Shobha Shetty: ಇನ್ನೂ ಮದುವೆನೇ ಆಗಿಲ್ಲ: ಮೊದಲ ವರ್ಷದ ಎಂಗೇಜ್ಮೆಂಟ್ ಆ್ಯನಿವರ್ಸರಿ ಆಚರಿಸಿದ ಶೋಭಾ ಶೆಟ್ಟಿ
Shobha Shetty engagement: ಮೂಲತ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. ಕಾರ್ತಿಕ ದೀಪಂ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯೊಂದಿಗೆ ಕಳೆದ ವರ್ಷ ಇದೇ ದಿನ ಎಂಗೇಜ್ಮೆಂಟ್ ಕೂಡ ಆಗಿತ್ತು.

Shobha Shetty

ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಶೋಭಾ ಶೆಟ್ಟಿ (Shobha Shetty) ಇದೀಗ ನಿಶ್ಚಿತಾರ್ಥ ಆ್ಯನಿವರ್ಸರಿಯ ಸಂಭ್ರಮದಲ್ಲಿದ್ದಾರೆ. ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಇವರು ಒಂಬತ್ತನೇ ವಾರ ಮನೆಯಿಂದ ಹೊರಹೋದರು. ಎಲಿಮಿನೇಷನ್ನಿಂದ ಪಾರಾದರೂ ತನ್ನ ಸ್ವ-ಇಚ್ಚೆಯ ಮೇಲೆ ಶೋಭಾ ಅವರು ಬಿಗ್ ಬಾಸ್ ತೊರೆದರು. ಅನಾರೋಗ್ಯದ ಕಾರಣ ಇವರು ಅರ್ಧಕ್ಕೆ ಶೋನಿಂದ ಹಿಂದೆ ಸರಿದರು.
ಈ ಹಿಂದೆ ತೆಲುಗು ಬಿಗ್ಬಾಸ್ ಸೀಸನ್ 7 ರಲ್ಲಿ ಕೂಡ ಶೋಭಾ ಭಾಗಿಯಾಗಿದ್ದರು. ಅಲ್ಲಿ ತಮ್ಮ ಜಗಳ, ಮಾತುಗಳ ಮೂಲಕವೇ ಜನಪ್ರಿಯ ಆಗಿದ್ದರು. ಮೂಲತ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. ಕಾರ್ತಿಕ ದೀಪಂ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯೊಂದಿಗೆ ಕಳೆದ ವರ್ಷ ಇದೇ ದಿನ ಎಂಗೇಜ್ಮೆಂಟ್ ಕೂಡ ಆಗಿತ್ತು.
ಹೌದು, ಯಶವಂತ್ ರೆಡ್ಡಿ ಜತೆ ಕಳೆದ ವರ್ಷ ಇದೇ ದಿನ ಶೋಭಾ ಎಂಗೇಜ್ ಆಗಿದ್ದರು. ಇವರ ಎಂಗೇಜ್ಮೆಂಟ್ಗೆ ಏಪ್ರಿಲ್ 25ರಂದು ಮೊದಲ ಅನಿವರ್ಸರಿಯ ಖುಷಿ. ಯಶವಂತ್ ರೆಡ್ಡಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಹಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆ ಸುರಿಸಿದ್ದಾರೆ.
ಇನ್ಸ್ಟಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿ, ಹೇ ಪಾಪು ಮಾ, ನಮ್ಮ ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವ. ನಾವು ಭೇಟಿಯಾಗಿ ಸುಮಾರು 5 ವರ್ಷಗಳಾಗಿವೆ. ಅಂತ್ಯವಿಲ್ಲದ ಪ್ರೀತಿ. ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಶುಭಾಶಯಗಳು ಮೈ ಲವ್ ಎಂದು ಶೋಭಾ ಬರೆದುಕೊಂಡಿದ್ದಾರೆ. ಮುದ್ದಾದ ಜೋಡಿ ಯಶವಂತ್ ರೆಡ್ಡಿ ಜೊತೆಗಿನ ಶೋಭಾ ಫೋಟೋ ನೋಡಿ ಫ್ಯಾನ್ಸ್ ಕೂಡ ಶುಭಕೋರಿದ್ದಾರೆ. ನೂರು ಕಾಲ ಜೊತೆಯಾಗಿ ಬಾಳಿ, ಮದುವೆ ಯಾವಾಗ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಮನೆಯೊಳಗೆ ಚೆನ್ನಾಗಿಯೇ ಆಡುತ್ತಿದ್ದ ಶೋಭಾ ಬಳಿಕ ಮೌನವಾಗಿದ್ದರು. ಆರೋಗ್ಯದ ಕಾರಣಗಳನ್ನು ನೀಡಿ ಶೋನಿಂದ ಹೊರಗೆ ಹೋಗಲು ನಿರ್ಧರಿಸಿದ್ದರು. ಚೆನ್ನಾಗಿ ಆಡುತ್ತಿದ್ದ ಇವರಿಗೆ ಏನಾಯ್ತು ಎಂದು ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇನ್ನು ಇದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶೋಭಾ ಶೆಟ್ಟಿ ಅವರು ತನ್ನ ಬಾಯ್‌ಫ್ರೆಂಡ್ ಯಶವಂತ್ ರೆಡ್ಡಿ ಬಗ್ಗೆಯೂ ಮಾತನಾಡಿದ್ದರು. ಇವರಿಬ್ಬರೂ ಧಾರಾವಾಹಿ ಜೊತೆಗೆ ಹಲವು ಶಾರ್ಟ್ ಫಿಲ್ಮ್‌ಗಳಲ್ಲೂ ಜತೆಯಾಗಿ ನಟಿಸಿದ್ದಾರೆ. ಸದ್ಯದಲ್ಲೇ ಈ ಜೋಡಿ ಕಡೆಯಿಂದ ಮದುವೆ ಡೇಟ್ ಬಗ್ಗೆ ಅಪ್‌ಡೇಟ್ ಸಿಗಲಿದೆ.
Bhagya Lakshmi Serial: ತಾಂಡವ್ ಆಫೀಸಲ್ಲಿ ಭಾಗ್ಯಂಗೆ ಸಿಕ್ತು ಭಾರೀ ಗೌರವ: ದಂಗಾದ ಶ್ರೇಷ್ಠಾ