Viral Video: ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಸೈಫುದ್ದೀನ್; ಕಾರಣ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ
ವರದಕ್ಷಿಣೆಗಾಗಿ ಸೈಫುದ್ದೀನ್ ತನ್ನ ಪತ್ನಿ ಸಬೀನಾಳನ್ನು ಕೊಂದು ತುಂಡು ತುಂಡುಗಳಾಗಿ ಕತ್ತರಿಸಿ ಉತ್ತರ ಪ್ರದೇಶದ ಶ್ರಾವಸ್ತಿಯಾದ್ಯಂತ ಎಸೆದು ಅಪರಾಧವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾನೆ. ಆದರೆ ಸಂತ್ರಸ್ತಳ ಸಹೋದರನಿಂದ ಅಪರಾಧ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಪೊಲೀಸರ ವಶದಲ್ಲಿದ್ದಾನೆ.


ಲಖನೌ: ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದ ಸೌರಭ್ ರಜ್‍ಪೂತ್ ಭಯಾನಕ ಕೊಲೆ ಪ್ರಕರಣ ಇನ್ನೂ ಎಲ್ಲರ ಮನಸ್ಸಿನಿಂದ ಮಾಸಿಲ್ಲ. ಅದರ ಬೆನ್ನಲೇ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. 31 ವರ್ಷದ ವ್ಯಕ್ತಿಯೊಬ್ಬ ತನ್ನ 25 ವರ್ಷದ ಪತ್ನಿಯನ್ನು ಕ್ರೂರವಾಗಿ ಕೊಂದು ಆಕೆಯ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಉತ್ತರ ಪ್ರದೇಶದ ಶ್ರಾವಸ್ತಿಯಾದ್ಯಂತ ಎಸೆದು ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ. ಆದರೆ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ಪೊಲೀಸರ ಪ್ರಕಾರ, ಸೈಫುದ್ದೀನ್ ತನ್ನ ಪತ್ನಿ ಸಬೀನಾಳನ್ನು ಲಖನೌಗೆ ಕರೆದುಕೊಂಡು ಹೋದಾಗ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪತ್ನಿಯನ್ನು ಕ್ರೂರವಾಗಿ ಕೊಂದ ಪಾಪಿ ಅವಳ ಶವವನ್ನು ತುಂಡುಗಳಾಗಿ ಕತ್ತರಿಸಿ, ಅದರ ಕೆಲವು ಭಾಗಗಳನ್ನು ಕಾಲುವೆಗೆ ಎಸೆದಿದ್ದಾನೆ. ನಂತರ ಉಳಿದ ಭಾಗವನ್ನು ಶ್ರಾವಸ್ತಿ ಪ್ರದೇಶದ 10 ಕಿ.ಮೀ.ಗಳಷ್ಟು ದೂರದಲ್ಲಿ ಅದನ್ನು ಎಸೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಯ ಸಹೋದರ ಸಲಾವುದ್ದೀನ್ ಆಕೆಗೆ ಕರೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅದೇ ದಿನ, ಸಲಾವುದ್ದೀನ್ ಆಕೆಯ ಮನೆಗೆ ಹೋದಾಗ, ದಂಪತಿ ಲಖನೌಗೆ ಹೋಗಿರುವುದು ತಿಳಿದುಬಂದಿದೆ. ಆದರೆ ಸಂಜೆ ಆರೋಪಿ ಆ ಪ್ರದೇಶದಲ್ಲಿ ಓಡಾಡುತ್ತಿರುವುದನ್ನು ಅವನು ನೋಡಿದ್ದಾನೆ. ಆದರೆ ಅವನ ಸಹೋದರಿಯ ಸುಳಿವು ಸಿಕ್ಕಿರಲಿಲ್ಲ.
ಅನುಮಾನಗೊಂಡ ಸಲಾವುದ್ದೀನ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾನೆ. ಪೊಲೀಸರು ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಪ್ರಶ್ನಿಸಿದಾಗ ಆತ ಅವರನ್ನು ದಾರಿ ತಪ್ಪಿಸುತ್ತಲೇ ಇದ್ದ. ಆದರೆ ಎರಡು ದಿನಗಳ ನಿರಂತರ ವಿಚಾರಣೆಯ ನಂತರ, ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆಕೆಯ ಕೈಯನ್ನು ಸುಟ್ಟು ಹತ್ತಿರದ ತೋಟದಲ್ಲಿ ಬಚ್ಚಿಟ್ಟಿದ್ದಾಗಿಯೂ ಅವನು ಬಹಿರಂಗಪಡಿಸಿದ್ದಾನೆ. ಸುಟ್ಟ ಕೈಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದವರ ಪ್ರಕಾರ, ಆಕೆಯ ಪತಿ ಮತ್ತು ಅತ್ತೆ-ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಇದಕ್ಕಾಗಿಯೇ ಅವನು ಅವಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಒಂದಲ್ಲ... ಎರಡಲ್ಲ... ಬರೋಬ್ಬರಿ 22ರಾಜ್ಯಗಳಲ್ಲಿ ಟೂರ್; ಈ ಫ್ಯಾಮಿಲಿಯ ಟ್ರಾವೆಲಿಂಗ್ ಕ್ರೇಜ್ ನೋಡಿ ನೆಟ್ಟಿಗರು ಫುಲ್ ಫಿದಾ!
ಈ ಹಿಂದೆ ಉತ್ತರಪ್ರದೇಶದ ಮೀರತ್‍ನಲ್ಲಿ ಭಯಾನಕವಾದ ಕೊಲೆ ಪ್ರಕರಣವೊಂದು ನಡೆದಿದ್ದು, ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಕೊಲೆ ಮಾಡಿಸಿದ್ದಳು. ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ನೌಕಾಧಿಕಾರಿ ಸೌರಭ್ ಕುಮಾರ್ ಎಂಬಾತನನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ಪ್ರಿಯಕರ ಸಾಹಿಲ್ ಶುಕ್ಲಾನ ನೆರವಿನಿಂದ ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಳು. ಈ ಪ್ರಕರಣ ಇಡೀ ದೇಶವನ್ನು ತಲ್ಲಣಗೊಳಿಸಿತ್ತು.