ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kirana Hills: ಪಾಕ್‌ನ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಾಗಾರ ಕಿರಾನ ಬೆಟ್ಟದ ಮೇಲೆ ದಾಳಿ ನಡೆಸಿಲ್ಲ; ಭಾರತೀಯ ಸೇನೆಯಿಂದ ಸ್ಪಷ್ಟನೆ

ʼʼನಾವು ಪಾಕಿಸ್ತಾನದ ಪರಮಾಣು ಸಂಗ್ರಹದ ತಾಣ ಪಂಜಾಬ್‌ನ ಕಿರಾನ ಬೆಟ್ಟವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲʼʼ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಾರತೀಯ ಪಡೆಗಳು ಪಾಕಿಸ್ತಾನದ ಪರಮಾಣು ಸಂಗ್ರಹ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂಬ ವದಂತಿಯನ್ನು ನಿರಾಕರಿಸಿದ್ದಾರೆ.

ಪಾಕ್‌ನ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೆ ದಾಳಿ ನಡೆಸಿಲ್ಲ

ಕಿರಾನ ಬೆಟ್ಟ.

Profile Ramesh B May 12, 2025 5:34 PM

ಹೊಸದಿಲ್ಲಿ: ʼʼನಾವು ಪಾಕಿಸ್ತಾನದ ಪರಮಾಣು ಸಂಗ್ರಹದ ತಾಣ ಪಂಜಾಬ್‌ನ ಕಿರಾನ ಬೆಟ್ಟವನ್ನು (Kirana Hills) ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲʼʼ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ತಿಳಿಸಿದರು. ಆಪರೇಷನ್‌ ಸಿಂದೂರ್‌ (Operation Sindoor) ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತೀಯ ಪಡೆಗಳು ಪಾಕಿಸ್ತಾನದ ಪರಮಾಣು ಸಂಗ್ರಹ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂಬ ವದಂತಿ ಸೋಶಿಯಲ್‌ ಮೀಡಿಯಾದಲ್ಲಿ ಹರಡಿದ್ದು, ಇದನ್ನು ಎ.ಕೆ. ಭಾರ್ತಿ ನಿರಾಕರಿಸಿದರು.

ಕಿರಾನ ಬೆಟ್ಟದಲ್ಲಿ ಪಾಕಿಸ್ತಾನ ಪ್ರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ ಎನ್ನುವುದನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದರು. ಆ ಮೂಲಕ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು. ʼʼಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಕಿರಾನ ಬೆಟ್ಟದಲ್ಲಿ ಸಂಗ್ರಹಿಸಿಟ್ಟಿದೆ ಎಂದು ತಿಳಿಸಿದ್ದಕ್ಕಾಗಿ ಧನ್ಯವಾದ. ಇದು ನಮ್ಮ ಗುರಿಯಾಗಿರಲಿಲ್ಲ. ಇದು ಎಲ್ಲಿದೆ ಎನ್ನುವುದೇ ನಮಗೆ ತಿಳಿದಿರಲಿಲ್ಲʼʼ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Operation Sindoor: ಪಾಕ್‌ನ ಯಾವುದೇ ಯುದ್ಧ ವಿಮಾನ ದೇಶದೊಳಗೆ ಪ್ರವೇಶಿಸಿಲ್ಲ; ಭಾರತೀಯ ಸೇನೆ



ಸರ್ಗೋಧಾ ಏರ್‌ ಬೇಸ್‌ ಸಮೀಪದಲ್ಲಿರುವ ಕಿರಾನ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಭೂಕಂಪದ ಚಿತ್ರಗಳನ್ನು ಇದಕ್ಕೆ ಜೋಡಿಸಿ ಸುಳ್ಳುಸುದ್ದಿಯನ್ನು ಹರಿಯ ಬಿಡಲಾಗುತ್ತಿದೆ.

ಕಿರಾನ ಬೆಟ್ಟಗಳು ವಿಶಾಲವಾದ ಕಲ್ಲಿನ ಪರ್ವತ ಶ್ರೇಣಿಯಾಗಿದ್ದು, ಇದು ಸರ್ಗೋಧ ಜಿಲ್ಲೆಯಲ್ಲಿದೆ. ಪಾಕಿಸ್ತಾನದ ರಕ್ಷಣಾ ಸಚಿವಾಲಯದ ಸುಪರ್ದಿಯಲ್ಲಿರುವ ಈ ಪ್ರದೇಶ ರಬ್ವಾ ಪಟ್ಟಣ ಮತ್ತು ಸರ್ಗೋಧ ನಗರದ ನಡುವೆ ವ್ಯಾಪಿಸಿದೆ. ಕಿರಾನಾ ಬೆಟ್ಟ ಸರ್ಗೋಧಾ ವಾಯುನೆಲೆಯಿಂದ 20 ಕಿ.ಮೀ. ಮತ್ತು ಕುಶಾಬ್ ಪರಮಾಣು ಸ್ಥಾವರದಿಂದ 75 ಕಿ.ಮೀ. ದೂರದಲ್ಲಿದೆ.

ಇತ್ತೀಚಿನ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾರತೀಯ ಪಡೆಗಳ ಸನ್ನದ್ಧತೆ ಮತ್ತು ಕಾರ್ಯಕ್ಷಮತೆಯನ್ನು ಎ.ಕೆ. ಭಾರ್ತಿ ಎತ್ತಿ ಹಿಡಿದರು. "ಆಕಾಶ್ ವ್ಯವಸ್ಥೆಯಂತಹ ಸ್ಥಳೀಯ ವಾಯು ರಕ್ಷಣಾ ಶಸ್ತ್ರಾಸ್ತ್ರಗಳ ಅದ್ಭುತ ಕಾರ್ಯಕ್ಷಮತೆ ಮತ್ತೊಮ್ಮೆ ಸಾಬೀತಾಗಿದೆʼʼ ಎಂದು ತಿಳಿಸಿದರು. ನಮ್ಮ ಎಲ್ಲ ಸೇನಾ ನೆಲೆಗಳು ಯಾವುದೇ ಪರಿಸ್ಥಿತಿಯಲ್ಲಿ ಎದುರಿಸಲು ಸನ್ನದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನವು ಭಾರತದ ವಿರುದ್ಧ ತನ್ನ ಪರಮಾಣು ಅಸ್ತ್ರಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ. ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರತವು ಮೊದಲು ಬಳಸದ ನೀತಿಯನ್ನು ಅನುಸರಿಸುತ್ತಿದ್ದರೂ, ಪಾಕಿಸ್ತಾನವು ಅಂತಹ ಯಾವುದೇ ಸಂಯಮದ ನೀತಿಯನ್ನು ಹೊಂದಿಲ್ಲ.



ಕರಾಚಿ ಬಂದರನ್ನು ಗುರಿಯಾಗಿಸಿದ್ದ ನೌಕಾ ಸೇನೆ

ಭಾರತೀಯ ನೌಕಾ ನೆಲೆ ಕರಾಚಿ ಬಂದರನ್ನು ಗುರಿಯಾಗಿಸಿಕೊಂಡ ಹಿನ್ನೆಲೆಯಲ್ಲಿ ಪಾಕ್‌ ತುರ್ತಾಗಿ ಕದನ ವಿರಾಮ ಒಪ್ಪಂದಕ್ಕೆ ಮುಂದಾಯಿತೇ ಎನ್ನುವ ಅನುಮಾನ ಈಗ ಮೂಡಿದೆ. ಯಾಕೆಂದರೆ ಮೇ 10ರಂದು ನಡೆದ ಕದನ ವಿರಾಮ ಒಪ್ಪಂದಕ್ಕೆ ಕೆಲವೇ ತಾಸುಗಳ ಹಿಂದೆಯಷ್ಟೇ ಭಾರತೀಯ ನೌಕಾ ಸೇನೆ ಕರಾಚಿಯ ಮೇಲೆ ದಾಳಿ ನಡೆಸಲು ಸಜ್ಜಾಗಿತ್ತು.

ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್-ಅಡ್ಮಿರಲ್ ಎ.ಎನ್.ಪ್ರಮೋದ್ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ "ತುರ್ತು ಕದನ ವಿರಾಮ ವಿನಂತಿ"ಯ ಹಿಂದೆ ಭಾರತೀಯ ನೌಕಾ ಪಡೆ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಹೇಳಿದ್ದರು.

ʼʼಕರಾಚಿ ಬಂದರನ್ನು ಶಸ್ತ್ರಾಸ್ತ್ರ ಪೂರೈಕೆಗಾಗಿ ಬಳಸಿಕೊಂಡಿದ್ದರಿಂದ ಭಾರತ ಅಸಮಾಧಾನಗೊಂಡಿದೆ. ನೌಕಾ ಪಡೆಯು ಆಪರೇಷನ್ ಸಿಂದೂರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಲು ಬಯಸಿತ್ತು. ಅವರು ಕರಾಚಿ ಬಂದರಿನ ಸಂಪೂರ್ಣ ಯೋಜನೆಯನ್ನುಸರ್ಕಾರಕ್ಕೆ ಹಸ್ತಾಂತರಿಸಿತ್ತು. ಕದನ ವಿರಾಮಕ್ಕೂ ಮುನ್ನ ಕರಾಚಿಯನ್ನು ಸಂಪೂರ್ಣ ಸುತ್ತುವರಿಯುವ ಯೋಜನೆ ಇತ್ತುʼʼ ಎಂದು ಮೂಲಗಳು ತಿಳಿಸಿವೆ.