ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಎಕ್ಸ್ ಫ್ಯಾಕ್ಟರ್ ಆಟಗಾರನನ್ನು ಆರಿಸಿದ ಮೈಕಲ್ ಕ್ಲಾರ್ಕ್!
ಜೂನ್ 20 ರಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ಭಾರತ ತಂಡಕ್ಕೆ ಕುಲ್ದೀಪ್ ಯಾದವ್ ಎಕ್ಸ್ ಫ್ಯಾಕ್ಟರ್ ಆಟಗಾರ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ತಿಳಿಸಿದ್ದಾರೆ.

ಭಾರತ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಟಗಾರನನ್ನು ಆರಿಸಿದ ಮೈಕಲ್ ಕ್ಲಾರ್ಕ್.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs ENG) ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಹೊಸ ಯುಗ ಆರಂಭವಾಗಲಿದೆ. ಆರ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ದದ ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಗೆ ಕಠಿಣ ಸವಾಲು ಎದುರಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಕೀ ಆಟಗಾರರಾಗಿದ್ದಾರೆ. ಆದರೆ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (Michael Clarke) ಅವರು, ಭಾರತ ತಂಡಕ್ಕೆ ಕುಲ್ದೀಪ್ ಯಾದವ್ (Kuldeep Yadav) ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕುಲ್ದೀಪ್ ಯಾದವ್ ಅವರು ಭಾರತ ತಂಡದಲ್ಲಿ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಏಷ್ಯಾ ನೆಲದಲ್ಲಿ ಭಾರತ ತಂಡಕ್ಕೆ ಕೀ ಬೌಲರ್ ಆಗಿದ್ದಾರೆ. ಆದರೆ, ಫಾಸ್ಟ್ ಬೌಲಿಂಗ್ ಕಂಡೀಷನ್ಸ್ ಇರುವ ಇಂಗ್ಲೆಂಡ್ನಲ್ಲಿ ಅವರ ಚೈನಾಮನ್ ಶೈಲಿಯ ಸ್ಪಿನ್ ಮೋಡಿ ಮಾಡುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೂ ಆಸೀಸ್ ಮಾಜಿ ನಾಯಕ ಕುಲ್ದೀಪ್ ಯಾದವ್ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕುಲ್ದೀಪ್ ಯಾದವ್, ಭಾರತದ ಪರ ಮೂರೂ ಸ್ವರೂಪದಲ್ಲಿ 305 ವಿಕೆಟ್ಗಳನ್ನು ಕಬಳಿಸಿದ್ದಾರೆ.
IND vs ENG: ಮೊದಲ ಟೆಸ್ಟ್ ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ಗೆ ಕೋಚಿಂಗ್ ಜವಾಬ್ದಾರಿ?
ರೆವ್ಸ್ಪೋರ್ಟ್ಸ್ ಜೊತೆ ಮಾತನಾಡಿದ ಮೈಕಲ್ ಕ್ಲಾರ್ಕ್, "ಕುಲ್ದೀಪ್ ಯಾದವ್ ಅವರನ್ನು ನೋಡಲು ನಾನು ಇಷ್ಟಪಡುತ್ತೇನೆ. ಭಾರತ ತಂಡದ ಮೊದಲ ಆಯ್ಕೆಯ ಸ್ಪಿನ್ನರ್ ಆಗಿ ಪ್ರಾಶಸ್ತ್ಯ ನೀಡಲಾಗಿದೆ. ಅವರು ಮ್ಯಾಚ್ ವಿನ್ನರ್ ಹಾಗೂ ಭಾರತ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗಿದ್ದಾರೆ. ಕುಲ್ದೀಪ್ ಯಾದವ್ ಅವರು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರೆ, ಭಾರತ ತಂಡ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ. ಅವರು ಭಾರತ ತಂಡದ ದೊಡ್ಡ ಆಟಗಾರ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅವರು (ಕುಲ್ದೀಪ್ ಯಾದವ್) ಆತ್ಮವಿಶ್ವಾಸದಿಂದ ಕಾಣುತ್ತಿದ್ದಾರೆ ಮತ್ತು ನಾನು ನೋಡಿದಂತೆಯೇ ಉತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಅವರು ಅವಕಾಶಕ್ಕೆ ತುಂಬಾ ಸಿದ್ಧರಾಗಿದ್ದಾರೆ. ಅವರು ದೊಡ್ಡ ವೇದಿಕೆಯನ್ನು ಬಯಸುತ್ತಾರೆ ಮತ್ತು ಬೇರೆ ಯಾರಿಗೂ ಸಾಧ್ಯವಾಗದಿದ್ದಾಗ ಭಾರತ ತಂಡದ ಪರ ವಿಕೆಟ್ ತೆಗೆದುಕೊಳ್ಳಬಹುದೆಂದು ನಂಬುತ್ತಾರೆ, ನಿಮಗೆ ಇಂಗ್ಲೆಂಡ್ನಲ್ಲಿ ಆ ಆಟಗಾರರು ಬೇಕು," ಎಂದು ಅವರು ಹೇಳಿದ್ದಾರೆ.
IND vs ENG: ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಸಂಜಯ್ ಬಾಂಗರ್!
ಇಂಗ್ಲೆಂಡ್ನಲ್ಲಿ ಕುಲ್ದೀಪ್ ಯಾದವ್ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿಲ್ಲ. 2018ರ ಪ್ರವಾಸದ ವೇಳೆ ಲಾರ್ಡ್ಸ್ ಅಂಗಣದಲ್ಲಿ ಕುಲ್ದೀಪ್ ಯಾದವ್ ಆಡಿದ್ದರು, ಆದರೆ ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ ಹಾಗೂ ಒಂದೇ ಒಂದು ವಿಕೆಟ್ ಕೂಡ ಪಡೆದಿರಲಿಲ್ಲ. ಆದರೆ, ಅವರು ಇದೀಗ ಪ್ರಬುದ್ಧ ಸ್ಪಿನ್ನರ್ ಆಗಿದ್ದು,ರವೀಂದ್ರ ಜಡೇಜಾ ಬದಲು ಮೊದಲ ಆಯ್ಕೆಯ ಸ್ಪಿನ್ನರ್ ಆಗಿ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡಬಹುದು.