ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಮತ್ತೆ ಬಾಲ ಬಿಚ್ಚಿದ ಪಾಕ್‌; ಜಮ್ಮು ಕಾಶ್ಮೀರದಲ್ಲಿ ಡ್ರೋನ್‌ ದಾಳಿ, ಭಾರತೀಯ ಸೇನೆ ಹೇಳಿದ್ದೇನು?

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ (Operation Sindoor) ಗಡಿಯಲ್ಲಿ ಶಂಕಿತ ಡ್ರೋನ್‌ಗಳ ಹಾರಾಟ ಕಂಡು ಬಂದ ಕೂಡಲೇ ಭದ್ರತಾ ಪಡೆಗಳು ಎಚ್ಚೆತ್ತು ಕೊಂಡವು. ಸೋಮವಾರ ಸಂಜೆ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನ ನಿವಾಸಿಗಳು ಆಕಾಶದಲ್ಲಿ ಕೆಂಪು ಗೆರೆಗಳನ್ನು ನೋಡಿದ್ದಾಗಿ ಮತ್ತು ಜೋರಾಗಿ ಸ್ಫೋಟಗಳ ಶಬ್ದ ಕೇಳಿಬಂದಿದ್ದಾಗಿ ತಿಳಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಡ್ರೋನ್‌ ದಾಳಿ; ಭಾರತೀಯ ಸೇನೆ ಹೇಳಿದ್ದೇನು?

Profile Vishakha Bhat May 13, 2025 9:20 AM

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ (Operation Sindoor) ಗಡಿಯಲ್ಲಿ ಶಂಕಿತ ಡ್ರೋನ್‌ಗಳ ಹಾರಾಟ ಕಂಡು ಬಂದ ಕೂಡಲೇ ಭದ್ರತಾ ಪಡೆಗಳು ಎಚ್ಚೆತ್ತು ಕೊಂಡವು. ಸೋಮವಾರ ಸಂಜೆ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನ ನಿವಾಸಿಗಳು ಆಕಾಶದಲ್ಲಿ ಕೆಂಪು ಗೆರೆಗಳನ್ನು ನೋಡಿದ್ದಾಗಿ ಮತ್ತು ಜೋರಾಗಿ ಸ್ಫೋಟಗಳ ಶಬ್ದ ಕೇಳಿಬಂದಿದ್ದಾಗಿ ತಿಳಸಿದ್ದಾರೆ. ನಿನ್ನೆಯ ಪರಿಸ್ಥಿತಿ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಿದೆ. ಡ್ರೋನ್‌ಗಳ ದಾಳಿ ನಡೆಯುತ್ತಿದ್ದಂತೆ ಇಡೀ ನಗರದಲ್ಲಿ ಬ್ಲಾಕ್‌ಔಟ್‌ ಮಾಡಲಾಗಿದೆ.

"ಪ್ರಸ್ತುತ ಯಾವುದೇ ಶತ್ರು ಡ್ರೋನ್‌ಗಳು ವರದಿಯಾಗಿಲ್ಲ" ಎಂದು ಭಾರತೀಯ ಸೇನೆ ತಿಳಿಸಿದೆ, ಸಾಂಬಾ ಬಳಿ ಕಡಿಮೆ ಸಂಖ್ಯೆಯ ಡ್ರೋನ್‌ಗಳು ಕಂಡುಬಂದಿವೆ ಎಂದು ಹೇಳಿಕೆಗಳು ಬಂದಿವೆ. ಏತನ್ಮಧ್ಯೆ, ಪಾಕಿಸ್ತಾನದ ಡಿಜಿಎಂಒ ಅವರು ಭಾರತೀಯ ಸಹವರ್ತಿ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರಿಗೆ ಕರೆ ಮಾಡಿದ ನಂತರ, ಸೋಮವಾರ ಸಂಜೆ ಎರಡೂ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಎರಡನೇ ಸುತ್ತಿನ ಉನ್ನತ ಮಟ್ಟದ ಮಾತುಕತೆ ನಡೆಯಿತು.

ಆಪರೇಷನ್‌ ಸಿಂದೂರ್‌ ಕುರಿತು ಸೋಮವಾರ ರಾತ್ರಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (Narendra Modi) ಉಗ್ರರ ಸಂಹಾರ ಮಾಡಿದ್ದಾಗಿ ತಿಳಸಿದ್ದಾರೆ. ಅಷ್ಟೇ ಅಲ್ಲದೆ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಭಯೋತ್ಪಾದಕ ಅಡಗುತಾಣಗಳನ್ನು ನಾಶ ಪಡಿಸಿ, ನಮ್ಮ ಹೆಣ್ಣು ಮಕ್ಕಳ ಸಿಂದೂರವನ್ನು ಅಳಿಸಿದವರಿಗೆ ಅದರ ಬೆಲೆ ಏನೆಂದು ಗೊತ್ತು ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Sindoor: ನ್ಯೂಕ್ಲಿಯರ್‌ ದಾಳಿ ಬೆದರಿಕೆಗೆ ಭಾರತ ಹೆದರಲ್ಲ; ಪಾಕಿಸ್ತಾನವನ್ನು ಉಗ್ರ ಪೋಷಕ ಎಂದ ಮೋದಿ

ಇತ್ತ ಮೋದಿ ತಮ್ಮ ಭಾಷಣದಲ್ಲಿ ಪಾಕ್‌ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ತನ್ನ ಕುತಂತ್ರಿ ಬುದ್ದಿಯನ್ನು ತೋರಿದೆ. ಪಂಜಾಬ್‌ನ ಜಲಂಧರ್‌ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಾಂಬ ಪ್ರದೇಶಗಳಲ್ಲಿ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಜಲಂಧರ್‌ನ ಸುರನುಸ್ಸಿ ಪ್ರದೇಶದಲ್ಲಿ ಸೋಮವಾರ ರಾತ್ರಿ 9.30 ರ ಸುಮಾರಿಗೆ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ನಂತರ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿ ಹಿಮಾಂಶು ಅಗರ್ವಾಲ್ ತಿಳಿಸಿದ್ದರು.