‌ ಯೂನಿವರ್ಸ್‌ ಕರ್ನಾಟಕ ಸೌಂದರ್ಯ ಸ್ಪರ್ಧೆ.

ವಿಶೇಷ ವರದಿ- ಶೀಲಾ ಸಿ. ಶೆಟ್ಟಿ

ಬೆಂಗಳೂರು: ಉದ್ಯಾನನಗರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಿಸ್‌ ಯುನಿವರ್ಸ್‌ ಕರ್ನಾಟಕ 2025ರ (Miss Universe Karnataka) ಬ್ಯೂಟಿ ಪೇಜೆಂಟ್‌ ಯಶಸ್ವಿಯಾಗಿ ನಡೆಯಿತು. ಈ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ, ಕಿರೀಟ ಮುಡಿಗೇರಿಸಿಕೊಂಡವರ ಪಟ್ಟಿ ಈ ಕೆಳಕಂಡಂತಿದೆ. ಮಿಸ್‌ ಯುನಿವರ್ಸ್‌ ಕರ್ನಾಟಕ 2025ರ ಸ್ಪರ್ಧೆಯ ನಾನಾ ಸುತ್ತುಗಳಲ್ಲಿ ಪಾಲ್ಗೊಂಡ ಮಾಡೆಲ್‌ ವಂಶಿ ಮೊದಲನೇ ಸ್ಥಾನ ಪಡೆದು ಟೈಟಲ್‌ ತಮ್ಮದಾಗಿಸಿಕೊಂಡು, ಕಿರೀಟವನ್ನು ಮುಡಿಗೇರಿಸಿಕೊಂಡರು. ಅಸ್ಮಿತಾ ಮೊದಲನೇ ರನ್ನರ್‌ ಅಪ್‌ ಆದರು. ಲೇಖನಾ ಎರಡನೇ ರನ್ನರ್‌ ಅಪ್‌ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಅಂದಹಾಗೆ ಫ್ಯಾಷನ್‌ ಪೇಜೆಂಟ್‌ ಡೈರೆಕ್ಟರ್‌ ನಂದಿನಿ ನಾಗರಾಜ್‌ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ, ಮಿಸ್ ಯುನಿವರ್ಸ್ ಕರ್ನಾಟಕ ವಿಭಾಗದ ಗ್ರ್ಯಾಂಡ್‌ ಫಿನಾಲೆಯಲ್ಲಿ, ಮೀಡಿಯಾ ಪಾರ್ಟನರ್‌ ಆಗಿ ವಿಶ್ವವಾಣಿ ಟಿವಿ ಸ್ಪೆಷಲ್‌ ಕೂಡ ಕೈ ಜೋಡಿಸಿತ್ತು.

ಈ ಸುದ್ದಿಯನ್ನೂ ಓದಿ: Miss Universe Karnataka: ಮಿಸ್‌ ಯೂನಿವರ್ಸ್‌ ಕರ್ನಾಟಕ ಪೇಜೆಂಟ್‌ಗೆ ಕೈ ಜೋಡಿಸಿದ ವಿಶ್ವವಾಣಿ ಟಿವಿ ಸ್ಪೆಷಲ್‌

Miss Universe Karnataka 3 (1)

ಬ್ಯೂಟಿ ಪೇಜೆಂಟ್‌ ವಿವರ

ಸೌಂದರ್ಯ ಸ್ಪರ್ಧೆಯ ಮೊದಲ ಸುತ್ತಿನಲ್ಲಿ, ಫಿನಾಲೆ ತಲುಪಿದ್ದ ಸುಮಾರು 30 ಮಾಡೆಲ್‌ಗಳು, ಇಂಡೋ-ವೆಸ್ಟರ್ನ್‌ ಸೀರೆ ಸ್ಟೈಲಿಂಗ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿದರು. ಈ ಸುತ್ತಿನ ವಿಶೇಷವೆಂದರೇ, ಇಲ್ಲಿ ಸೀರೆಗೆ ಬ್ಲೌಸ್‌ ಬದಲಾಗಿ ಎಲ್ಲರೂ ಆಫ್‌ ಶೋಲ್ಡರ್‌ ಡಿಸೈನರ್‌ ಕಾರ್ಸೆಟ್‌ ಟಾಪ್‌ ಧರಿಸಿದ್ದರು. ಸೀರೆಯುಟ್ಟರೂ ಕೂಡ ಎಲ್ಲರೂ ಗ್ಲಾಮರಸ್‌ ಆಗಿ ಕಾಣಿಸುತ್ತಿದ್ದರು.

ಎರಡನೇ ರೌಂಡ್‌ನಲ್ಲಿ ಮಾಡೆಲ್‌ಗಳು ಗ್ಲಾಮರಸ್‌ ಬೀಚ್‌ ಸೈಡ್‌ ರೆಸಾರ್ಟ್ವೇರ್ಸ್‌ ಧರಿಸಿ, ಸಿನಿಮಾ ನಟಿಯರಂತೆ ಕಾಣಿಸಿಕೊಂಡು, ಹೆಜ್ಜೆ ಹಾಕಿದರು. ಇನ್ನು, ಮೂರನೇ ಸುತ್ತಿನಲ್ಲಿ, ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ ಅವರ ಡಿಸೈನರ್‌ ಎಕ್ಸ್‌ಕ್ಲೂಸಿವ್‌ ಗೌನ್‌ಗಳಲ್ಲಿ ಮನಮೋಹಕವಾಗಿ ಕಾಣಿಸಿಕೊಂಡು, ಜ್ಯೂರಿ ಪ್ಯಾನೆಲ್‌ ಪ್ರಶ್ನೆಗಳಿಗೆ ಉತ್ತರಿಸಿದರು.

Miss Universe Karnataka 2 (1)

ಶೋ ಡೈರೆಕ್ಟರ್‌ ನಂದಿನಿ ಫ್ಯಾಷನ್‌ ಟಾಕ್‌

ಮಿಸ್ ಯುನಿವರ್ಸ್ ಕರ್ನಾಟಕ-2025 ಸೌಂದರ್ಯ ಸ್ಫರ್ಧೆಯಲ್ಲಿ ವಿಜೇತರಾದವರು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಮಿಸ್‌ ಯುನಿವರ್ಸ್‌ ಇಂಡಿಯಾ 2025 ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಯೂ ನಮ್ಮ ವಿಜೇತರನ್ನು ಪ್ರೋತ್ಸಾಹಿಸಲಾಗುವುದು. ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಳ್ಳುವುದು ನಮ್ಮ ಮುಂದಿನ ಗುರಿಯಾಗಿದೆ ಎಂದು ಶೋ ಡೈರೆಕ್ಟರ್‌ ನಂದಿನಿ ನಾಗರಾಜ್ ಹೇಳಿದರು. ಅಲ್ಲದೇ, ವಿಶ್ವವಾಣಿ ಟಿವಿ ಸ್ಪೆಷಲ್‌ ಮೀಡಿಯಾ ಪಾಟ್ನರ್‌ ಆಗಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಜ್ಯೂರಿ ಪ್ಯಾನೆಲ್‌

ಮಿಸ್ ಯುನಿವರ್ಸ್ ಕರ್ನಾಟಕ - 2025ರ ಸೌಂದರ್ಯ ಸ್ಫರ್ಧೆಯ ಫಿನಾಲೆಯಲ್ಲಿ, ಮಿಸ್‌ ಯೂನಿವರ್ಸ್‌ ಇಂಡಿಯಾ ಟೈಟಲ್‌ ವಿಜೇತೆ ರಿಯಾ ಸಿಂಘಾ, ನ್ಯಾಷನಲ್‌ ಡೈರೆಕ್ಟರ್‌ ನಿಖಿಲ್‌ ಆನಂದ್‌, ಮಿಸ್‌ ಯೂನಿವರ್ಸ್‌ ಕರ್ನಾಟಕ 2024 ಟೈಟಲ್‌ ವಿಜೇತೆ ಅವನಿ, ಪೇಜೆಂಟ್‌ನ ಫ್ರಾಂಚೈಸ್‌ ಡೈರೆಕ್ಟರ್‌ ಅಮ್ಜದ್‌ ಖಾನ್‌ ಭಾಗವಹಿಸಿದ್ದರು.

ಮಿಸ್‌ ಯುನಿವರ್ಸ್‌ ಇಂಡಿಯಾ ರಿಯಾ ರಿಯಾಕ್ಷನ್‌

ಮಿಸ್‌ ಯುನಿವರ್ಸ್‌ ಇಂಡಿಯಾ ರಿಯಾ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಬ್ಯೂಟಿ ಪೇಜೆಂಟ್‌ನಲ್ಲಿ ನನಗೆ ಭಾಗವಹಿಸಿದ್ದಕ್ಕೆ ಖುಷಿಯಾಗಿದೆ. ಬೆಂಗಳೂರು ನನಗಿಷ್ಟ. ಇಲ್ಲಿಯವರು ಅಂದುಕೊಂಡದ್ದಕ್ಕಿಂತ ಹೆಚ್ಚು ಬುದ್ದಿವಂತರು ಹಾಗೂ ಫ್ಯಾಷನೆಬಲ್‌ ಆಗಿದ್ದಾರೆ ಎಂದು ತಿಳಿಸಿ, ಶುಭಾಶಯ ಕೋರಿದರು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)