ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಶಾಸಕ ಸುಬ್ಬಾರೆಡ್ಡಿ ವಿರುದ್ಧ ರೈತರ ಪ್ರತಿಭಟನೆ

ಶಾಸಕ ಬೆಂಬಲಿಗರ ಒತ್ತಡಕ್ಕೆ ಮಣಿದ ಪಾತಪಾಳ್ಯ ಪೊಲೀಸರು ಕ್ಷಮೆ ಕೋರುವಂತೆ ಡಾ.ಮಧು ಸೀತಪ್ಪಗೆ ದೂರವಾಣಿ ಮೂಲಕ ಸೂಚಿಸುತ್ತಾರೆ, ಕ್ಷಮೆಯಾಚನೆಗೆ ಒಪ್ಪದ ಕಾರಣ ಏ.೨೫ ರಂದು ತಡರಾತ್ರಿ ರಾಜಕೀಯ ಒತ್ತಡಕ್ಕೆ ಮಣಿದ ಪಾತಪಾಳ್ಯ ಠಾಣೆ ಪೊಲೀಸರು ನೀರಾವರಿ ಹೋರಾಟ ಗಾರ ಡಾ.ಮಧುಸೀತಪ್ಪ ಹಾಗೂ ಶಿವಪುರ ರೈತ ಶಾಂತರಾಜು ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುತ್ತಾರೆ.

ಶಾಸಕ ಸುಬ್ಬಾರೆಡ್ಡಿ ವಿರುದ್ಧ ರೈತರ ಪ್ರತಿಭಟನೆ

Profile Ashok Nayak Apr 28, 2025 12:23 PM

ಬಾಗೇಪಲ್ಲಿ : ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ, ಗ್ಯಾದಿವಾಂಡ್ಲಪಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾತಪಾಳ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಮಾಯಿಸಿ ಶಾಸಕ ಸುಬ್ಬಾರೆಡ್ಡಿ ವಿರುದ್ದ ದಿಕ್ಕಾರಗಳು ಕೂಗಿ ಪ್ರತಿಭಟನೆ ನಡೆಸಿದರು. ಹೋರಾಟಗಾರ ಡಾ.ಮುಧುಸೀತಪ್ಪ ಮತ್ತು ಶಾಂತರಾಜು ವಿರುದ್ದ ದಾಖಲು ಮಾಡಿರುವ ಸುಳ್ಳು ಅಟ್ರಾಸಿಟಿ ಕೇಸನ್ನು ವಾಪಸ್ಸು ಪಡೆದು ರೈತರಿಗೆ ಸೂಕ್ತ ಭದ್ರತೆ ಒದಗಿಸಬೇಕು .ರೈತರ ಮೇಲೆ ಗೊಂಡಾಗಿರಿ  ಮಾಡುತ್ತಿರುವ ವಕೀಲ ಚಂದ್ರಶೇಖರರೆಡ್ಡಿ, ಗಿರೀಶ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ಪಿ.ಆರ್.ಜನಾರ್ಧನ್‌ರನ್ನು ಒತ್ತಾಯಿಸಿದರು.

ಘಟನೆ ಹಿನ್ನೆಲೆ...

ಎಎಪಿ ಪಕ್ಷದ ಪರಾಜಿತ ಅಭ್ಯರ್ಥಿ ಹಾಗೂ ಶಾಶ್ವತ ನೀರಾವರಿ ಹೋರಾಟಗಾರ ಡಾ.ಮಧುಸೀತಪ್ಪ ಏ.೨೪ ರಂದು ದಲಿತರ, ಬಡವರ ಜಮೀನುಗಳನ್ನು ಕಬಳಿಸಿ ಭೂ ಹಗರಣಕ್ಕೆ ಮುಂದಾಗಿದ್ದಾರೆಂದು ಶಾಸಕ ಸುಬ್ಬಾರೆಡ್ಡಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುತ್ತಾರೆ, ವಾಟ್ಸ್ ಆಪ್ ಸಂದೇಶಕ್ಕೆ ಕೆರಳಿರುವ ಶಾಸಕರ ಗುಂಪೊಂದು ಏ.24ರಂದು ಸಂಜೆ ಶಿವಪುರ ಗ್ರಾಮದ ಹೊರವಲಯದಲ್ಲಿರುವ ಡಾ.ಮಧುಸೀತಪ್ಪ ಪಾರ್ಮ್ ಹೌಸ್ ಬಳಿ ಹೋಗಿ ದಾಂಧಲೆ ನಡೆಸಿ, ಮಧುಸೀತಪ್ಪಗೆ ಜೀವ ಬೆದರಿಕೆ ಹಾಕಿ ವಾಪಸ್ಸು ಬಂದಿರುತ್ತಾರೆ.

ಇದನ್ನೂ ಓದಿ: Chikkanayakanahalli Accident: ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ

ಶಾಸಕರ ಅನುಯಾಯಿಗಳ ದಾಂಧಲೆಯ ಸಂಪೂರ್ಣ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾ ಗಿದ್ದು, ಸಿಸಿ ಕ್ಯಾಮಾರ ದೃಶ್ಯಾವಳಿಗಳ ಆಧಾರಿತವಾಗಿ ಪಾರ್ಮ್ ಹೌಸ್ ವ್ಯವಸ್ಥಾಪಕ ರಮೇಶ್ ಏ.೨೫ ರಂದು ಬೆಳಗ್ಗೆ ಪಾತಪಾಳ್ಯ ಪೊಲೀಸ್ ಠಾನೆಯಲ್ಲಿ ದೂರು ಸಲ್ಲಿಸಿರುತ್ತಾರೆ, ಕುಪಿತಗೊಂಡ ಶಾಸಕ ಸುಬ್ಬಾರೆಡ್ಡಿ ಬೆಂಬಲಿಗರು ಠಾಣೆಗೆ ಆಗಮಿಸಿ ನಮ್ಮ ಶಾಸಕ ಸುಬ್ಬಾರೆಡ್ಡಿ ವಿರುದ್ದ ಅವಹೇಳನಕಾರಿ ಸಂದೇಶ ಹಂಚಿಕೊಂಡಿರುವ ಡಾ.ಮಧುಸೀತಪ್ಪ ಠಾಣೆಗೆ ಬಂದು ನಮ್ಮಲ್ಲಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಅವರ ವಿರುದ್ದ ಕೇಸು ದಾಖಲಿಸಬೇಕೆಂದು ಪಟ್ಟು ಹಿಡಿಯುತ್ತಾರೆ.

ಶಾಸಕ ಬೆಂಬಲಿಗರ ಒತ್ತಡಕ್ಕೆ ಮಣಿದ ಪಾತಪಾಳ್ಯ ಪೊಲೀಸರು ಕ್ಷಮೆ ಕೋರುವಂತೆ ಡಾ.ಮಧು ಸೀತಪ್ಪಗೆ ದೂರವಾಣಿ ಮೂಲಕ ಸೂಚಿಸುತ್ತಾರೆ, ಕ್ಷಮೆಯಾಚನೆಗೆ ಒಪ್ಪದ ಕಾರಣ ಏ.೨೫ ರಂದು ತಡರಾತ್ರಿ ರಾಜಕೀಯ ಒತ್ತಡಕ್ಕೆ ಮಣಿದ ಪಾತಪಾಳ್ಯ ಠಾಣೆ ಪೊಲೀಸರು ನೀರಾವರಿ ಹೋರಾಟ ಗಾರ ಡಾ.ಮಧುಸೀತಪ್ಪ ಹಾಗೂ ಶಿವಪುರ ರೈತ ಶಾಂತರಾಜು ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುತ್ತಾರೆ.

ವಿಷಯ ತಿಳಿದುಕೊಂಡ ಶಿವಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಸುಳ್ಳು ಅಟ್ರಾಸಿಟಿ ಪ್ರಕರಣವನ್ನು ರದ್ದುಗೊಳಿಸಿ ರೈತರ ತೋಟದ ಮನೆಗಳ ಬಳಿ ಹೋಗಿ ಗೊಂಡಾಗಿರಿ ಮಾಡುತ್ತಿರುವ ಶಾಸಕರ ಬೆಂಬಲಿಗರ ವಿರುದ್ದ ಕೇಸು ದಾಖಲಿಸುವಂತೆ ಪಟ್ಟು ಹಿಡಿದು ಪೊಲೀಸ್ ಠಾಣೆ ಬಳಿ ಪ್ರತಿಭಟನೆಗೆ ಮುಂದಾಗಿರುತ್ತಾರೆ. ಪೊಲೀಸ್ ವೃತ್ತ ನಿರೀಕ್ಷಕ ಪಿ.ಆರ್.ಜನಾರ್ಧನ ರೈತರನ್ನು ಸಮಾಧಾನಗೊಳಿಸಿ ಅಟ್ರಾಸಿಟಿ ಕೇಸು ಖುಲಾಸೆಗೊಳಿಸುವ ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ರೈತರ ಪ್ರತಿಭಟನೆ ನಂತರ ಚಿಕ್ಕಬಳ್ಳಾಪುರ ಪೊಲೀಸ್ ಡಿವೈಎಸ್ಪಿ ಶಿವಪುರ ಬಳಿಯಲ್ಲಿರುವ ಡಾ.ಮುಧುಸೀತಪ್ಪ ಪಾರ್ಮ್ಹೌಸ್‌ಗೆ ಬೇಟಿ ನೀಡಿ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿರುತ್ತಾರೆ.

ಶಿವಪುರ ಸೂರ್ಯನಾರಾಯಣರೆಡ್ಡಿ ಮಾತನಾಡಿ, ಶಿವಪುರ ಗ್ರಾಮದ ಹೊರವಲಯದಲ್ಲಿರುವ ಡಾ.ಮಧುಸೀತಪ್ಪ ಪಾರ್ಮ್ಹೌಸ್ ಬಳಿ ಹೋಗಿರುವ ಶಾಸಕರ ಬೆಂಬಲಿಗರು ಮಧುಸೀತಪ್ಪ ಇಲ್ಲದ ಸಮಯದಲ್ಲಿ ದಾಂಧಲೆ ನಡೆಸಿ, ಗ್ರಾಮದಲ್ಲೆ ಇಲ್ಲದ ಡಾ.ಮಧುಸೀತಪ್ಪ ಮೇಲೆ ಸುಳ್ಳು ಅಟ್ರಾಸಿಟಿ ಕೇಸು ದಾಖಲಿಸಿರುವ ಮಾದರಿಯಲ್ಲಿ ನಾವು ಕೊಟ್ಟಿರುವ ಅಟ್ರಾಸಿಟಿ ಕೇಸನ್ನು ದಾಖಲಿಸಿಕೊಂಡು ನ್ಯಾಯ ಓದಗಿಸಬೇಕು, ಹಲವು ಕ್ರಿಮಿನಲ್ ಕೇಸುಗಳಲ್ಲಿ ಆರೋಪಿಗಳಾಗಿರುವವರು ಕೊಟ್ಟಿರುವ ದೂರುನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾಸಕರ ಮೌಖಿಕ ಅದೇಶ ದಂತೆ ರೈತರು ನೀಡುವ ದೂರುಗಳನ್ನು ಸ್ವೀಕರಿಸದೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.

ಈ ಪ್ರತಿಭಟನೆಯಲ್ಲಿ ಶೀಗಲಪಲ್ಲಿ ರಾಜಣ್ಣ, ಮೋಹನ್‌ರೆಡ್ಡಿ, ರೆಡ್ಡಪ್ಪ, ಉತ್ತನ್ನ, ಮದ್ದಿರೆಡ್ಡಿ, ಸೋಮು, ಸಿದ್ದೇಶ್, ಲಕ್ಷ್ಮೀನಾರಾಯಣ, ನಾರಾಯಣಸ್ವಾಮಿ, ಲಕ್ಷ್ಮೀಪತಿ, ರಾಮಾಂಜಿ, ಅಂಜಿನಪ್ಪ, ವೆಂಕಟರಾಮರೆಡ್ಡಿ, ಗಣೇಶ್ ಮತ್ತಿತರರು ಇದ್ದರು.