ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಮುದಾಯದ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಯೇ ನಮ್ಮ ಸಂಘದ ಧ್ಯೇಯವಾಗಿದೆ

ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ  ೫ ವರ್ಷಗಳ ಆಡಳಿತ ಮಂಡಳಿಗೆ ನೂತನ ಆಡಳಿತ ಮಂಡಳಿ ಇಂದಿನಿAದ ನಿಯಮಗಳಂತೆ ಚಾಲ್ತಿಗೆ ಬಂದಿದೆ.ನಮ್ಮ ಸಂಘವು ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಗೆ ಸೀಮಿತವಾಗಿದ್ದು 130 ಷೇರುದಾರ ರಿದ್ದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದಿದ್ದು ಸಹಕಾರ ಸಂಘಗಳ ನಿಯಮದಂತೆ ಕಾರ್ಯನಿರ್ವಹಿಸಲಿದೆ

ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಎಂ.ರಾಮಪ್ಪ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಜಿ.ಆರ್ ನಾರಾಯಣಸ್ವಾಮಿ ಸೇರಿ ೧೩ ಮಂದಿ ೫ ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

Profile Ashok Nayak Apr 27, 2025 7:19 AM

ಚಿಕ್ಕಬಳ್ಳಾಪುರ : ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇ ಶಕರ ಚುನಾವಣೆಯಲ್ಲಿ ಎಂ.ರಾಮಪ್ಪ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಜಿ.ಆರ್ ನಾರಾಯಣಸ್ವಾಮಿ ಸೇರಿ 13 ಮಂದಿ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಷಂಷು ಮತ್ತು ಎಆರ್‌ಒ ನಾಗರಾಜು ಘೋಷಣೆ ಮಾಡಿದರು. ನಗರದ ಎಂ.ಜಿ.ರಸ್ತೆ ಮರುಳ ಸಿದ್ದೇಶ್ವರ ದೇವಾಲಯ ಎದುರಿನ ಬ್ರಹ್ಮಾಚಾರಿ ಕಟ್ಟಡದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ರಿಟರ್ನಿಂಗ್ ಅಧಿಕಾರಿ ಷಂಷು ಮತ್ತು ಎಆರ್‌ಒ ನಾಗರಾಜು ಅವರು ಕರ್ನಾ ಟಕ ಸಹಕಾರ ಸಂಘಗಳ ನಿಯಮ ೯೬೦ರ ನಿಯಮ-೧೪ಜಿ ನಲ್ಲಿನ ಉಪಬಂಧಾನುಸಾರ ಇವರನ್ನು ಆರಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷರಾಗಿ ಎಂ.ರಾಮಪ್ಪ, ಉಪಾಧ್ಯಕ್ಷರಾಗಿ ಎನ್.ನಾರಾಯಣಸ್ವಾಮಿ(ಜಿ.ಆರ್) ನಿರ್ದೇಶಕರಾಗಿ ಕೆ.ವಿ.ನಾರಾಯಣಸ್ವಾಮಿ, ಕೆ.ವಿ.ಶ್ರೀನಿವಾಸ್, ಎಂ.ರಾಜಬಾಬು,ವಿ.ಮುನಿರಾಜು, ಎಂ.ಎನ್.ನಾಗೇಶ್, ಎಂ.ಎನ್.ಮುನಿರಾಜು, ಜಿ.ವೆಂಕಟಕೃಷ್ಣ,ಎಸ್.ಅಭಿಲಾಷ್,ಡಿ.ಎಂ.ಗಜೇಂದ್ರ, ಕೃಷ್ಣಮೂರ್ತಿ, ರತ್ನಮ್ಮ, ಎಸ್.ಜಯಮ್ಮ ಆಯ್ಕೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಅಧ್ಯಕ್ಷ ಎಂ.ರಾಮಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ  ೫ ವರ್ಷಗಳ ಆಡಳಿತ ಮಂಡಳಿಗೆ ನೂತನ ಆಡಳಿತ ಮಂಡಳಿ ಇಂದಿನಿAದ ನಿಯಮಗಳಂತೆ ಚಾಲ್ತಿಗೆ ಬಂದಿದೆ.ನಮ್ಮ ಸಂಘವು ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಗೆ ಸೀಮಿತವಾಗಿದ್ದು 130 ಷೇರುದಾರ ರಿದ್ದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದಿದ್ದು ಸಹಕಾರ ಸಂಘಗಳ ನಿಯಮದಂತೆ ಕಾರ್ಯನಿರ್ವಹಿಸಲಿದೆ ಎಂದರು.

ಇದನ್ನೂ ಓದಿ: Chikkaballapur News: ಕೆರೆಯಲ್ಲಿ ಮುಳುಗಿ ತಂದೆ-ಮಗಳು ದಾರುಣ ಸಾವು; ಪುತ್ರಿಯನ್ನು ರಕ್ಷಿಸಲು ಹೋಗಿ ದುರಂತ

ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘವು ಪರಿಶಿಷ್ಟಜಾತಿಗೆ ಮಾತ್ರ ಸೀಮಿತವಾಗಿದ್ದು ಸಮುದಾ ಯದ ಅಶಕ್ತರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗು ವುದು. ಸರಕಾರದಿಂದ ದೊರೆಯುವ ಸೌಲತ್ತುಗಳನ್ನು ಕೂಡ ಈ ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ಉಪಾಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ ಮಾತನಾಡಿ ನಮ್ಮ ಸಂಘವು ಕಮ್ಮಗುಟ್ಟಹಳ್ಳಿ ಪಂಚಾ ಯಿತಿ ಬಿಟ್ಟು ತಾಲೂಕಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಭವಿಷ್ಯದಲ್ಲಿ ಜಿಲ್ಲೆಯ ವ್ಯಾಪ್ತಿಗೆ ಇದನ್ನು ವಿಸ್ತರಿಸಲಾಗುವುದು.ಜತೆಗೆ ಪರಿಶಿಷ್ಟಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗೆ ಅವಕಾಶ ನೀಡಲಾಗುವುದು.ಅನಾಥಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಶಿಕ್ಷಣ ನೀಡುವ ಕಸ ಮಾಡಲಾಗುವುದು ಎಂದು ತಿಳಿಸಿದರು.

ಒಟ್ಟಾರೆ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಈ ಮೂಲಕವಾದರೂ ತಾಲೂಕಿನ ಪಜಾತಿ ಸಮುದಾಯಕ್ಕೆ ಆರ್ಥಿಕ ಚೈತನ್ಯ ಬರುವಂತಾದರೆ ಇದರ ಸ್ಥಾಪನೆಗೆ ಬೆಲೆ ಬರಲಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.