ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕ್ರಿಕೆಟಿಗ ವೈಭವ್ ಸೂರ್ಯವಂಶಿ ದಾಖಲೆ ಅಪಾಯದಲ್ಲಿದೆ ಎಂದ ನೆಟ್ಟಿಗರು; ಕಾರಣವೇನು ಗೊತ್ತಾ?

2 ವರ್ಷದ ಮಗುವೊಂದು ಸ್ಥಳೀಯ ಕ್ರೀಡಾ ಸ್ಪರ್ಧೆಯಲ್ಲಿ ಕ್ರಿಕೆಟ್ ಆಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ನೋಡಿದ ನೆಟ್ಟಿಗರು ಅವನು ಎರಡನೇ ವೈಭವ್ ಸೂರ್ಯವಂಶಿ ಆಗಲಿದ್ದಾನೆ ಎಂದು ಹೇಳಿದ್ದಾರೆ.

2 ವರ್ಷದ ಪೋರನ ಬ್ಯಾಟಿಂಗ್‌ ಸ್ಟೈಲ್‌ಗೆ ನೆಟ್ಟಿಗರು ಫುಲ್‌ ಫಿದಾ

Profile pavithra May 12, 2025 9:20 PM

ಸಾಮಾನ್ಯವಾಗಿ ಚಿಕ್ಕ ಮಕ್ಕಳು ಚಿಕ್ಕ ಪುಟ್ಟ ಬ್ಯಾಟ್ ಹಿಡಿದು ಕ್ರಿಕೆಟ್ ಆಡುವುದನ್ನು ನಾವು ಕಂಡಿರುತ್ತೇವೆ. ಆದರೆ ಇಲ್ಲೊಂದು ಚಿಕ್ಕ ಮಗು ತನ್ನ ಕ್ರಿಕೆಟ್ ಆಡುವ ಕೌಶಲ್ಯಕ್ಕಾಗಿ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿಯಾಗಿದೆ. ಸ್ಥಳೀಯ ಕ್ರೀಡಾ ಸ್ಪರ್ಧೆಯ ಸಮಯದಲ್ಲಿ ಎರಡು ವರ್ಷದ ಬಾಲಕ ವೃತ್ತಿಪರ ಆಟಗಾರನಂತೆ ಬ್ಯಾಟ್ ಅನ್ನು ಸ್ವಿಂಗ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆದರೆ ಈ ಘಟನೆ ನಡೆದ ಸ್ಥಳವನ್ನು ದೃಢಪಡಿಸಲಾಗಿಲ್ಲ. ಈ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಮಗು ಬ್ಯಾಟ್ ಹಿಡಿದು ಸ್ಟಂಪ್‍ಗಳ ಮುಂದೆ ನಿಂತಿರುವುದು ಸೆರೆಯಾಗಿದೆ. ಬಾಲಕ ಸ್ವಲ್ಪವೂ ಭಯಬೀಳದೆ ಆತ್ಮವಿಶ್ವಾಸದಿಂದ ಬ್ಯಾಟ್ ಹಿಡಿದು ಚೆಂಡು ಹೊಡೆದಿದ್ದಾನೆ. ಅವನ ಸ್ಟೈಲಿಷ್ ಶಾಟ್ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

ಮಗು ಬ್ಯಾಟಿಂಗ್‌ ಮಾಡುತ್ತಿರುವ ವಿಡಿಯೊ ಇಲ್ಲಿದೆ ನೋಡಿ...

ಕೇವಲ 14ನೇ ವಯಸ್ಸಿನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿಯಂತೆಯೇ ಈ ಮಗು ಶೀಘ್ರದಲ್ಲೇ ವೃತ್ತಿಪರ ಕ್ರಿಕೆಟ್‌ ಆಟಗಾರನಾಗಿ ಹೆಸರು ಗಳಿಸಬಹುದು ಎಂದು ಅನೇಕ ನೆಟ್ಟಿರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ವೈಭವ್ ಅವರ ದಾಖಲೆ ಈಗ ಅಪಾಯದಲ್ಲಿದೆ" ಎಂದು ಒಬ್ಬರು ತಮಾಷೆಯಾಗಿ ಹೇಳಿದರೆ, ಮತ್ತೊಬ್ಬರು "ವೈಭವ್, ಈಗ ಭಯಪಡುವ ಸರದಿ ನಿಮ್ಮದಾಗಿದೆ" ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಮೂರನೆಯವರು, "ನಾನು ಕ್ರಿಕೆಟ್ ಅಭಿಮಾನಿ ಅಲ್ಲ, ಆದರೆ ನಾನು ಈ ಪಂದ್ಯಗಳನ್ನು ಎಲ್ಲಿ ನೋಡಬಹುದು?" ಎಂದು ಕೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಟಿವಿ ಲೈವ್‌ನಲ್ಲೇ ಕುಸಿದು ಬಿದ್ದ ಟ್ರಂಪ್ ಸರ್ಕಾರದ ಮಾಜಿ ಅಧಿಕಾರಿ; ಅಷ್ಟಕ್ಕೂ ಆಗಿದ್ದೇನು?

ಐಪಿಎಲ್ 2025ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 14 ವರ್ಷದ ವೈಭವ್ ಸೂರ್ಯವಂಶಿಗಾಗಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಆರ್‌ಆರ್ ತನ್ನ ಹಣವನ್ನು ವ್ಯರ್ಥ ಮಾಡಿದೆ ಎಂದು ಜನರು ಹೇಳಿದ್ದರು. ಆದರೆ ವೈಭವ್ ಸೂರ್ಯವಂಶಿ ಆಟ ನೋಡಿ ಮುಂಬರುವ ಸಮಯದಲ್ಲಿ ಅವನು ಭಾರತವನ್ನು ಆಳಲಿದ್ದಾನೆ ಎಂದು ಹೊಗಳಿದ್ದಾರೆ. ಈ 2 ವರ್ಷದ ಮಗು ಕ್ರಿಕೆಟ್ ಆಟವಾಡುತ್ತಿರುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ವಿಡಿಯೊವನ್ನು ನೋಡಿದ ಮೇಲೆ, ಜನರು ಅವನು ಎರಡನೇ ವೈಭವ್ ಸೂರ್ಯವಂಶಿ ಆಗಲಿದ್ದಾನೆ ಎಂದಿದ್ದಾರೆ.