Bhagya Lakshmi Serial: ಪತ್ತೆದಾರಿ ಕೆಲಸ ಶುರುಮಾಡಿದ ಭಾಗ್ಯ: ತಾಂಡವ್ಗೆ ಸದ್ಯದಲ್ಲೇ ಕಾದಿದೆ ಮತ್ತೊಂದು ಶಾಕ್
ಭಾಗ್ಯ ಲೊಕೇಷನ್ ಕಳುಹಿಸಿದ್ದು ಮುಂದಿನ ಸಂಚಿಕೆಯಲ್ಲಿ ಇವರಿಬ್ಬರ ಭೇಟಿ ನಡೆಯಲಿದೆ. ಇಲ್ಲಿಗೆ ಕಿಶನ್ ಕೂಡ ಬರುವ ಸಾಧ್ಯತೆ ಇದೆ. ಈ ಹುಡುಗಿಯನ್ನು ಬೆದರಿಸಿದರೆ ಆಕೆ ತಾಂಡವ್ ಹೆಸರು ಹೇಳುವುದು ಖಚಿತ. ಈ ಎಲ್ಲ ಸತ್ಯ ತಿಳಿದ ಬಳಿಕ ಭಾಗ್ಯ ಏನು ಮಾಡುತ್ತಾಳೆ? ಮತ್ತು ಕಿಶನ್ ಕೂಡ ಜೊತೆ ಇರುವುದರಿಂದ ಮುಂದೆ ಏನೆಲ್ಲ ಆಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ರೋಚಕ ಎಪಿಸೋಡ್ಗಳು ಪ್ರಸಾರವಾಗುತ್ತಿದೆ. ಒಂದು ಭಾಗ್ಯ ಮನೆಯಲ್ಲಿ ತಂಗಿ ಪೂಜಾಳ ಮದುವೆಯ ಕುರಿತು ಮಾತುಕತೆ ಸಾಗುತ್ತಿದೆ. ಮತ್ತೊಂದೆಡೆ ಪೂಜಾಳ ಮದುವೆಯನ್ನು ಹಾಳು ತಾಂಡಲು ತಾಂಡವ್-ಶ್ರೇಷ್ಠಾ ನಾನಾ ಪ್ಲ್ಯಾನ್ ಮಾಡುತ್ತಿದ್ದಾರೆ. ಇದರ ಮಧ್ಯೆ ಭಾಗ್ಯ ಪತ್ತೆದಾರಿ ಕೆಲಸ ಶುರುಮಾಡಿದ್ದಾಳೆ. ಪೂಜಾ-ಕಿಶನ್ ಮದುವೆಯನ್ನು ಹಾಳು ಮಾಡಲು ಹೊರಟಿರುವವರು ಯಾರೆಂದು ಹುಡುಕಿದ್ದಾಳೆ. ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿದ್ದಾಳೆ.
ಹಿಂದಿನ ಎಪಿಸೋಡ್ನಲ್ಲಿ ಕಿಶನ್ ಜೊತೆ ಮಾತನಾಡಲು ಭಾಗ್ಯ-ಕುಸುಮಾ ಕಾರಿನಲ್ಲಿ ಹೋಗುತ್ತಿದ್ದರು. ಅತ್ತ ತಾಂಡವ್, ಹುಡುಗಿಯೊಬ್ಬಳನ್ನು ಛೂ ಬಿಟ್ಟಿರುತ್ತಾನೆ. ಆ ಹುಡುಗಿ ಕಿಶನ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಆತನ ಬೈಕ್ ಏರುತ್ತಾಳೆ. ಬೈಕ್ ಏರಿದ ಬಳಿಕ ಆ ಹುಡುಗಿ ಕಿಶನ್‌ನನ್ನು ಅಪ್ಪಿಕೊಂಡಿದ್ದಾಳೆ. ಇದೆಲ್ಲ ತಾಂಡವ್ ಪ್ಲ್ಯಾನ್. ಇದು ಕಿಶನ್ಗೆ ಇರಿಸು-ಮುರಿಸು ಉಂಟು ಮಾಡುತ್ತದೆ. ಈ ಘಟನೆಯನ್ನು ಭಾಗ್ಯ-ಕುಸುಮಾ ಕೂಡ ನೋಡುತ್ತಾರೆ. ಮೊದಲಿಗೆ ಕಿಶನ್ ಇಂಥ ಕೆಲಸ ಮಾಡ್ತಿದ್ದಾನಾ ಎಂದು ಅನಿಸಿದರೂ, ಅದಾದ ಮೇಲೆ ಅದೇ ಹುಡುಗಿಗೆ ಕಿಶನ್ ಬೈಕ್ ನಿಲ್ಲಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ.
ಕಿಶನ್ನ ಈ ನಡವಳಿಕೆಯಿಂದ ಭಾಗ್ಯ ಹಾಗೂ ಕುಸುಮಾಗೆ ಗೌರವ ಮತ್ತಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಈ ಘಟನೆಯನ್ನು ಪೂಜಾ ತಾಯಿ ಸುನಂದ ಕೂಡ ನೋಡಿದ್ದಾಳೆ. ಸುನಂದ ಮನೆಗೆ ಬಂದು ಕಿಶನ್ ನಡವಳಿಕೆ ಸರಿಯಿಲ್ಲ.. ಈ ಮದುವೆ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದರೆ, ಆ ಹುಡುಗಿಯನ್ನು ಯಾರೋ ಬೇಕೆಂದು ಪ್ಲ್ಯಾನ್ ಮಾಡಿ ಕಳುಹಿಸಿದ್ದು ಎಂದು ಭಾಗ್ಯಾ ಹಾಗೂ ಕಿಶನ್ಗೆ ಅನುಮಾನ ಮೂಡುತ್ತದೆ. ಹೀಗಾಗಿ ಇದರ ಹಿಂದಿರುವ ಮಾಸ್ಟರ್ ಮೈಂಡ್ ಯಾರೆಂದು ತಿಳಿಯಲು ಇವರಿಬ್ಬರು ಮುಂದಾಗಿದ್ದಾರೆ.
ಕಿಶನ್ ಜೊತೆ ಬೈಕ್ನಲ್ಲಿ ಕೂತಾಗ ಆ ಹುಡುಗಿ ಆತನ ಜಾಕೆಟ್‌ನಲ್ಲಿ ತನ್ನ ವಿಸಿಟಿಂಗ್ ಕಾರ್ಡ್ ಇಟ್ಟಿರುತ್ತಾಳೆ. ಆ ನಂಬರ್‌ಗೆ ಫೋನ್ ಮಾಡಿ ಕಿಶನ್ ಕೇಳಿದಾಗ, ನನ್ನ ಕೆಲಸ ಅಷ್ಟೇ, ಅದನ್ನು ಮುಗಿಸಿದ್ದೇನೆ ಎಂದು ಫೋನ್ ಕಟ್ ಮಾಡಿದ್ದಾಳೆ. ಆಗ ಕಿಶನ್ ಭಾಗ್ಯಾಗೆ ಫೋನ್ ಮಾಡಿ ನಡೆದ ಘಟನೆಯನ್ನು ಹೇಳಿದ್ದಾನೆ. ತಕ್ಷಣ ಆ ಹುಡುಗಿ ನಂಬರ್ ಅನ್ನು ಭಾಗ್ಯಾಗೂ ಕಳಿಸಿದ್ದಾನೆ. ಅದೇ ನಂಬರ್‌ಗೆ ಫೋನ್ ಮಾಡಿದ ಭಾಗ್ಯ, ಆ ಹುಡುಗಿ ಜೊತೆ ಮಾಡೆಲಿಂಗ್ ಏಜೆನ್ಸಿಯಿಂದ ಕರೆ ಮಾಡ್ತಿದ್ದೇವೆ ಎಂದು ಸುಳ್ಳು ಹೇಳಿ ಮಾತನಾಡಿದ್ದಾಳೆ.
ನಿಮಗೆ ಮಾಡೆಲಿಂಗ್ ಅಂದರೆ ಇಂಟ್ರೆಸ್ಟಿಂಗ್ ಅಂತ ಗೊತ್ತಾಯ್ತು, ದೊಡ್ಡ ಜಾಹೀರಾತಿನಲ್ಲಿ ನೀವು ನಟಿಸ್ತೀರಾ? ಎಂದು ಭಾಗ್ಯ ಕೇಳಿದ್ದಾಳೆ. ಭಾಗ್ಯಾಳ ಮಾತಿಗೆ ಮರುಳಾದ ಆಕೆ, ಹೌದಾ.. ಯಾವ ಥರದ ಜಾಹೀರಾತು, ಏನ್ ಸ್ಕ್ರಿಪ್ಟ್ ಎಂದೆಲ್ಲ ಕೇಳುತ್ತಾಳೆ. ಕುರಿ ಹಳ್ಳಕ್ಕೆ ಬಿತ್ತು ಅನ್ನೋ ಖುಷಿಯಲ್ಲಿದ್ದ ಭಾಗ್ಯಾ, ಎಲ್ಲವನ್ನು ಫೋನ್‌ನಲ್ಲಿ ಮಾತನಾಡುವುದು ಬೇಡ, ಲೊಕೇಷನ್ ಕಳುಹಿಸುತ್ತೇನೆ, ಅಲ್ಲಿಗೆ ಬನ್ನಿ ಎಲ್ಲ ಡಿಟೇಲ್ಸ್ ಕೊಡ್ತಿನಿ ಎಂದಿದ್ದಾಳೆ.
ಸದ್ಯ ಭಾಗ್ಯ ಲೊಕೇಷನ್ ಕಳುಹಿಸಿದ್ದು ಮುಂದಿನ ಸಂಚಿಕೆಯಲ್ಲಿ ಇವರಿಬ್ಬರ ಭೇಟಿ ನಡೆಯಲಿದೆ. ಇಲ್ಲಿಗೆ ಕಿಶನ್ ಕೂಡ ಬರುವ ಸಾಧ್ಯತೆ ಇದೆ. ಈ ಹುಡುಗಿಯನ್ನು ಬೆದರಿಸಿದರೆ ಆಕೆ ತಾಂಡವ್ ಹೆಸರು ಹೇಳುವುದು ಖಚಿತ. ಈ ಎಲ್ಲ ಸತ್ಯ ತಿಳಿದ ಬಳಿಕ ಭಾಗ್ಯ ಏನು ಮಾಡುತ್ತಾಳೆ? ಮತ್ತು ಕಿಶನ್ ಕೂಡ ಜೊತೆ ಇರುವುದರಿಂದ ಮುಂದೆ ಏನೆಲ್ಲ ಆಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.