ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs DC: ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಜಿಯೋ ವಿಶೇಷ ಕೊಡುಗೆ

IPL 2025: ಈ ದಿಟ್ಟ ವಿಧಾನವು ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ, ಇದರ ಜತೆಗೆ ಡೇಟಾದ ವೇಗವನ್ನು ಸಹ ಹೆಚ್ಚಿಸಿ, ಸಾಟಿಯಿಲ್ಲದ ಸಂಪರ್ಕವನ್ನು ನೀಡುತ್ತದೆ. ಇದರಿಂದಾಗಿ ಅಭಿಮಾನಿಗಳು ತಮ್ಮ ಲೈವ್ ಅನುಭವಗಳನ್ನು ಅಡೆತಡೆಯಿಲ್ಲದೆ ಹಂಚಿಕೊಳ್ಳಲು ನೆರವಾಗುತ್ತದೆ.

ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಜಿಯೋ ವಿಶೇಷ ಕೊಡುಗೆ

Profile Abhilash BC Apr 9, 2025 2:11 PM

ಬೆಂಗಳೂರು: ಗುರುವಾರ ನಡೆಯುವ ಐಪಿಎಲ್‌(IPL 2025) ಪಂದ್ಯದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌(RCB vs DC) ಮುಖಾಮುಖಿಯಾಗಲಿವೆ. ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರಿಲಯನ್ಸ್ ಜಿಯೋ(Reliance Jio) ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಕ್ರಿಕೆಟ್ ಅಭಿಮಾನಿಗಳು ಬ್ರಾಡ್‌ಬ್ಯಾಂಡ್ ರೀತಿಯ ತಡೆರಹಿತ 5ಜಿ ಸೇವೆಯನ್ನು ಬಳಸಬಹುದಾಗಿದೆ. ಇದಕ್ಕಾಗಿ ಕ್ರೀಡಾಂಗಣದಲ್ಲಿ ಜಿಯೋ 2,000ಕ್ಕೂ ಹೆಚ್ಚು ಸೆಲ್ ನಿಯೋಜಿಸಿದೆ. ಇದು ಮೊಬೈಲ್ ಬ್ರಾಡ್‌ಬ್ಯಾಂಡ್ ಅನುಭವವನ್ನು ಹೆಚ್ಚಿಸಿದೆ.

ಜಿಯೋದ ಸುಧಾರಿತ 5ಜಿ ಸ್ಟ್ಯಾಂಡಲೋನ್ (ಎಸ್‌ಎ) ಆರ್ಕಿಟೆಕ್ಚರ್, ನೆಟ್‌ವರ್ಕ್ ಸ್ಲೈಸಿಂಗ್ ಸಾಮರ್ಥ್ಯ ಹಾಗೂ 5ಜಿ ಕ್ಯಾರಿಯರ್ ಒಗ್ಗೂಡುವುದರಿಂದ ಚಾಲನೆ ಪಡೆಯುವ ಈ ಕಾರ್ಯತಂತ್ರದ ಮೂಲಸೌಕರ್ಯ ಹೂಡಿಕೆಯು ಹೆಚ್ಚಿನ ಸಾಂದ್ರತೆಯ ಜನಸಂದಣಿ ಮತ್ತು ಲೈವ್ ಕ್ರಿಕೆಟ್ ಪಂದ್ಯಗಳಲ್ಲಿ ಹೆಚ್ಚುತ್ತಿರುವ ಡೇಟಾ ಬೇಡಿಕೆಗಳ ಮಧ್ಯೆಯೂ ತಡೆರಹಿತ ಹಾಗೂ ಉತ್ತಮ 5ಜಿ ಕಾರ್ಯಕ್ಷಮತೆ ಖಾತ್ರಿಪಡಿಸುತ್ತದೆ.

ಈ ದಿಟ್ಟ ವಿಧಾನವು ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ, ಇದರ ಜತೆಗೆ ಡೇಟಾದ ವೇಗವನ್ನು ಸಹ ಹೆಚ್ಚಿಸಿ, ಸಾಟಿಯಿಲ್ಲದ ಸಂಪರ್ಕವನ್ನು ನೀಡುತ್ತದೆ. ಇದರಿಂದಾಗಿ ಅಭಿಮಾನಿಗಳು ತಮ್ಮ ಲೈವ್ ಅನುಭವಗಳನ್ನು ಅಡೆತಡೆಯಿಲ್ಲದೆ ಹಂಚಿಕೊಳ್ಳಲು ನೆರವಾಗುತ್ತದೆ.

ಪ್ರಯಾಗರಾಜ್‌ನಲ್ಲಿ ಇತ್ತೀಚೆಗೆ ನಡೆದ ಮಹಾಕುಂಭದಲ್ಲಿ ಅದರ ಕಾರ್ಯಕ್ಷಮತೆಯಿಂದ ಹಿಂದೆಂದೂ ಕಂಡಿರದಂಥ 5ಜಿ ಕಾರ್ಯಕ್ಷಮತೆಯನ್ನು ನೀಡುವ ಬದ್ಧತೆಯು ಮತ್ತಷ್ಟು ದೃಢವಾಗಿದೆ. ಈ ಹಿಂದೆಂದೂ ಕಂಡಿರದಷ್ಟು ದೊಡ್ಡ ಜನಸಂದಣಿ ಈ ಜಾಗತಿಕ ಕಾರ್ಯಕ್ರಮದಲ್ಲಿ ಕಂಡುಬಂದಿತು.

ಓಕ್ಲಾ ವರದಿ ಪ್ರಕಾರ, ಜಿಯೋ ಸರಾಸರಿ ಡೌನ್‌ಲೋಡ್ ವೇಗ 201.87 ಎಂಬಿಪಿಎಸ್ (Mbps) ಅನ್ನು ಸಾಧಿಸಿದ್ದು, ಇದು ಏರ್‌ಟೆಲ್‌ನ 165.23 ಎಂಬಿಪಿಎಸ್ (Mbps) ವೇಗಕ್ಕಿಂತ ಗಮನಾರ್ಹವಾಗಿ ಮೀರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಇದ್ದ ಹೊರತಾಗಿಯೂ ಹೆಚ್ಚಿನ ಟ್ರಾಫಿಕ್ ಇರುವ ಪರಿಸರದಲ್ಲಿ ತನ್ನ ನೆಟ್‌ವರ್ಕ್ ನಾಯಕತ್ವವನ್ನು ಪ್ರದರ್ಶಿಸಿದೆ.

ಇದನ್ನೂ ಓದಿ IPL 2025: ಸಿಎಸ್‌ಕೆ ಪಂದ್ಯದಲ್ಲಿ ಐಪಿಎಲ್‌ ನಿಯಮ ಉಲ್ಲಂಘಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ದಂಡ!

ಐಸಿಸಿ ಕ್ರಿಕೆಟ್ ಫೈನಲ್‌ ಸಮಯದಲ್ಲಿ ನೆಟ್‌ವರ್ಕ್‌ನ ಸಾಮರ್ಥ್ಯ ಮತ್ತು ಪಾರಮ್ಯವನ್ನು ಮತ್ತಷ್ಟು ಪ್ರದರ್ಶಿಸಲಾಯಿತು. ಆ ವೇಳೆ ಜಿಯೋ ಒಂದೇ ದಿನದಲ್ಲಿ ದಾಖಲೆಯ 50 ಕೋಟಿ ಜಿಬಿ ಡೇಟಾ ಟ್ರಾಫಿಕ್ ಅನ್ನು ಪ್ರೊಸೆಸ್ ಮಾಡಿತು. ಇದು ಈ ಹಿಂದೆಂದೂ ಕಂಡಿರದ ಡೇಟಾ ಪರಿಮಾಣಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ತೋರಿಸಿತು. ಜಿಯೋದ ತಾಂತ್ರಿಕ ಸಾಮರ್ಥ್ಯವು ಅದರ ಸಮಗ್ರ ಬೌದ್ಧಿಕ ಆಸ್ತಿ ಪೋರ್ಟ್‌ಫೋಲಿಯೊದಿಂದ ಬೆಂಬಲ ಪಡೆದಿದೆ.

ಇದರಲ್ಲಿ ಸ್ಥಳೀಯ 5ಜಿ ಕೋರ್, ಎಐ/ಎಂಎಲ್ ಪ್ಲಾಟ್‌ಫಾರ್ಮ್‌ಗಳು, ಕ್ಲೌಡ್ ಆರ್ಕೆಸ್ಟ್ರೇಶನ್, ಕ್ಲೌಡ್ ಮೂಲಸೌಕರ್ಯ ನಿಯೋಜನೆ ಮತ್ತು ಕ್ಲೌಡ್-ಸ್ಥಳೀಯ ಪ್ರೋಬಿಂಗ್ ಸಲ್ಯೂಷನ್ ಗಳು ಸೇರಿವೆ. ಅದರ ನೆಟ್‌ವರ್ಕ್ ಮೂಲಸೌಕರ್ಯದ ಮೇಲಿನ ಈ ಮೊದಲಿಂದ ಕೊನೆಯವರೆಗಿನ ನಿಯಂತ್ರಣವು ಸ್ಥಿರವಾಗಿ ಉತ್ತಮ ಮತ್ತು ವಿಶ್ವಾಸಾರ್ಹ 5ಜಿ ಅನುಭವವನ್ನು ನೀಡಲು ಜಿಯೋಗೆ ಅನುವು ಮಾಡಿಕೊಡುತ್ತದೆ.