ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wedding Fashion: ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಲುಕ್‌

Wedding Fashion: ಈ ಸಮ್ಮರ್‌ನ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಗೋಲ್ಡನ್‌ ಲುಕ್‌ ಅಂದರೆ, ಗೋಲ್ಡನ್‌ ಫ್ಯಾಷನ್‌ವೇರ್‌ ಹಾಗೂ ಬಂಗಾರ ವರ್ಣದ ಸೀರೆ ಸ್ಟೈಲಿಂಗ್‌ ಟ್ರೆಂಡಿಯಾಗಿದೆ. ಸಾವಿರ ಜನರ ಮಧ್ಯೆಯೂ ಎದ್ದು ಕಾಣುವಂತಹ ಈ ಗ್ರ್ಯಾಂಡ್‌ ಲುಕ್‌ ಇದೀಗ ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಯುವತಿಯರನ್ನು ಆಕರ್ಷಿಸಿದೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.‌

ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಲುಕ್‌

ಚಿತ್ರಕೃಪೆ: ಪಿಕ್ಸೆಲ್‌

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಸಮ್ಮರ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಗೋಲ್ಡನ್‌ ಲುಕ್‌ ಟ್ರೆಂಡಿಯಾಗಿದೆ. ಇದು ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಯುವತಿಯರನ್ನು ಆವರಿಸಿಕೊಂಡಿದೆ. ಬಂಗಾರ ವರ್ಣದ ನಾನಾ ಬಗೆಯ ರೇಷ್ಮೆ ಸೀರೆಗಳು, ಬ್ರೈಟ್‌ ಗೋಲ್ಡನ್‌ ಲೇಯರ್‌ ಲುಕ್‌ನ ಎಥ್ನಿಕ್‌ ಗೌನ್‌ಗಳು, ಮ್ಯಾಜಿಕಲ್‌ ಗೋಲ್ಡ್‌ ಶೇಡ್ಸ್‌ ಲೆಹೆಂಗಾ-ಗಾಗ್ರಾಗಳು, ಚಿನ್ನದ ಕುಸುರಿಯ ಶರಾರ ಹಾಗೂ ದಾವಣಿ-ಲಂಗದಂತಹ ಸ್ಕರ್ಟ್ಸ್ ಹಾಗೂ ಡಿಸೈನರ್‌ವೇರ್‌ಗಳು ಸೇರಿದಂತೆ ಬಂಗಾರ ವರ್ಣದಲ್ಲೆ ಮಿಂದೆದ್ದ ಗೋಲ್ಡನ್‌ ಲುಕ್‌ ನೀಡುವ ನಾನಾ ಬಗೆಯ ಉಡುಗೆಗಳು ಈ ಸಾಲಿನ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ (Wedding Fashion) ಟಾಪ್‌ ಸ್ಥಾನ ಗಳಿಸಿವೆ. ಇವುಗಳೊಂದಿಗೆ ಗೋಲ್ಡನ್‌ ವರ್ಣದಲ್ಲೆ ವೈವಿಧ್ಯಮಯ ಶೇಡ್ಸ್‌ನ ಜರತಾರಿ ಬಾರ್ಡರ್‌, ಕುಂದನ್‌-ಕಲಾಂಕಾರಿಯ ಕುಸುರಿ, ಹ್ಯಾಂಡ್‌ ಎಂಬ್ರಾಯ್ಡರಿ ಹೊಂದಿರುವಂತಹ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳು ಕೂಡ ಗ್ರ್ಯಾಂಡ್‌ ಲುಕ್‌ ಟ್ರೆಂಡ್‌ಗೆ ವಾಪಾಸ್ಸಾಗಿವೆ ಎನ್ನುತ್ತಾರೆ ಡಿಸೈನರ್‌ ಸಮನ್ಯು.‌

1

ವೆಡ್ಡಿಂಗ್‌ನಲ್ಲಿ ರಾಯಲ್‌ ಲುಕ್‌ ಗ್ಯಾರಂಟಿ

ಗೋಲ್ಡನ್‌ ಬಣ್ಣದ ಉಡುಪುಗಳು ರಾಯಲ್‌ ಲುಕ್‌ ನೀಡುತ್ತವೆ. ಸಾಮಾನ್ಯ ಹುಡುಗಿಯು ಸೆಲೆಬ್ರೆಟಿಯಂತೆ ಕಂಗೊಳಿಸುತ್ತಾಳೆ. ಇದು ಮುಖದ ಬಣ್ಣವನ್ನು ರಿಫ್ಲೆಕ್ಟ್ ಮಾಡುತ್ತದೆ ಮಾತ್ರವಲ್ಲ, ಕಾಂತಿ ಹೆಚ್ಚುವಂತೆ ಮಾಡುತ್ತದೆ ಎನ್ನುತ್ತಾರೆ ಮಾಡೆಲ್‌ ದೀಪ್ತಿ. ಇನ್ನು ಫ್ಯಾಷನ್‌ಲೋಕದಲ್ಲಿ ಗೋಲ್ಡ್‌ ಅತ್ಯುತ್ತಮ ಶೇಡ್ಸ್‌. ಇದರಲ್ಲೆ ಸಾಕಷ್ಟು ಶೇಡ್ಸ್‌ ಲಭ್ಯ. ಅದರಲ್ಲೂ ಪಾರ್ಟಿವೇರ್‌ ಬಣ್ಣಗಳಾದ ಬ್ರೈಟ್‌ ಹಾಗೂ ಲೈಟ್‌ ಗೋಲ್ಡನ್‌, ಕಾಪರ್‌ ಗೋಲ್ಡ್‌, ರೋಸ್‌ ಗೋಲ್ಡ್‌ ಡಿಸೈನರ್‌ ಗೌನ್‌ಗಳು ವೆಡ್ಡಿಂಗ್‌ ಪಾರ್ಟಿಯ ರಂಗೇರಿಸುತ್ತವೆ. ಅಷ್ಟು ಮಾತ್ರವಲ್ಲ, ಗ್ಲಾಮರ್‌ ಹೆಚ್ಚಿಸುತ್ತವೆ ಎನ್ನುತ್ತಾರೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳಾದ ದೀಕ್ಷಾ ಹಾಗೂ ನಿಸರ್ಗ.

ರಾಜ ಮನೆತನದ ಕೊಡುಗೆ

ಮೊದಲೆಲ್ಲಾ ಗೋಲ್ಡನ್‌ ಬಣ್ಣ ಎಂದಾಕ್ಷಣ ಅದು ಸೀಮಿತ ವರ್ಗಕ್ಕೆ ಮೀಸಲಾಗಿತ್ತು. ಅದರಲ್ಲೂ ರಾಜ ಮನೆತನದವರು ಮಾತ್ರ ಬಳಸುವ ಉಡುಪುಗಳು ಎನ್ನಲಾಗುತ್ತಿತ್ತು. ಬರಬರುತ್ತಾ ಸೆಲೆಬ್ರೆಟಿಗಳು ಸಿನಿಮಾದಲ್ಲಿ ಬಳಸಲಾರಂಭಿಸಿದರು. ಪರಿಣಾಮ, ಗೋಲ್ಡನ್‌ ಬಾರ್ಡರ್‌ ಇರುವ ಸೀರೆ, ಗಾಗ್ರ, ಚೋಲಿಗಳು ಪ್ರಚಲಿತಕ್ಕೆ ಬಂದವು. ಮಕ್ಕಳ ಫ್ಯಾಷನ್‌ನಲ್ಲೂ ಸಮ್ಮಿಲನಗೊಂಡವು. ಇದೀಗ ನಾನಾ ಬಗೆಯ ವಿನ್ಯಾಸದ ಉಡುಪಿನ ಡಿಸೈನ್‌ಗೆ ತಕ್ಕಂತೆ ಡಿಸೈನರ್‌ಗಳು ಗೋಲ್ಡನ್‌ ವರ್ಣವನ್ನು ಮಿಕ್ಸ್‌ ಮಾಡುತ್ತಿದ್ದಾರೆ ಎನ್ನುತ್ತಾರೆ ಹಿರಿಯ ಡಿಸೈನರ್‌ಗಳು.

2

ಸೆಲೆಬ್ರೆಟಿ ಲುಕ್‌

ಗೋಲ್ಡನ್‌ ವರ್ಣವನ್ನು ನೀವು ಸೂಕ್ತ ಡಿಸೈನ್‌ನಲ್ಲಿ ಮ್ಯಾಚ್‌ ಮಾಡಿ ಧರಿಸಿದಲ್ಲಿ ಸೆಲೆಬ್ರೆಟಿ ಲುಕ್‌ ತಮ್ಮದಾಗಿಸಿಕೊಳ್ಳಬಹುದು. ಅಷ್ಟೇಕೆ! ಗೋಲ್ಡನ್‌ ವರ್ಣದ ಸೀರೆಯಲ್ಲಿ ಥೇಟ್‌ ದೇವತೆಯಂತೆ ಕಂಗೊಳಿಸಬಹುದು. ಅದಕ್ಕಾಗಿ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಷ್ಟೇ ಎನ್ನುತ್ತಾರೆ ಡಿಸೈನರ್‌ ಜಾನ್‌. ಭಾರತೀಯರ ಚರ್ಮದ ಅಂದಕ್ಕೆ ಹೊಂದುವಂತಹ ಗೋಲ್ಡ್‌ ಶೇಡ್ಸ್‌ ಸೆಲೆಕ್ಟ್ ಮಾಡಬೇಕು. ಎಲ್ಲಾ ಸೀಸನ್‌ಗಳಿಗೂ ಈ ವರ್ಣ ಸೂಟ್‌ ಆಗುವುದಿಲ್ಲ. ಆಯಾ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಉಡುಪಿನ ಶೈಲಿಯಲ್ಲಿ ಈ ವರ್ಣವನ್ನು ಬಳಸಬಹುದು ಎನ್ನುತ್ತಾರೆ.

ಈ ಸುದ್ದಿಯನ್ನೂ ಓದಿ | Resortwear Fashion: ಸಮ್ಮರ್‌ನಲ್ಲಿ ರೆಸಾರ್ಟ್‌ವೇರ್‌ ಫ್ಯಾಷನ್‌ ಹಂಗಾಮ

ಗೋಲ್ಡನ್ ಲುಕ್‌ಗ ಸಿಂಪಲ್‌ ಟಿಪ್ಸ್‌

  • ಕುಳ್ಳಗಿರುವವರು ಆದಷ್ಟು ಗೋಲ್ಡನ್‌ ವರ್ಣದ ಸೀರೆಗಿಂತ ಸಲ್ವಾರ್‌ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
  • ಉದ್ದಗಿರುವವರು ಯಾವುದನ್ನು ಧರಿಸಿದರೂ ಚೆನ್ನಾಗಿ ಕಾಣಿಸುತ್ತಾರೆ.
  • ಕೃಷ್ಣ ವರ್ಣದವರು ಆದಷ್ಟು ಬ್ರೈಟ್‌ ಗೋಲ್ಡನ್‌ ಡ್ರೆಸ್‌ ಅವಾಯ್ಡ್‌ ಮಾಡಬೇಕು .
  • ಸೀರೆಯಲ್ಲಾದರೆ ಉತ್ತಮ ಶೇಡ್ಸ್‌ ನ ಗೋಲ್ಡ್‌ ಬಣ್ಣ ಆಯ್ಕೆ ಮಾಡುವುದು ಒಳಿತು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)