ಚಿಕ್ಕಬಳ್ಳಾಪುರ ಟಿಎಪಿಸಿಎಂಎಸ್ ಚುನಾವಣೆ ಎನ್ ಡಿ ಎ ಗೆ ಭರ್ಜರಿ ಗೆಲುವು ಮತ್ತೆ ಹಿಡಿತ ಸಾಧಿಸಿದ ಸಂಸದ ಡಾ.ಕೆ.ಸುಧಾಕರ್
ಮಹಿಳಾ ಮೀಸಲು ಕ್ಷೇತ್ರದಲ್ಲಿ ಸುಜಾತ 1869 ಮತಗಳು ಮತ್ತು ಸುಮಾರು 1557 ಮತಗಳು ಪಡೆದು ಜಯಶೀಲರಾಗಿದ್ದಾರೆ. ಬಿಸಿಎಂ ಎ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ನ ಲಕ್ಷ್ಮೀ ನರಸಿಂಹಪ್ಪ 1967 ಮತ ಪಡೆದ ಗೆಲುವು ಸಾಧಿಸಿದ್ದಾರೆ. ಬಿಸಿಎಂ ಬಿ ಮೀಸಲು ಕ್ಷೇತ್ರದಲ್ಲಿ ರಾಕೇಶ್ ಮೋಹನ್ 1971 ಮತಪಡೆದು ಜಯಬೇರಿ ಬಾರಿಸಿದ್ದಾರೆ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಆವಲಕೊಂಡರಾಯಪ್ಪ 1980 ಮತಗಳು ಪಡೆದು ಕೊಳ್ಳುವ ಮೂಲಕ ಎರಡನೇ ಬಾರಿ ಎನ್ ಡಿ ಎ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದಾರೆ

ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆದ್ದ ಎನ್ ಡಿ ಎ ಅಭ್ಯರ್ಥಿಗಳೊಂದಿಗೆ ಎನ್ ಡಿಎ ಮುಖಂಡರು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆ ನಡೆದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಿದ್ದು, ಬಿಜೆಪಿ ಜೆಡಿಎಸ್ ಪಕ್ಷದ ಮೈತ್ರಿ ಜಯಭೇರಿ ಬಾರಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಎ ಕ್ಲಾಸ್ ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಮಾತ್ರ ಗೆಲ್ಲಿಸಿಕೊಂಡಿದ್ದು ಬಿಟ್ಟರೆ ಉಳಿದ 13ರಲ್ಲಿ ಸೋಲು ಕಂಡಿತು. ಒಂದೂವರೆ ವರ್ಷಗಳ ಕಾಲ ತಡವಾಗಿ ನಡೆದ ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅತ್ಯಂತ ಅಧಿಕ ಮತಗಳಿಂದ ಜಯಬೇರಿ ಬಾರಿಸಿದೆ ಎ ಕ್ಲಾಸ್ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೇವಲ ಒಬ್ಬರನ್ನು ಮಾತ್ರ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ಬಿಯಾಗಿದೆ.
ಸಾಮಾನ್ಯ ಕ್ಷೇತ್ರದಲ್ಲಿ ಎಂ ಎಫ್ ಸಿ ನಾರಾಯಣಸ್ವಾಮಿ 1604, ಲಿಂಗಾರೆಡ್ಡಿ 1249 ಹಾಗು ಡಿ.ಪಿ. ಸಂತೋಷ್ 1246 ಮತಗಳಿಸಿ ಗೆಲುವು ಸಾದಿಸಿದ್ದರೆ ಸ್ವತಂತ್ರ ಅಭ್ಯರ್ಥಿ ಕಣಜೇನಹಳ್ಳಿ ಸತೀಶ್ ಕೇವಲ 150 ಮತಗಳಿಂದ ಸೋತಿದ್ದರೂ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗಿಂತ ಮುಂದಿ ದ್ದಾರೆ.
ಇನ್ನು ಮಹಿಳಾ ಮೀಸಲು ಕ್ಷೇತ್ರದಲ್ಲಿ ಸುಜಾತ 1869 ಮತಗಳು ಮತ್ತು ಸುಮಾರು 1557 ಮತಗಳು ಪಡೆದು ಜಯಶೀಲರಾಗಿದ್ದಾರೆ. ಬಿಸಿಎಂ ಎ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ನ ಲಕ್ಷ್ಮೀ ನರಸಿಂಹಪ್ಪ 1967 ಮತ ಪಡೆದ ಗೆಲುವು ಸಾಧಿಸಿದ್ದಾರೆ. ಬಿಸಿಎಂ ಬಿ ಮೀಸಲು ಕ್ಷೇತ್ರದಲ್ಲಿ ರಾಕೇಶ್ ಮೋಹನ್ 1971 ಮತಪಡೆದು ಜಯಬೇರಿ ಬಾರಿಸಿದ್ದಾರೆ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಆವಲಕೊಂಡರಾಯಪ್ಪ 1980 ಮತಗಳು ಪಡೆದುಕೊಳ್ಳುವ ಮೂಲಕ ಎರಡನೇ ಬಾರಿ ಎನ್ ಡಿ ಎ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದಾರೆ.
ಎಸ್ಸಿ ಮೀಸಲು ಕ್ಷೇತ್ರದಲ್ಲಿ ಗೊಳ್ಳು ಈರಚಿನ್ನಪ್ಪ ಎನ್ ಡಿ ಎ ಅಭ್ಯರ್ಥಿಯಾಗಿ ಎರಡನೆ ಬಾರಿಗೆ ಗೆದ್ದು ಬೀಗಿದ್ದಾರೆ ಎ ಕ್ಲಾಸ್ ನ 5 ಅಭ್ಯರ್ಥಿಗಳ ಪೈಕಿ ಜೆ ಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಕೆ ಬಿ ಮುನಿರಾಜು ಮತ್ತು ಎ ರಮೇಶ್ 15ಕ್ಕೆ 14 ಮತಗಳು ಪಡೆಯುವ ಮೂಲಕ ಅತಿ ಹೆಚ್ವು ಮತಗಳಿಸಿ ಭರ್ಜರಿ ಗೆಲುವು ಸಾದಿಸಿದ್ದರೆ ನಾಗರಾಜ್ 13 ಮತ ಮದುಚಂದ್ರ ವಿ 10 ಮತಗಳಿಸಿ ಗೆಲುವು ಸಾಧಿಸಿ ದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿ.ಸಿ.ನಾಗೇಶ್ ಒಬ್ಬರೆ 11 ಮತಪಡೆದು ಪಕ್ಷದ ಮಾನ ಮರ್ಯಾದೆ ಉಳಿಸಿದ್ದಾರೆ.
ಇನ್ನು ಎನ್ ಡಿ ಎ ಪಕ್ಷದ ಅದರಲ್ಲೂ ಸಂಸದ ಡಾ ಕೆ ಸುಧಾಕರ್ ಬಲಗೈ ಬಂಟನೆಂದೆನಿಸಿ ಕೊಂಡಿದ್ದ ಇಡೀ ಚುನಾವಣೆ ನೇತೃತ್ವ ವಹಿಸಿದ್ದ ಮರಳುಕುಂಟೆ ಕೃಷ್ಣಮೂರ್ತಿ ಕೇವಲ 6 ಮತ ಪಡೆಯುವ ಮೂಲಕ ಸೋಲನ್ನೊಪ್ಪಿಕೊಂಡಿದ್ದಾರೆ.
ಗೆದ್ದು ಬೀಗಿದ ಎಲ್ಲ ಅಭ್ಯರ್ಥಿಗಳಿಗೆ ಮುಖಂಡ ಕೆ.ವಿ. ನಾಗರಾಜ್ ಶುಭ ಹಾರೈಸಿ, ಈ ಬಾರಿ ಪಿ ಎಲ್ ಡಿ ಬ್ಯಾಂಕ್,ತಾಲ್ಲೂಕು ಸೊಸೈಟಿ ಚುನಾವಣೆಗಳಲ್ಲಿ ಎನ್ ಡಿ ಎ ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ ನವೀನ್ ಕಿರಣ್ ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ರಾಜಕೀಯ ಚಾಣಾಕ್ಷತನವೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದೆ ಇದು ಮುಂಬರುವ ತಾಲ್ಲೂಕು ಮತ್ತು ಜಿಲ್ಲಾಪಂಚಾಯತಿ ಚುನಾವಣೆಗಳಿಗೆ ಮುನ್ಸೂಚಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಂಗ್ರೇಸ್ ಪಕ್ಷದ ವಿಜೇತ ಅಭ್ಯರ್ಥಿ ಬಿ.ಸಿ.ನಾಗೇಶ್ ಮಾತನಾಡಿ ಕಾಂಗ್ರೇಸ್ ಪಕ್ಷದಿಂದ ನನ್ನನ್ನ ಅಭ್ಯರ್ಥಿ ಮಾಡಿ ಗೆಲ್ಲಿಸಲು ಸಹಕಾರ ನೀಡಿದ ಶಾಸಕ ಪ್ರದೀಪ್ ಈಶ್ಬರ್, ಸಚಿವ ಎಂ.ಸಿ.ಸುಧಾಕರ್ ಹಾಗು ಅಡ್ಡಗಲ್ ಶ್ರೀಧರ್ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇನ್ನೂ ಎನ್ ಡಿ ಎ ಅಭ್ಯರ್ಥಿ ಮತ್ತು ಮುಂಚೂಣಿ ನಾಯಕರಾದ ಮರಳುಕುಂಟೆ ಕೃಷ್ಣಮೂರ್ತಿ ಯವರನ್ನ ಸ್ವ ಪಕ್ಷ ಅಂದ್ರೆ ಬಿಜೆಪಿ ಮುಖಂಡರೆ ಸೋಲಿಸಿ ಮೋಸ ಮಾಡಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಗೆದ್ದ ಅವರ ಶಿಷ್ಯ ನೂತನ ನಿರ್ದೇಶಕ ಲಿಂಗಾರೆಡ್ಡಿ ಕೆಲವು ಮುಖಂಡರ ವಿರುದ್ದ ಕಿಡಿಕಾರಿದರು.
ಇನ್ನೂ ಇಂದು ನಡೆದ ಚುನಾವಣೆಗೆ ಸಂಸದ ಡಾ.ಕೆ.ಸುಧಾಕರ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಆಗಮಿಸಿ ಚುನಾವಣೆ ಪ್ರಕ್ರಿಯೆಗಳನ್ನ ವೀಕ್ಷಿಸಿದರು. ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರ ಮಿಸಿದರು.