ಕನ್ನಡ ಭವನದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಸಚಿವ ಡಾ.ಎಂ.ಸಿ.ಸುಧಾಕರ್
12 ಕೋಟಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಕಾಮಗಾರಿ ಪೂರ್ಣಗೊಳ್ಳುವಾಗ 18.20 ಕೋಟಿ ತಲುಪಿದೆ. ಈ ಭವನ ಇಷ್ಟೊಂದು ಸುಂದರವಾಗಿ ಮೂಡಿ ಬರುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರಣವಾಗಿ ದ್ದಾರೆ. ೭ ಕೋಟಿ ಅನುದಾನ ಬಿಡುಗಡೆ ಮಾಡಲು ಬೇಕಾದ ಎಲ್ಲಾ ನೆರವನ್ನು ಕೊಟ್ಟಿದ್ದಾರೆ. ಹೀಗಾಗಿಯೇ ರಾಜ್ಯದ ಗಮನ ಸೆಳೆಯುವ ರೀತಿ ಅತ್ಯಾಧುನಿಕವಾಗಿ ಭವನ ಎದ್ದು ನಿಂತಿದೆ

ಕನ್ನಡ ಭವನದ ಲೋಪಾರ್ಪಣೆಯನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ನೆರವೇರಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಾಥ್ ನೀಡಿದ ಜಾನಪದ ಕಲಾತಂಡಗಳ ಅಮೋಘ ಪ್ರದರ್ಶನ : ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕಿಕ್ಕಿರಿದ ನೂತನ ಕನ್ನಡ ಭವನ ಸಭಾಂಗಣ : ಖುರ್ಚಿಗಳಿಗಾಗಿ ಪರದಾಟ
ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನಕ್ಕೆ ಹಿಡಿದಿದ್ದ ಸುಧೀರ್ಘ ಗ್ರಹಣ ಬಿಡಲು 11 ವರ್ಷಗಳೇ ಬೇಕಾದವು. ಕುಂತಿ ಮಕ್ಕಳಿಗೆ ಅಧಿಕಾರ ಸಿಕ್ಕಿತು ಎಂಬಂತೆ ಅಂತೂ ಇಂತೂ ದೀರ್ಘ ವನವಾಸಕ್ಕೆ ಅಂತ್ಯಹಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರ ಸಾರಥ್ಯ ಶಾಸಕ ಪ್ರದೀಪ್ ಈಶ್ವರ್ ಅಧ್ಯಕ್ಷತೆಯಲ್ಲಿ ಆದಿಚುಂಚನಗಿರಿ ಶ್ರೀಮಠದ ಪೀಠಾ ಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ತಮ್ಮ ಅಮೃತ ಹಸ್ತದಿಂದ ಕನ್ನಡ ಭವನ ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಮಾಡಿದರು.
ಈ ಹಿಂದೆ ಎರಡು ಬಾರಿ ಲೋಕಾರ್ಪಣೆಗೆ ದಿನಾಂಕ ನಿಗದಿ ಮಾಡಿದ್ದರೂ ಕೊನೇ ಗಳಿಗೆ ಯಲ್ಲಿ ರದ್ಧಾಗಿದ್ದ ಹಿನ್ನೆಲೆಯಲ್ಲಿ ಈಬಾರಿಯೂ ಕೂಡ ನಡೆಯುತ್ತೋ ಇಲ್ಲವೋ ಎಂಬ ಗುಮಾನಿ ಸಾರ್ವಜನಿಜಕ ವಲಯದಲ್ಲಿ ದಟ್ಟವಾಗಿ ಹಬ್ಬಿತ್ತು.ಮೂರನೇ ಬಾರಿ ಯಾವುದೇ ಅನಾನುಕೂಲ ವಿಲ್ಲದೆ ನಿರ್ವಿಘ್ನವಾಗಿ ಭವನದ ಲೋಕಾರ್ಪಣೆ ಕಾರ್ಯಕ್ರಮ ಸುಸೂತ್ರ ವಾಗಿ ನಡೆಸಿದ್ದು ಸಾಹಿತ್ಯಾಭಿಮಾನಿಗಳ ಹರ್ಷಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಕನ್ನಡ ಭವನ ಲೋಕಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ 2014ರಲ್ಲಿ ಪ್ರಾರಂಭವಾಗಿದ್ದ ಕನ್ನಡ ಭವನದ ಕಾಮಗಾರಿ ಪೂರ್ಣ ಗೊಳ್ಳಲು 11 ವರ್ಷ ತೆಗೆದುಕೊಂಡಿದೆ ಎಂಬುದನ್ನು ಕೇಳಿದಾಗ ಬೇಸರವಾಗಿದ್ದು ನಿಜ. ನನ್ನ ಅವಧಿಯಲ್ಲಿ ಇದಕ್ಕೆ ಮುಕ್ತಿ ಕಾಣಿಸಬೇಕು ಎಂದು ಸಂಕಲ್ಪ ಮಾಡಿದಷ್ಟೇ ಅಲ್ಲದೆ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ವಿಶ್ವಾಸ ಸಾಧಿಸಿ 18.20 ಕೋಟಿ ವೆಚ್ಚದಲ್ಲಿ ಭವವ ನಿರ್ಮಾಣ ಮಾಡಿ ಲೋರ್ಕಾಪಣೆ ಮಾಡಲಾಗಿದೆ. ನನ್ನ ಜೀವನದಲ್ಲಿ ಇದೊಂದು ಸಂತೋಷದ ಗಳಿಗೆಯಾಗಿದೆ ಎಂದರು.
12 ಕೋಟಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಕಾಮಗಾರಿ ಪೂರ್ಣಗೊಳ್ಳುವಾಗ 18.20ಕೋಟಿ ತಲುಪಿದೆ.ಈಭವನ ಇಷ್ಟೊಂದು ಸುಂದರವಾಗಿ ಮೂಡಿ ಬರುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರಣವಾಗಿದ್ದಾರೆ.೭ಕೋಟಿ ಅನುದಾನ ಬಿಡುಗಡೆ ಮಾಡಲು ಬೇಕಾದ ಎಲ್ಲಾ ನೆರವನ್ನು ಕೊಟ್ಟಿದ್ದಾರೆ.ಹೀಗಾಗಿಯೇ ರಾಜ್ಯದ ಗಮನ ಸೆಳೆಯುವ ರೀತಿ ಅತ್ಯಾಧುನಿಕವಾಗಿ ಭವನ ಎದ್ದು ನಿಂತಿದೆ ಎಂದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಮೊದಲಾ ಗಿದೆ. ಚಿಮುಲ್ ಪ್ರತ್ಯೇಕವಾದ ಬೆನ್ನಿಗೆ ೯ ಕಾಲು ಎಕರೆ ಭೂಮಿಯನ್ನು ತೋಟಗಾರಿಕೆ ಇಲಾಖೆಯಿಂದ ಪಡೆದು ಚಿಮುಲ್‌ಗೆ ನೀಡಲಾಗಿದ್ದು ಇಲ್ಲಿ ಪಾಕೆಟ್ ಯೂನಿಟ್ ಸ್ಥಾಪಿ ಸುವ ಗುರಿಯಿದೆ. 20 ಎಕರೆ ಭೂಮಿಯಲ್ಲಿ ಅತ್ಯಾಧುನಿಕ ಹೂವಿನ ಮಾರುಕಟ್ಟೆ ನಿರ್ಮಿ ಸಲು ಕ್ರಮ ವಹಿಸಲಾಗಿದೆ. ಜೂನ್ ತಿಂಗಳಲ್ಲಿ 200 ಕೋಟಿ ವೆಚ್ಚದಲ್ಲಿ ಶಿಡ್ಲಘಟ್ಟ ದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡುವರು. ಶೀಘ್ರದಲ್ಲಿಯೇ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಡುಕೊಳ್ಳಲಾಗುವುದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯನ್ನು ನಮ್ಮ ಸರಕಾರ ಅವಧಿಯಲ್ಲಿಯೇ ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ ಶುದ್ಧಕುಡಿಯುವ ನೀರನ್ನು ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಉಪ ಮುಖ್ಯಮಂತ್ರಿಗಳು ಮುತುವರ್ಜಿವಹಿಸಿದ್ದು ಕೊಟ್ಟ ಭರವಸೆ ಈಡೇರಿಸ ಲಾಗುವುದು ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಹೈನುಗಾರರಿಗೆ ನೀಡಬೇಕಿದ್ದ ಪ್ರೋತ್ಸಾಹ ಧನದ ಬಾಕಿ 750 ಕೋಟಿಯಿತ್ತು. ನಮ್ಮ ಸರಕಾರ ಬಂದ ಮೇಲೆ ಇದನ್ನು ತೀರಿಸುವ ಕೆಲಸ ಮಾಡು ತ್ತಿದ್ದೇವೆ ಎಂದ ಅವರು ೩೦೦ ಕೋಟಿ ಹೆಚ್ಚುವರಿ ಅನುದಾನದಲ್ಲಿ ಮೆಡಿಕಲ್ ಕಾಲೇಜು ಅಭಿವೃದ್ಧಿ ಪಡಿಸಿ ಸಾರ್ವಜನಿಕ ಬಳಕೆಗೆ ಮುಕ್ತ ಮಾಡಲಾಗುವುದು ಎಂದರು.
ಭವನದ ಲೋಕಾರ್ಪಣೆ ಜೆತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 10ನೇ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸಂತೋಷ ತಂದಿದೆ.ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯ ಸಾಹಿತಿಗಳ ಕೊಡುಗೆ ಅಪಾರ.ಕುವೆಂಪು ಸಾರಿರುವ ಮನುಜ ಮತ ವಿಶ್ವಮಥ ಹಾದಿಯಲ್ಲಿ ಸಾಗಲು ನಾವೆಲ್ಲಾ ಕಟಿಬದ್ಧರಾಗೋಣ ಎನ್ನುವ ಮೂಲಕ ಮಾತು ಮುಗಿಸಿದರು.
ಈ ವೇಳೆ ಶಾಸಕ ಪ್ರದೀಪ್ ಈಶ್ವರ್,ಚುಂಚಶ್ರೀ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಸಚಿವ ಶಿವಶಂಕರ್‌ರೆಡ್ಡಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೇಶವ ರೆಡ್ಡಿ, ನಗರ ಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿ ರಂಗಪ್ಪ, ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ, ಜನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಲಿ ಶಿವಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಶೋಕ್ ಎನ್ ಛಲವಾದಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಪ್ರಕಾಶ್ ನಿಟ್ಟಾಲಿ, ಎಸ್ಪಿ ಕುಶಾಲ್ ಚೌಕ್ಸೆ ಇದ್ದರು.