ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತ- ಪಾಕ್‌ ಸೇನಾ ಜನರಲ್‌ಗಳ ಸಭೆ; ಗಡಿಯಲ್ಲಿ ಸೇನಾಪಡೆ ಕಡಿತಕ್ಕೆ ಒಪ್ಪಿಗೆ

ಎರಡೂ ಕಡೆಯವರು ಒಂದೇ ಒಂದು ಗುಂಡು ಹಾರಿಸಬಾರದು ಅಥವಾ ಯಾವುದೇ ಆಕ್ರಮಣಕಾರಿ ಕ್ರಮ ಆರಂಭಿಸಬಾರದು ಎಂಬ ಬದ್ಧತೆ ಮುಂದುವರಿಕೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಗಡಿ ಮತ್ತಿತರ ಪ್ರದೇಶಗಳಲ್ಲಿ ಸೇನಾಪಡೆ ನಿಯೋಜನೆ ಕಡಿತ ಖಾತ್ರಿಗೆ ಎರಡು ಕಡೆಯವರು ಒಪ್ಪಿಕೊಂಡಿರುವುದಾಗಿ ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ- ಪಾಕ್‌ ಸೇನಾ ಜನರಲ್‌ಗಳ ಸಭೆ; ಗಡಿಯಲ್ಲಿ ಸೇನಾಪಡೆ ಕಡಿತಕ್ಕೆ ಒಪ್ಪಿಗೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 13, 2025 6:59 AM

ನವದೆಹಲಿ: ಭಾರತ (Operation Sindoor) ಮತ್ತು ಪಾಕಿಸ್ತಾನ ನಡುವಿನ (India Pak War) ಕದನ ವಿರಾಮ (Ceasefire) ಘೋಷಣೆ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಸೇನಾ ಜನರಲ್ ಗಳ (DGMO) ಮಹತ್ವದ ಸಭೆ ಸೋಮವಾರ ನಡೆಯಿತು. ಎರಡೂ ಕಡೆಯವರು ಒಂದೇ ಒಂದು ಗುಂಡು ಹಾರಿಸಬಾರದು ಅಥವಾ ಯಾವುದೇ ಆಕ್ರಮಣಕಾರಿ ಕ್ರಮ ಆರಂಭಿಸಬಾರದು ಎಂಬ ಬದ್ಧತೆ ಮುಂದುವರಿಕೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಗಡಿ ಮತ್ತಿತರ ಪ್ರದೇಶಗಳಲ್ಲಿ ಸೇನಾಪಡೆ ನಿಯೋಜನೆ ಕಡಿತ ಖಾತ್ರಿಗೆ ಎರಡು ಕಡೆಯವರು ಒಪ್ಪಿಕೊಂಡಿರುವುದಾಗಿ ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಹಾಟ್ ಲೈನ್ ಮೂಲಕ ಸಭೆ ನಡೆದಿದೆ. ಮೊದಲಿಗೆ ಮಧ್ಯಾಹ್ನ 12ಕ್ಕೆ ಸಭೆ ನಿಗದಿಯಾಗಿತ್ತು. ಆದರೆ, ತದನಂತರ ಸಂಜೆಗೆ ಮುಂದೂಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಉಗ್ರರು ನಡೆಸಿದ ದಾಳಿಯಲ್ಲಿ 26 ಜನರನ್ನು ಬಲಿ ತೆಗೆದುಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದವು.

ಬಳಿಕ ಪಾಕ್ ಪಡೆಗಳು ಭಾರತದ ಗಡಿ ಪ್ರದೇಶಗಳಲ್ಲಿ ನಡೆಸಿದ ಶೆಲ್, ಡ್ರೋನ್ ಹಾಗೂ ಕ್ಷಿಪಣಿ ದಾಳಿಯನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯಿಂದ ಸಮರ್ಥವಾಗಿ ಸೇನೆ ಹಿಮ್ಮೆಟ್ಟಿಸಿದ್ದವು. ನಾಲ್ಕು ರಾತ್ರಿಗಳು ಗಡಿಯಾಚೆ ನಡೆದ ಸೇನಾ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ, ಮೇ 10 ರಂದು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಆಗಿತ್ತು.

ಆಪರೇಶನ್‌ ಸಿಂದೂರ್‌ ಇನ್ನು ಮುಂದೆ ʼನ್ಯೂ ನಾರ್ಮಲ್‌ʼ ಆಗಲಿದೆ. ನ್ಯೂಕ್ಲಿಯರ್‌ ದಾಳಿಯ ಬೆದರಿಕೆಗೆ ಭಾರತ ಜಗ್ಗುವುದಿಲ್ಲ. ನೀರು ಹಾಗೂ ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಾರತೀಯ ಮಹಿಳೆಯರ ಸಿಂದೂರದ ಬೆಲೆ ಭಯೋತ್ಪಾದಕರಿಗೆ ಈಗ ಅರ್ಥವಾಗಿದೆ ಎಂದು ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಇದನ್ನೂ ಓದಿ: Operation Sindoor: "ಇದು ಯುದ್ಧ ಮಾಡುವ ಸಮಯವಲ್ಲ, ಆದರೆ ಭಯೋತ್ಪಾದಕರನ್ನು ಹೊಸಕಿ ಹಾಕುವ ಸಮಯ"; ಜಗತ್ತಿಗೆ ಸಂದೇಶ ಕೊಟ್ಟ ಮೋದಿ