CSK vs SRH: ಐಪಿಎಲ್ ಟೂರ್ನಿಯಲ್ಲಿ ಅಪರೂಪದ ದಾಖಲೆ ಬರೆದ ಮೊಹಮ್ಮದ್ ಶಮಿ!
Mohammed Shami creates history: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ನಾಲ್ಕನೇ ಬಾರಿ ಐಪಿಎಲ್ ಇನಿಂಗ್ಸ್ನ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.



ಇತಿಹಾಸ ಬರೆದ ಮೊಹಮ್ಮದ್ ಶಮಿ
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಮೊಹಮ್ಮದ್ ಶಮಿ ಅವರು ಐಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಮೊದಲನೇ ಎಸೆತದಲ್ಲಿಯೇ ವಿಕೆಟ್ ಕಿತ್ತ ಶಮಿ
ಮುಂಬೈ ಇಂಡಿಯನ್ಸ್ ಪಂದ್ಯದಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ಲೇಯಿಂಗ್ XIನಲ್ಲಿ ಕಣಕ್ಕೆ ಇಳಿದರು. ಪಂದ್ಯದಲ್ಲಿ ಬೌಲ್ ಮಾಡಿದ ಮೊಟ್ಟ ಮೊದಲ ಎಸೆತದಲ್ಲಿಯೇ ಶೇಖ್ ರಶೀದ್ ಅವರ ವಿಕೆಟ್ ಅನ್ನು ಕಿತ್ತರು.

ಅಪರೂಪದ ದಾಖಲೆ ಬರೆದ ಶಮಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೊಟ್ಟ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ನಾಲ್ಕನೇ ಬಾರಿ ಐಪಿಎಲ್ ಇನಿಂಗ್ಸ್ನ ಮೊಟ್ಟ ಮೊದಲ ಎಸೆತದಲ್ಲಿಯೇ ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ.

ಕೊನೆಯ ಬಾರಿ ಫಿಲ್ ಸಾಲ್ಟ್ ಔಟ್ ಮಾಡಿದ್ದ ಶಮಿ
2014ರಲ್ಲಿ ಜಾಕ್ ಕಾಲಿಸ್, 2022ರಲ್ಲಿ ಕೆಎಲ್ ರಾಹುಲ್ ಹಾಗೂ 2023ರಲ್ಲಿ ಫಿಲ್ ಸಾಲ್ಟ್ ಅವರನ್ನು ಐಪಿಎಲ್ ಇನಿಂಗ್ಸ್ನ ಮೊಟ್ಟ ಮೊದಲ ಎಸೆತಗಳಲ್ಲಿಯೇ ಮೊಹಮ್ಮದ್ ಶಮಿ ಔಟ್ ಮಾಡಿದ್ದರು. ಆ ಮೂಲಕ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ಐಪಿಎಲ್ ಇನಿಂಗ್ಸ್ನ ಮೊದಲ ಎಸೆತದಲ್ಲಿ ಹೆಚ್ಚು ಬಾರಿ ವಿಕೆಟ್ ಕಿತ್ತ ಬೌಲರ್ಗಳು
ಮೊಹಮ್ಮದ್ ಶಮಿ: 4
ಉಮೇಶ್ ಯಾದವ್: 3
ಟ್ರೆಂಟ್ ಬೌಲ್ಟ್: 3
ಪ್ರವೀಣ್ ಕುಮಾರ್: 3
ಲಸಿತ್ ಮಾಲಿಂಗ: 3
ಭುವನೇಶ್ವರ್ ಕುಮಾರ್: 3
ಅಶೋಕ ದಿಂಡಾ: 3

113 ವಿಕೆಟ್ ಕಿತ್ತಿರುವ ಶಮಿ
2013ರಲ್ಲಿ ಐಪಿಎಲ್ ವೃತ್ತಿ ಜೀವನ ಆರಂಭಿಸಿದ್ದ ಮೊಹಮ್ಮದ್ ಶಮಿ ಇಲ್ಲಿಯ ತನಕ ವಿವಿಧ ಫ್ರಾಂಚೈಸಿಗಳ ಪರ 118 ಪಂದ್ಯಗಳನ್ನು ಆಡಿದ್ದಾರೆ. ಆ ಮೂಲಕ 113 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇನ್ನು ಪ್ರಸಕ್ತ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಶಮಿ, 8 ಪಂದ್ಯಗಳಿಂದ 6 ವಿಕೆಟ್ಗಳನ್ನು ಕಿತ್ತಿದ್ದಾರೆ.