Surbhi Chandna: ನಾಗಿನಿ ಸೀರಿಯಲ್ ನಟಿಯ ನ್ಯೂ ಲುಕ್! ಮಿನಿ ಡ್ರೆಸ್ನಲ್ಲಿ ಫುಲ್ ಮಿಂಚಿಂಗ್
ಹಿಂದಿ ಕಿರುತೆರೆ ನಟಿ ಸುರಭಿ ಚಂದನ ನಟನೆ ಮಾತ್ರವಲ್ಲದೆ ವೈಯಕ್ತಿಕ ವಿಚಾರದಲ್ಲೂ ಸುದ್ದಿಯಲ್ಲಿರುತ್ತಾರೆ. ನಾಗಿಣಿ 5 ಸೀರಿಯಲ್ ಮೂಲಕ ಖ್ಯಾತಿ ಪಡೆದಿದ್ದ ನಟಿ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಹೆಚ್ಚು ಬೋಲ್ಡ್ ಮತ್ತು ಹಾಟ್ ಲುಕ್ ನಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುವ ನಟಿ ಆಗಾಗ ವಿಡಿಯೋ ಹಾಗೂ ರೀಲ್ಸ್ ಮಾಡಿ ತಮ್ಮ ಖಾತೆ ಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಫ್ಲವರ್ ಡಿಸೈನ್ ಇರುವ ಮಿನಿ ಮಾಡರ್ನ್ ಡ್ರೆಸ್ ನಲ್ಲಿ ಸಕತ್ ಆಗೇ ಮಿಂಚಿದ್ದಾರೆ.



ನಟಿ ಸುರಭಿ ಚಂದನಾ ಇತ್ತೀಚಿನ ಫೋಟೋವೊಂದು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ನಟಿ ಲಿಲಾಕ್ ಫ್ಲವರ್ ವಿನ್ಯಾಸ ಇರುವ ಡ್ರೆಸ್ ನಲ್ಲಿ ಮಿಂಚಿದ್ದು ಈ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ಒಂದು ಉಡುಗೆಯೂ ಬೇಸಿಗೆ ಕಾಲಕ್ಕೆ ಪರ್ಫೆಕ್ಟ್ ಸೆಲೆಕ್ಷನ್ ಎಂಬಂತಿದೆ.

ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಮೂಲಕ ನಟಿ ಸುರಭಿ ಚಂದನಾ ತಮ್ಮ ಕ್ಯೂಟ್ ಫೋಟೊಗಳನ್ನು ಹಂಚಿ ಕೊಂಡಿದ್ದು ಇವರ ನ್ಯೂ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಲಿಯಾ ಕ್ಲೋಥಿಂಗ್ ಕಂಪೆನಿಯ ನೀಲಿ ಬಣ್ಣದ ಫ್ಲೋರಲ್ ಡಿಸ್ಲೈನ್ ಇರುವ ಡ್ರೆಸ್ ಧರಿಸಿದ್ದಾರೆ. ಈ ಮಿನಿ ಡ್ರೆಸ್ ನಲ್ಲಿ ಸುರಭಿ ಸಕತ್ ಮಾಡರ್ನ್ ಆಗಿ ಕಂಗೊಳಿಸಿದ್ದಾರೆ. ಇದು ಸ್ಲೀವ್ ಲೆಸ್ ಮಾದರಿಯಾಗಿದ್ದು ಇದರಲ್ಲಿ ಬ್ಲೂ , ಪೀಚ್ ಮತ್ತು ಎಲ್ಲೋ ಕಲ್ಲರ್ ಫ್ಲವರ್ ವಿನ್ಯಾಸ ಬಹಳಷ್ಟು ಟ್ರೆಂಡಿ ಲುಕ್ ನೀಡಿದೆ. ಈ ಸಿಲೋಯೆಟ್ ಮಿನಿ ಸ್ಕರ್ಟ್ ನಟಿಗೆ ಕ್ಯೂಟ್ ಲುಕ್ ನೀಡುವಂತೆ ಮಾಡಿದೆ.

ನಟಿ ಡ್ರೆಸ್ ಗೆ ತಕ್ಕಂತೆ ಹೊಂದಿಕೊಳ್ಳುವ ಸಿಂಪಲ್ ಮೇಕಪ್ ಮಾಡಿದ್ದಾರೆ. ಕಣ್ಣಿಗೆ ಲೈನರ್, ಮಸ್ಕರಾ ಹಾಕಿ ಲೈಟ್ ಮೇಕಪ್ ಮಾಡಿಕೊಂಡಿದ್ದಾರೆ. ಡ್ರೆಸ್ ಗೆ ಹೊಂದಿ ಕೊಳ್ಳುವಂತೆ ಗ್ಲೋವಿಂಗ್ ಮೇಕಪ್ ಮಾಡಿ ಫ್ರಿ ಹೇರ್ ಸ್ಟೈಲ್ ಮಾಡಿದ್ದಾರೆ. ಇವರು ಹಾಕಿದ್ದ ಪಿಂಕ್ ಲಿಪ್ಸ್ಟಿಕ್ ಇವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುವಂತಿದೆ.

ನಟಿ ಸುರಭಿ ತಮ್ಮ ಬಟ್ಟೆಗೆ ಹೋಲುವಂತಹ ಜ್ಯುವೆಲ್ಲರಿ ಆಯ್ಕೆ ಮಾಡಿಕೊಂಡಿದ್ದು ಉಡುಗೆಗೆ ಸರಿ ಸಾಟಿ ಎಂಬಂತಿದೆ. ಕ್ಲಾಸಿಕ್ ವಿನ್ಯಾಸದ ಕಿವಿಯೋಲೆ, ಸಿಂಪಲ್ ಪೆಂಡೆಂಟ್ ಹೊಂದಿದ್ದ ಚೈನ್ ಎಲ್ಲವೂ ಇವರ ಸಹಜ ಸೌಂದರ್ಯಕ್ಕೆ ಮೆರುಗು ನೀಡುವಂತಿದೆ. ನಟಿ ಇನ್ ಸ್ಟಾಗ್ರಾ ಮ್ ನಲ್ಲಿ 6 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದು ಈ ಫೋಟೊ ಭರ್ಜರಿ ಲೈಕ್ ಪಡೆದಿದ್ದು ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ.

ಅಭಿಮಾನಿಯೊಬ್ಬರು ನಾಗಿನಿಯ ಲುಕ್ ಮನಸ್ಸು ಕದ್ದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ನಟನೆಯನ್ನು ನಾವು ಮಿಸ್ ಮಾಡುತ್ತಿದ್ದೇವೆ, ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ಬನ್ನಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ನಟಿ ಅಹೋತ್, ಕಾಬೂಲ್ ಹೈ, ಸಂಜೀವಿನಿ ಟಿವಿಶೋ ಮಾತ್ರವಲ್ಲದೆ ಬಾಬಿ ಜಾಸೋನ್ ಸಿನಿಮಾದಲ್ಲಿಯೂ ಅಭಿನಯಿಸಿ ದ್ದಾರೆ. ಇದರ ಜೊತೆಗೆ ವೆಬ್ ಸರಣಿ ಮತ್ತು ಮ್ಯೂಸಿಕಲ್ ಇವೆಂಟ್ ನಲ್ಲಿಯೂ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ.