Donald Trump: "ಎರಡೂ ದೇಶಗಳು ಜವಾಬ್ದಾರಿಯುತವಾಗಿ ನಿರ್ಣಯ ಕೈಗೊಳ್ಳಿ" ; ಭಾರತ ಪಾಕ್‌ಗೆ ಅಮೆರಿಕ ಸೂಚನೆ
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾಲದಲ್ಲಿ ಅಮೆರಿಕ ಭಾರತ ಹಾಗೂ ಪಾಕಿಸ್ತಾನಕ್ಕೆ ಜವಾಬ್ದಾರಿಯುತರಾಗಿ ನಿರ್ಣಯಗಳನ್ನು ತೆಗೆದುಕೊಳ್ಳಿ ಎಂದು ಹೇಳಿದೆ. ಭಾರತಕ್ಕೆ ಅಮೆರಿಕ ಈಗಾಗಲೇ ತನ್ನ ಬೆಂಬಲವನ್ನು ಘೋಷಿಸಿದೆ. ದಾಳಿ ನಡೆದ ಮರುದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದರು.


ವಾಷಿಂಗ್ಟನ್: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾಲದಲ್ಲಿ ಅಮೆರಿಕ ಭಾರತ ಹಾಗೂ ಪಾಕಿಸ್ತಾನಕ್ಕೆ ಜವಾಬ್ದಾರಿಯುತರಾಗಿ ನಿರ್ಣಯಗಳನ್ನು (Donald Trump) ತೆಗೆದುಕೊಳ್ಳಿ ಎಂದು ಹೇಳಿದೆ. ಏಪ್ರಿಲ್ 22 ರಂದು ನಡೆದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಎರಡೂ ಸರ್ಕಾರಗಳೊಂದಿಗೆ ಹಲವು ಹಂತಗಳಲ್ಲಿ ಸಂಪರ್ಕದಲ್ಲಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ. ಭಾರತಕ್ಕೆ ಅಮೆರಿಕ ಈಗಾಗಲೇ ತನ್ನ ಬೆಂಬಲವನ್ನು ಘೋಷಿಸಿದೆ. ದಾಳಿ ನಡೆದ ಮರುದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದರು.
ಭೀಕರ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಘೋಷಿಸಿತು, ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಯ ಹಿಂದಿನ ಭಯೋತ್ಪಾದಕರು ಮತ್ತು ಪಿತೂರಿಗಾರರನ್ನು ಗುರುತಿಸಿ, ಪತ್ತೆಹಚ್ಚಿ ಶಿಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕಿದೆ. ನಡೆಯುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಅಮೆರಿಕವು ಎರಡೂ ದೇಶಗಳನ್ನು "ಜವಾಬ್ದಾರಿಯುತ ಪರಿಹಾರದತ್ತ ಕೆಲಸ ಮಾಡುವಂತೆ" ಒತ್ತಾಯಿಸಿದೆ.
ಏತನ್ಮಧ್ಯೆ , ಭಾರತದ ಆರೋಪಗಳ ಬಗ್ಗೆ "ನಿಷ್ಪಕ್ಷಪಾತ ತನಿಖೆ" ನಡೆಸಬೇಕೆಂಬ ಪಾಕಿಸ್ತಾನದ ಕರೆಯನ್ನು ಚೀನಾ ಭಾನುವಾರ ಬೆಂಬಲಿಸಿದೆ . ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಕರೆಯ ನಂತರ ಬೀಜಿಂಗ್‌ನ ವಿದೇಶಾಂಗ ಸಚಿವಾಲಯವು ತಟಸ್ಥ ತನಿಖೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದೆ. ಪಹಲ್ಗಾಮ್ ದಾಳಿಯ ಯಾವುದೇ ತಟಸ್ಥ ತನಿಖೆಯಲ್ಲಿ ಭಾಗವಹಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. 2019 ರ ಪುಲ್ವಾಮಾ ನಂತರ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಪಾಕಿಸ್ತಾನ ಮೂಲದ ನಿಷೇಧಿತ ಗುಂಪು ಲಷ್ಕರ್-ಎ-ತೊಯ್ಬಾದ ಪ್ರತಿನಿಧಿಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತಿದೆ.
ಈ ಸುದ್ದಿಯನ್ನೂ ಓದಿ: Ceasefire Across: ಕದನ ವಿರಾಮ ಉಲ್ಲಂಘನೆ; ಪಾಕಿಸ್ತಾನ ಸೇನೆಯಿಂದ LOC ಬಳಿ ನಾಲ್ಕನೆ ದಿನವೂ ಗುಂಡಿನ ದಾಳಿ
ಸದ್ಯ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕ ನೀತಿಯನ್ನು ಅನುಸರಿಸಿ ಬಿಸಿ ಮುಟ್ಟಿಸುತ್ತಿದೆ. ಸಿಂಧೂ ನದಿ ಒಪ್ಪಂದವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ವಾಘಾ ಅಟ್ಟಾರಿ ಮುಚ್ಚಲಾಗಿದ್ದು, ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹೊರ ದಬ್ಬುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಸಿಎಂಗೆ ಕರೆ ನೀಡಿದ್ದಾರೆ.