Operation Sindoor: ಪಾಕಿಸ್ತಾನ ಯುದ್ಧ ವಿಮಾನದ ಇಬ್ಬರು ಪೈಲಟ್‌ಗಳ ಸೆರೆ: ಪಾಕ್‌ನ ಏರ್ ವಾರ್ನಿಂಗ್ ಸಿಸ್ಟಂ ಪುಡಿಪುಡಿ!
ಪಾಕಿಸ್ತಾನದ ವಿರುದ್ದ ಭಾರತ ಮೇ 8ರಂದು 2ನೇ ದಿನವೂ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಈ ಮಧ್ಯೆ ಪಾಕಿಸ್ತಾನದ ಯುದ್ಧ ವಿಮಾನದ ಇಬ್ಬರು ಪೈಲಟ್‌ಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಫೈಟರ್ ಜೆಟ್ ಮೂಲಕ ದಾಳಿ ನಡೆಸಲು ಮುಂದಾಗಿದ್ದ ಪೈಲಟ್‌ಗಳು ಪ್ಯಾರಚೂಟ್‌ನಿಂದ ಕೆಳಕ್ಕೆ ಬಿದ್ದಾಗ ಸಜೀವವಾಗಿ ಭಾರತೀಯ ಸೇನೆ ಬಂಧಿಸಿದೆ.


ಹೊಸದಿಲ್ಲಿ: ಪಾಕಿಸ್ತಾನದ ವಿರುದ್ದ ಭಾರತ ಮೇ 8ರಂದು 2ನೇ ದಿನವೂ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು (Operation Sindoor) ಮುಂದುವರೆಸಿದೆ. ಈ ಮಧ್ಯೆ ಪಾಕಿಸ್ತಾನವೂ ಪ್ರತಿ ದಾಳಿ ನಡೆಸಿ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿ ಸಂಪೂರ್ಣವಾಗಿ ವಿಫಲವಾಗಿದೆ. ಪಾಕ್ ಪ್ರಯೋಗಿಸಿದ ಜೆಟ್, ಡ್ರೋನ್ ಮತ್ತು ಕ್ಷಿಪಣಿಗಳನ್ನು ಭಾರತದ ಹೊಡೆದುರುಳಿಸಿದೆ. ಈ ಮಧ್ಯೆ ಪಾಕಿಸ್ತಾನ ಯುದ್ಧ ವಿಮಾನದ ಇಬ್ಬರು ಪೈಲಟ್‌ಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಫೈಟರ್ ಜೆಟ್ ಮೂಲಕ ದಾಳಿ ನಡೆಸಲು ಮುಂದಾಗಿದ್ದ ಪೈಲಟ್‌ಗಳು ಪ್ಯಾರಚೂಟ್‌ನಿಂದ ಕೆಳಕ್ಕೆ ಬಿದ್ದಾಗ ಸಜೀವವಾಗಿ ಭಾರತೀಯ ಸೇನೆ ಬಂಧಿಸಿದೆ. ಅಷ್ಟೇ ಅಲ್ಲದೆ ಭಾರತದ ದಾಳಿಗೆ ಪಾಕಿಸ್ತಾನದ ಒಟ್ಟು 5 ಏರ್ ವಾರ್ನಿಂಗ್ ಸಿಸ್ಟಂ ಕೂಡ ಛಿದ್ರಗೊಂಡಿದೆ.
ಮೂರು ಪಡೆಯಿಂದಲೂ ದಾಳಿ
ಪಾಕಿಸ್ತಾನದ ದಾಳಿಗೆ ಖಡಕ್ ಉತ್ತರ ಕೊಡಲು ಭಾರತೀಯ ಸೇನೆ ಮುಂದಾಗಿದೆ. ಈಗಾಗಲೇ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತು ಲಾಹೋರ್‌ನತ್ತ ಸೈನಿಕರು ದಾಳಿ ನಡೆಸಲು ಹೊರಟಿದ್ದಾರೆ. ಇನ್ನು ಭಾರತೀಯ ಸೇನೆಗೆ ಮೂರು ಪಡೆಗಳು ಸಾಥ್ ನೀಡಿವೆ. ಭೂ ಸೇನೆ ಇಸ್ಲಾಮಾಬಾದ್ ಅನ್ನು ಟಾರ್ಗೆಟ್ ಮಾಡಿದರೆ ಏರ್‌ಫೋರ್ಸ್ ಲಾಹೋರ್‌ಗೆ ಲಗ್ಗೆ ಇಟ್ಟಿದೆ. ನೌಕಾದಳ ಕರಾಚಿಯಲ್ಲಿ ತೀವ್ರವಾದ ದಾಳಿ ನಡೆಸಲು ಮುಂದಾಗಿದೆ. ಪಾಕಿಸ್ತಾಸ ಹಮಾಸ್ ಮಾದರಿಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿದೆ.
ಹೆಚ್ಚುವರಿ ಭದ್ರತೆ ಒದಗಿಸುವಂತೆ ಎಲ್ಲಾ ಏರ್‌ಪೋರ್ಟ್‌ಗಳಿಗೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಜಮ್ಮು ನಾಗರಿಕರನ್ನು ಸುರಕ್ಷಿತವಾದ ಜಾಗಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಎಲ್ಲಾ ಗಡಿ ರಾಜ್ಯಗಳ ಬಿಎಸ್‌ಎಫ್ ಯೋಧರಿಗೆ ಎಚ್ಚರಿಕೆ ನೀಡಿದ್ದಾರೆ.