ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Car Bomb Explosion: ಕಾರ್ ಬಾಂಬ್ ಸ್ಫೋಟಕ್ಕೆ ರಷ್ಯಾದ ಹಿರಿಯ ಸೈನ್ಯಾಧಿಕಾರಿ ಬಲಿ- ಶಾಕಿಂಗ್‌ ವಿಡಿಯೊ ಇಲ್ಲಿದೆ

Russian General Yaroslav Moskalyk:ರಷ್ಯಾದ ಸೇನೆಯ ಜನರಲ್ ಸ್ಟಾಫ್‌ನ ಕಾರ್ಯಾಚರಣೆಯ ಉಪ ಮುಖ್ಯಸ್ಥ ಯಾರೋಸ್ಲಾವ್ ಮೊಸ್ಕಾಲಿಕ್ ಮಾಸ್ಕೋದ ಹೊರವಲಯದ ಬಲಾಶಿಖಾ ಪಟ್ಟಣದಲ್ಲಿ ಅಪಾರ್ಟ್‌ಮೆಂಟ್ ಬಳಿ ಸ್ಫೋಟಕ ಸಾಧನ ಬ್ಲಾಸ್ಟ್‌ ಆಗಿ ಮೃತಪಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಸ್ಫೋಟದ ಕ್ಷಣವನ್ನು ತೋರಿಸುತ್ತದೆ.

ಕಾರ್ ಬಾಂಬ್ ಸ್ಫೋಟಕ್ಕೆ ರಷ್ಯಾದ ಹಿರಿಯ ಸೈನ್ಯಾಧಿಕಾರಿ ಬಲಿ

Profile Rakshita Karkera Apr 25, 2025 10:45 PM

ಮಾಸ್ಕೋ: ರಷ್ಯಾದ ಸೇನೆಯ (Russian Army) ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಕಾರ್ ಬಾಂಬ್ ಸ್ಫೋಟದಲ್ಲಿ (Car Bomb Blast) ಮೃತಪಟ್ಟಿದ್ದಾರೆ. ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡ ದಾಳಿಗಳ ಸರಣಿಯಲ್ಲಿ ಇದು ಇತ್ತೀಚಿನ ಘಟನೆಯಾಗಿದೆ. ರಷ್ಯಾದ ಸೇನೆಯ ಜನರಲ್ ಸ್ಟಾಫ್‌ನ ಕಾರ್ಯಾಚರಣೆಯ ಉಪ ಮುಖ್ಯಸ್ಥ ಯಾರೋಸ್ಲಾವ್ ಮೊಸ್ಕಾಲಿಕ್ (Yaroslav Moskalik), ಮಾಸ್ಕೋದ ಹೊರವಲಯದ ಬಲಾಶಿಖಾ ಪಟ್ಟಣದಲ್ಲಿ ಅಪಾರ್ಟ್‌ಮೆಂಟ್ ಬಳಿ ಸ್ಫೋಟಕ ಸಾಧನ ಬ್ಲಾಸ್ಟ್‌ ಆಗಿ ಮೃತಪಟ್ಟರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಸ್ಫೋಟದ ಕ್ಷಣವನ್ನು ತೋರಿಸುತ್ತದೆ. ಮೊಸ್ಕಾಲಿಕ್ ಹಾದುಹೋಗುವಾಗ ನಿಂತಿದ್ದ ವಾಹನವೊಂದು ಬೆಂಕಿಹೊತ್ತಿಕೊಂಡಿರುವುದನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ, ಕಾರಿನಲ್ಲಿ ಬಾಂಬ್ ಅಳವಡಿಸಲಾಗಿತ್ತು ಮತ್ತು ಅದನ್ನು ರಿಮೋಟ್ ಮೂಲಕ ಸ್ಫೋಟಿಸಲಾಯಿತು. ಸ್ಥಳೀಯವಾಗಿ ವಾಸಿಸುತ್ತಿದ್ದ ಈ ಜನರಲ್, ಸ್ಫೋಟ ಸಂಭವಿಸಿದಾಗ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಸ್ಫೋಟದಿಂದ ವಾಹನವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಸ್ಫೋಟದ ವಿಡಿಯೊ ಇಲ್ಲಿದೆ



ಉಕ್ರೇನ್ ಈ ಹಿಂದೆ ರಷ್ಯಾದ ಮಿಲಿಟರಿ ಅಧಿಕಾರಿಗಳನ್ನು ಅವರ ಸ್ವದೇಶದಲ್ಲೇ ಕೊಲೆಗೈದ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಕಳೆದ ಡಿಸೆಂಬರ್‌ನಲ್ಲಿ, ಕ್ರೆಮ್ಲಿನ್‌ನ ಪರಮಾಣು ಶಸ್ತ್ರಾಸ್ತ್ರದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಇಂತಹದ್ದೇ ಕಾರ್ ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟಿದ್ದರು. ಈ ದಾಳಿಗೆ ಯಾವುದೇ ಗುಂಪು ಜವಾಬ್ದಾರಿಯನ್ನು ಹೊತ್ತಿಲ್ಲವಾದರೂ, ಉಕ್ರೇನ್‌ನ ಭಾಗಿಯಾದ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಷ್ಯಾದ ಅಧಿಕಾರಿಗಳು ಈ ದಾಳಿಯ ತನಿಖೆಯನ್ನು ಆರಂಭಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Russia Ukraine War: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕೇರಳದ ವ್ಯಕ್ತಿ ಸಾವು; ಸಂಬಂಧಿಕರಿಗೆ ಗಂಭೀರ ಗಾಯ

ಈ ದಾಳಿಯು ರಷ್ಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಸಂಭವಿಸಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ಅಂತಾರಾಷ್ಟ್ರೀಯ ಪ್ರಯತ್ನಗಳ ಹೊರತಾಗಿಯೂ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ವೈಮಾನಿಕ ದಾಳಿಗಳನ್ನು ಮುಂದುವರಿಸಿದ್ದಕ್ಕಾಗಿ ಖಂಡಿಸಿದ್ದಾರೆ.