Karan Johar: ನೆಪೋಟಿಸಂ ಬ್ರ್ಯಾಂಡ್ ಅಂಬಾಸಿಡರ್ ಎಂದವರಿಗೆ ಕರಣ್ ಜೋಹರ್ ಠಕ್ಕರ್ ಹೇಗಿತ್ತು ಗೊತ್ತಾ?
ಕಾಫಿ ವಿತ್ ಕರಣ್ ಶೋ ನಲ್ಲಿ ಸಾಕಷ್ಟು ಕಲಾವಿದರ ಜೊತೆ ಅನೇಕ ವಿಚಾರ ಚರ್ಚೆ ಮಾಡಿ ಫೇಮಸ್ ಆಗಿದ್ದ ಕರಣ್ ಜೋಹರ್ ಗೆ ನೆಪೋಟಿಸಂ ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ಸಿಕ್ಕಿದೆ. ನಟಿ ಕಂಗನಾ ರಣಾವತ್ ಅವರು ನೆಪೋಟಿಸಂ ಪದ ಪ್ರಯೋಗ ಮಾಡಿದ್ದ ಬಳಿಕ ಈ ಪದ ಹೆಚ್ಚು ಪ್ರಚಲಿತವಾಗಿ ವಿವಿಧೆಡೆ ಚರ್ಚೆ, ಹೊಸ ಗಾಸಿಪ್ ಗೆ ಕಾರಣವಾಗಿದೆ. ಇದೀಗ ಇದೇ ನೆಪೋಟಿಸಂ ಬ್ರ್ಯಾಂಡ್ ಎಂದು ತನ್ನನ್ನು ಯಾವ ಕಾರಣಕ್ಕಾಗಿ ಕರೆಯುತ್ತಾರೆ ಎಂಬ ಬಗ್ಗೆ ಕರಣ್ ಜೋಹರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಿರೂಪಕ ಕರಣ್ ಜೋಹಾರ್ ನೆಪೊಟಿಸಂಗೆ ನಾನಲ್ಲ ಕಾರಣ ಅದಕ್ಕೆ ಸಿನಿಮಾ ಪ್ರೇಕ್ಷಕರೇ ಕಾರಣ ಎಂದಿದ್ದಾರೆ.


ನವದೆಹಲಿ: ಚಲನಚಿತ್ರ ನಿರ್ಮಾಪಕ ಮತ್ತು ಟಾಕ್ ಶೋ ನಿರೂಪಕ ಕರಣ್ ಜೋಹರ್ (Karan Johar) ಯಾವಾಗಲೂ ಬಾಲಿವುಡ್‌ನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಕಾಫಿ ವಿತ್ ಕರಣ್ ಶೋ ನಲ್ಲಿ ಸಾಕಷ್ಟು ಕಲಾವಿದರ ಜೊತೆ ಅನೇಕ ವಿಚಾರ ಚರ್ಚೆ ಮಾಡಿ ಫೇಮಸ್ ಆಗಿದ್ದ ಕರಣ್ ಜೋಹರ್ ಗೆ ನೆಪೋಟಿಸಂ ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ಸಿಕ್ಕಿದೆ. ನಟಿ ಕಂಗನಾ ರಣಾವತ್ ಅವರು ನೆಪೋಟಿಸಂ ಪದ ಪ್ರಯೋಗ ಮಾಡಿದ್ದ ಬಳಿಕ ಈ ಪದ ಹೆಚ್ಚು ಪ್ರಚಲಿತವಾಗಿ ವಿವಿಧೆಡೆ ಚರ್ಚೆ, ಹೊಸ ಗಾಸಿಪ್ ಗೆ ಕಾರಣ ವಾಗಿದೆ. ಇದೀಗ ಇದೇ ನೆಪೋಟಿಸಂ ಬ್ರ್ಯಾಂಡ್ ಎಂದು ತನ್ನನ್ನು ಯಾವ ಕಾರಣಕ್ಕಾಗಿ ಕರೆಯುತ್ತಾರೆ ಎಂಬ ಬಗ್ಗೆ ಕರಣ್ ಜೋಹರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಿರೂಪಕ ಕರಣ್ ಜೋಹಾರ್ ನೆಪೊಟಿಸಂಗೆ ನಾನಲ್ಲ ಕಾರಣ ಅದಕ್ಕೆ ಸಿನಿಮಾ ಪ್ರೇಕ್ಷಕರೇ ಕಾರಣ ಎಂದಿದ್ದಾರೆ.
ಇಂದು ನೆಪೋಟಿಸಂ ಎಂಬುದು ಸಿನಿಮಾ ಕ್ಷೇತ್ರದಲ್ಲಿ ಅದರಲ್ಲಿಯೂ ಬಾಲಿವುಡ್ ನಲ್ಲಿ ಸಾಮಾನ್ಯವಾಗಿದೆ. ಬಾಲಿವುಡ್ನಲ್ಲಿಯೂ ಕೇವಲ ಸ್ಟಾರ್ ನಟ-ನಟಿಯರಿಗೆ ಅವರ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಾರೆ ಎಂಬ ಕಾರಣಕ್ಕೆ ಸಿನಿಮಾ ನಿರ್ದೇಶಕ ಕರಣ್ ಜೋಹರ್ ಅವರನ್ನು ನೆಪೋಟಿಸಂನ ಉಸ್ತುವಾರಿ ಎಂದು ಕರೆಯಲಾಗುತ್ತಿದೆ. ಈ ಬಗ್ಗೆ ಎಷ್ಟೇ ಟೀಕೆ ಕೇಳಿಬಂದರೂ ಅವರು ತಲೆ ಕೆಡಿಸಿಕೊಂಡವರಲ್ಲ ಹಾಗಿದ್ದರೂ ಇತ್ತೀಚೆಗಷ್ಟೆ ಪಾಡ್ಕಾಸ್ಟ್ ಒಂದರಲ್ಲಿ ಈ ಬಗ್ಗೆ ಮಾತ ನಾಡಿರುವ ಕರಣ್ ಜೋಹರ್, ‘ನೆಪೊಟಿಸಂಗೆ ಮೂಲ ಕಾರಣ ಜನರೇ ಆಗಿದ್ದಾರೆ. ಸಿನಿಮಾ ನೋಡುವ ಪ್ರೇಕ್ಷಕರು ಏಕೆ ಆ ನೆಪೊ ಕಿಡ್ಗಳನ್ನು ಬೆಳೆಸಬೇಕಿತ್ತು. ಜನರೇಕೆ ಅವರ ಸಿನಿಮಾಗಳನ್ನು ನೋಡಿದರು? ಅವರನ್ನು ಸ್ಟಾರ್ಗಳನ್ನಾಗಿ ಏಕೆ ಮಾಡಿದರು?’ ಎಂದು ಕರಣ್ ಜೊಹರ್ ಪ್ರಶ್ನೆ ಮಾಡಿದ್ದಾರೆ
ಕರಣ್ ಜೋಹರ್ ಅವರನ್ನು ನಿಮ್ಮನ್ನು ನೆಪೋಟಿಸಂ ಬ್ರ್ಯಾಂಡ್ ಅಂಬಾಸಿಡರ್ ಎಂದು ಯಾಕಾಗಿ ಕರೆಯುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ಅದಕ್ಕೆ ಉತ್ತರಿಸಿದ್ದ ಕರಣ್ ಜೋಹರ್, ನನಗೆ ಗೊತ್ತಿಲ್ಲ. ಯಾವ ಕಾರಣಕ್ಕಾಗಿ ನನಗೆ ನೆಪೋಟಿಸಂ ಅಂಬಾ ಸಿಡರ್ ಪಟ್ಟ ನೀಡಿದ್ದಾರೆ ಎಂಬುದು ಸಹ ತಿಳಿದಿಲ್ಲ. ನಾನು ಯಾವಾಗಲೂ ಎಲ್ಲರ ಜೊತೆಗೆ ಕೆಲಸ ಮಾಡಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ತಮ್ಮ ವ್ಯಕ್ತಿತ್ವದ ಬಗ್ಗೆ ಹರಡಿರುವ ಋಣಾತ್ಮಕ ಚರ್ಚೆಗಳ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ‘ಕಾಫಿ ವಿತ್ ಕರಣ್ ಶೋ ಪ್ರಾರಂಭ ಆದ ಬಳಿಕ ನನ್ನ ವ್ಯಕ್ತಿತ್ವದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಉಂಟು ಮಾಡಿದೆ. ನನ್ನ ಬಗ್ಗೆ ತಿಳಿದವರು ಒಳ್ಳೆಯ ವ್ಯಕ್ತಿ ಧನಾತ್ಮಕ ವ್ಯಕ್ತಿಯೆಂದು ಹೇಳುತ್ತಾರೆ. ಆದರೆ ನನ್ನ ವೈಯಕ್ತಿಕ ಪರಿಚಯ ಇಲ್ಲದವರು ತಪ್ಪು ಅಭಿಪ್ರಾಯದಲ್ಲಿ ಬದುಕುತ್ತಿದ್ದಾರೆ’ ಎಂದಿದ್ದಾರೆ ಕರಣ್ ಜೋಹರ್.
ಇದನ್ನು ಓದಿ: Karisma Kapoor: ಅಜ್ಜನೊಂದಿಗೆ ನೃತ್ಯ ಮಾಡಿದ ಕರಿಷ್ಮಾ ಕಪೂರ್ ಚಿತ್ರ ವೈರಲ್
ಕರಣ್ ಜೋಹರ್ ತಂದೆ ಯಶ್ ಜೋಹರ್ ಕೂಡ ಪ್ರಸಿದ್ಧ ಸಿನಿಮಾ ನಿರ್ಮಾಪಕರಾಗಿದ್ದು ಅವರ ಬಗ್ಗೆ ಕೂಡ ಮಾತನಾಡಿದ್ದಾರೆ. ಸಿನಿಮಾ ರಂಗಕ್ಕೆ ಬರಲು ತಮ್ಮ ತಂದೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನಾನು ಮೊದಲ ಸಿನಿಮಾ ನಿರ್ಮಾಪಕನಾಗಿ ಕೆಲಸ ಮಾಡುವಾಗ ನನ್ನ ತಂದೆಯೇ ಬೆಂಬಲ ನೀಡಿದ್ದು. ಮನೆ ಅಡಮಾನ ವಿಟ್ಟು ಹಣ ಪಡೆದು ಸಿನಿಮಾ ಮಾಡಿದ್ದೆವು ಒಂದು ವೇಳೆ ಆ ಸಿನಿಮಾ ಹಿಟ್ ಆಗಿಲ್ಲ ದಿದ್ದರೆ ಮನೆ ಕಳೆದುಕೊಂಡು ಜೀವ ನವೇ ಬರಿದಾಗುವ ಚಾನ್ಸ್ ಇತ್ತು. ಆದರೆ ನನ್ನ ತಂದೆಗೆ ನನ್ನ ಮೇಲಿರುವ ನಂಬಿಕೆಯೇ ಸಿನಿಮಾ ರಂಗದಲ್ಲಿ ಸಾಧಿಸಲು ಪ್ರೇರಣೆ ಆಗಿರುವುದಾಗಿ ಕರಣ್ ಜೋಹರ್ ತಿಳಿಸಿದ್ದಾರೆ.
ಬಳಿಕ ಸಿನಿಮಾ ನಿರ್ಮಾಣದ ಜೊತೆಗೆ ಕಾಫಿ ವಿತ್ ಕರಣ್ ಶೋ ಜರ್ನಿಯೂ ಪ್ರಾರಂಭವಾಯ್ತು. ಸಿನಿಮಾ ರಂಗದ ಅನೇಕ ಮೇರು ಕಲಾವಿದರ ಜೊತೆ ಸವಿಯಾದ ಕ್ಷಣ ಕಳೆಯುವ ಅವಕಾಶ ಸಿಕ್ಕಿತ್ತು. ನಾನು ಕೆಲವರಿಗೆ ಮಾತ್ರ ಅವಕಾಶ ನೀಡ್ತೇನೆ ಎಂಬ ವಾದವೇ ತಪ್ಪು. ನನ್ನ ಸಿನಿಮಾಕ್ಕೆ ಯಾರು ಬೇಕು ಎಂಬ ನಿರ್ಣಯವಷ್ಟೇ ನಾನು ತೆಗೆದುಕೊಂಡದ್ದು. ನಾನು ಯಾರಿಗೂ ನೋವುಂಟು ಮಾಡಬಾರದು ಯಾರ ದಾರಿಗೂ ಅಡ್ಡಿಯನ್ನುಂಟು ಮಾಡಬಾರದು ಎಂದು ಬಯಸುತ್ತೇನೆ. ನನ್ನನ್ನು ಬಹಳ ಹತ್ತಿರದಿಂದ ಕಂಡವರಿಗೆ ನಾನು ಏನೆಂದು ಗೊತ್ತು. ದೂರದಿಂದ ನನ್ನನ್ನು ನೆಪೋಟಿಸಂ ಎಂದು ಜಡ್ಜ್ ಮಾಡೋರ ಬಗ್ಗೆ ನಾನು ತಲೆಕೆಡಿಸಿಕೊಳ್ಳೊಲ್ಲ ಎಂದು ಹೇಳಿದ್ದಾರೆ.