ಎಐ ಆಧರಿತ ಪ್ರೆಗ್ನೆನ್ಸಿ ಆಪ್ ಮದರ್‌ಹುಡ್ ಒನ್ ಅನ್ನು ಬಿಡುಗಡೆ ಮಾಡಿದ ಮದರ್‌ಹುಡ್ ಹಾಸ್ಪಿಟಲ್
ಮದರ್‌ಹುಡ್ ಒನ್ ಎನ್ನುವುದು ಪುರಾವೆ-ಆಧಾರಿತ ಮತ್ತು ತಜ್ಞರಿಂದ ನಡೆಸಲ್ಪಡುವ ಆರೈಕೆ ವ್ಯವಸ್ಥೆ ಯಾಗಿದೆ. ಎಐ ಆಧರಿತ ವೈಯಕ್ತೀಕರಣ ಸೌಲಭ್ಯವನ್ನು ಹೊಂದಿರುವ ಈ ಸೇವೆಯು ಗರ್ಭಿಣಿ ಯರಿಗೆ ಅಗ್ರ ಪ್ರೆಗ್ನೆನ್ಸಿ ಕೋಚ್ ಗಳು, ಪೌಷ್ಟಿಕತಜ್ಞರು, ಮನಶ್ಶಾಸ್ತ್ರಜ್ಞರು ಮತ್ತು ವೈದ್ಯರಿಂದ ಕಸ್ಟಮೈಸ್ ಮಾಡಿದ ನೆರವನ್ನು ಒದಗಿಸುತ್ತದೆ


ಗರ್ಭಿಣಿಯರಿಗೆ ನೆರವು ಮತ್ತು ಸಲಹೆ ಮೊತ್ತ ಮೊದಲ ಎಐ ಆಧರಿತ ಪ್ರೆಗ್ನೆನ್ಸಿ ಆಪ್ ಮದರ್‌ಹುಡ್ ಒನ್
“ಭಾರತದಲ್ಲಿ 10 ಗರ್ಭಿಣಿಯರಲ್ಲಿ ಒಬ್ಬರು ಹೆರಿಗೆಯ ಭಯ ಹೊಂದಿರುತ್ತಾರೆ”
ಭಾರತದ ಅತ್ಯಂತ ಪ್ರಮುಖ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಜಾಲವಾಗಿರುವ ಮದರ್‌ಹುಡ್ ಹಾಸ್ಪಿಟಲ್ ಇದೀಗ ಗರ್ಭಿಣಿಯರಿಗೆ ಸಲಹೆ ಮತ್ತು ನೆರವು ಒದಗಿಸಲು ಮದರ್‌ಹುಡ್ ಒನ್ ಎಂಬ ಭಾರತದ ಮೊತ್ತ ಮೊದಲ ಸಬ್‌ಸ್ಕ್ರಿಪ್ಷನ್ ಆಧಾರಿತ ಪ್ರೆಗ್ನೆನ್ಸಿ ಕೇರ್ ಆಪ್ ಅನ್ನು ಬಿಡುಗಡೆ ಮಾಡಿದೆ. ಗರ್ಭಿಣಿಯರಿಗೆ ಸಮಗ್ರ ಮತ್ತು ವೈಯಕ್ತಿಕ ಆರೈಕೆಯನ್ನು ಒದಗಿಸಲು ವಿನ್ಯಾಸಗೊಳಿಸ ಲಾಗಿರುವ ಈ ಮದರ್‌ಹುಡ್ ಕೇರ್ ಆಪ್ ಮೂಲಕ ಗರ್ಭಾವಸ್ಥೆಯ ಪ್ರಯಾಣದುದ್ದಕ್ಕೂ ತಾಯಿ ಮತ್ತು ಮಗುವಿನ ಕಾಳಜಿ ವಹಿಸಲು ಸೂಕ್ತ ಬೆಂಬಲವನ್ನು ನೀಡಲಾಗುತ್ತದೆ.
ಮದರ್‌ಹುಡ್ ಒನ್ ಎನ್ನುವುದು ಪುರಾವೆ-ಆಧಾರಿತ ಮತ್ತು ತಜ್ಞರಿಂದ ನಡೆಸಲ್ಪಡುವ ಆರೈಕೆ ವ್ಯವಸ್ಥೆಯಾಗಿದೆ. ಎಐ ಆಧರಿತ ವೈಯಕ್ತೀಕರಣ ಸೌಲಭ್ಯವನ್ನು ಹೊಂದಿರುವ ಈ ಸೇವೆಯು ಗರ್ಭಿಣಿಯರಿಗೆ ಅಗ್ರ ಪ್ರೆಗ್ನೆನ್ಸಿ ಕೋಚ್ ಗಳು, ಪೌಷ್ಟಿಕತಜ್ಞರು, ಮನಶ್ಶಾಸ್ತ್ರಜ್ಞರು ಮತ್ತು ವೈದ್ಯರಿಂದ ಕಸ್ಟಮೈಸ್ ಮಾಡಿದ ನೆರವನ್ನು ಒದಗಿಸುತ್ತದೆ. ಆರೋಗ್ಯ ತಪಾಸಣೆಯಿಂದ ಭಾವನಾತ್ಮಕ ಬೆಂಬಲದವರೆಗೆ ಗರ್ಭಾವಸ್ಥೆಯ ಪ್ರತಿ ಹಂತದಲ್ಲೂ ಗರ್ಭಿಣಿಯರಿಗೆ ಮಾರ್ಗದರ್ಶನ ನೀಡುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.
ಅಧ್ಯಯನಗಳ ಪ್ರಕಾರ ಶೇ.6 ರಿಂದ ಶೇ.10ರಷ್ಟು ಗರ್ಭಿಣಿಯರು ಹೆರಿಗೆಯ ಭಯವನ್ನು ಹೊಂದಿರು ತ್ತಾರೆ. ಈ ಭಯವು ಮುಖ್ಯವಾಗಿ ವೈದ್ಯಕೀಯ ಮಾಹಿತಿ ಕೊರತೆ ಮತ್ತು ಭಯವನ್ನು ಉಂಟು ಮಾಡುವ ಸಹವರ್ತಿಗಳು ಮತ್ತು ಬಂಧುಗಳ ಕಾರಣದಿಂದ ಉಂಟಾಗಬಹುದು. ಗರ್ಭಿಣಿಯರ ಜೊತೆಗೆ ನಾವು ನಡೆಸಿದ ಸಂವಹನದ ಮೂಲಕ ತಿಳಿದು ಬಂದ ವಿಚಾರವೇನೆಂದರೆ ಅವರು ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶ, ದೈಹಿಕ ಚಟುವಟಿಕೆ, ಪ್ರಯಾಣ, ಮಗುವಿನ ಒದೆಯುವಿಕೆ, ರಕ್ತಸ್ರಾವ, ಮತ್ತು ಸ್ತ್ರೀರೋಗತಜ್ಞರನ್ನು ಯಾವಾಗ ಭೇಟಿಯಾಗಬೇಕು ಎಂಬೆಲ್ಲಾ ಪ್ರಶ್ನೆಗಳನ್ನು ಹೊಂದಿರುವುದು ಕಂಡು ಬಂದಿದೆ.
ಇದನ್ನೂ ಓದಿ: Health Tips: ಹಿಮೋಗ್ಲೋಬಿನ್ ಹೆಚ್ಚಿಸುವ ಆಹಾರಗಳು ಗೊತ್ತೇ?
ಈ ಎಲ್ಲಾ ಪ್ರಶ್ನೆಗಳಿಗೆ ಮದರ್ ಹುಡ್ ಒನ್ ಆಪ್ ಉತ್ತರ ನೀಡಲಿದೆ ಮತ್ತು ಪ್ರತಿಯೊಬ್ಬ ಗರ್ಭಿಣಿ ಯೂ ಆತ್ಮವಿಶ್ವಾಸದಿಂದ ಮತ್ತು ಸರಿಯಾದ ಮಾರ್ಗದರ್ಶನದ ಮೂಲಕ ತಮ್ಮ ಪ್ರಯಾಣವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಗರ್ಭಿಣಿಯರು, ಹೊಸ ತಾಯಂದಿರು, ಸ್ತ್ರೀರೋಗ ತಜ್ಞರು ಮತ್ತು ಪೌಷ್ಟಿಕತಜ್ಞರ ಅಭಿಪ್ರಾಯಗಳ ಆಧಾರದಲ್ಲಿ ಈ ಆಪ್ ಮತ್ತು ಯೂಸರ್ ಇಂಟರ್ ಫೇಸ್ ಅನ್ನು ನಿರ್ಮಿಸಲಾಗಿದೆ. ಇಲ್ಲಿ ಬಳಕೆದಾರರು ಪ್ರೆಗ್ನೆನ್ಸಿ ಕೋಚ್ ಗಳು, ಪೌಷ್ಟಿಕತಜ್ಞರು, ಮತ್ತು ಫಿಸಿಯೋಥೆರಪಿಸ್ಟ್ ಗಳ ಜೊತೆ ಮಾತನಾಡುವ ಅವಕಾಶ ಹೊಂದುತ್ತಾರೆ.
ಜೊತೆಗೆ, ಸ್ತ್ರೀರೋಗ ತಜ್ಞರ ಜೊತೆ ಮಾತುಕಡೆ ನಡೆಸುವ ಅವಕಾಶ ಒದಗಿಸುತ್ತದೆ. ವಿಶೇಷವಾಗಿ ಲಕ್ಷಣಗಳನ್ನು ಟ್ರ್ಯಾಕಿಂಗ್ ಮಾಡುವುದು, ಔಷಧ ಸೇವನೆ ಜ್ಞಾಪನೆ, ಗರ್ಭಾವಸ್ಥೆ ಜರ್ನಲ್ ವೈಶಿಷ್ಟ್ಯ ಒಳಗೊಂಡಿದೆ. "ಗರ್ಭದೊಂದಿಗೆ ಮಾತುಕತೆ" ಎಂಬ ವಿಶೇಷ ಫೀಚರ್ ಅನ್ನು ಕೂಡ ಹೊಂದಿದ್ದು, ಇದು ಪ್ರಸಿದ್ಧ ಮನಶ್ಶಾಸ್ತ್ರಜ್ಞರಿಂದ ವಿನ್ಯಾಸಗೊಂಡ ವಿಶೇಷ ಫೀಚರ್ ಆಗಿದೆ. ಈ ಮೂಲಕ ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಉತ್ತಮಪಡಿಸಬಹುದಾಗಿದೆ. ಮದರ್‌ಹುಡ್ ಕೇರ್ ಆಪ್ ಬಗ್ಗೆ ಮಾತನಾಡಿರುವ ಮದರ್‌ಹುಡ್ ಹಾಸ್ಪಿಟಲ್ ನ ಸಿಇಓ ಶ್ರೀ ವಿಜಯರತ್ನ ವೆಂಕಟರಾಮನ್ ಅವರು, "ಭಾರತದ ತಾಯಂದಿರು ಇದೇ ಮೊದಲ ಬಾರಿಗೆ ಈ ಆಪ್ ಬಳಸಿಕೊಂಡು ಮದರ್‌ಹುಡ್ ಆಸ್ಪತ್ರೆಗಳ ಮೂಲಕ ವಿಶೇಷವಾದ ವೈಯಕ್ತಿಕ ಆರೈಕೆಯನ್ನು ಪಡೆಯಬಹುದು. ಈ ಆಪ್ ತಾಯ್ತನದ ಆರೈಕೆ ವಿಚಾರದಲ್ಲಿ ಹೊಸ ಮಾನದಂಡವನ್ನು ಹಾಕಿ ಕೊಟ್ಟಿದೆ. ಆರೋಗ್ಯ ತಪಾಸಣೆ ಕುರಿತು ಗಮನ ಹರಿಸುವುದು, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಬೆಳೆಸುವುದು, ಅಥವಾ ವೈದ್ಯಕೀಯ ಸಲಹೆಯನ್ನು ಪಡೆಯುವುದು ಹೀಗೆ ಮದರ್‌ಹುಡ್ ಒನ್ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ ಮತ್ತು ಆತ್ಮವಿಶ್ವಾಸದಿಂದ ಹಾಗೂ ಸುಲಭವಾಗಿ ತಮ್ಮ ಗರ್ಭಾವಸ್ಥೆಯ ಪ್ರಯಾಣವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ" ಎಂದರು.
ಈ ಕುರಿತು 28 ವರ್ಷದ ಬೆಂಗಳೂರು ಮೂಲದ ಗರ್ಭಿಣಿ ಶ್ರೀಮತಿ ನೈನಾ ಮೆಹ್ತಾ ಅವರು, "ಮೊದಲ ಬಾರಿಗೆ ತಾಯಿಯಾಗುತ್ತಿರುವ ನನಗೆ ಆತಂಕ ಮತ್ತು ಗೊಂದಲ ಕಾಡುತ್ತಿತ್ತು. ಮದರ್‌ಹುಡ್ ಕೇರ್ ಆಪ್ ಈಗ ನನ್ನೆಲ್ಲಾ ಗೊಂದಲಕ್ಕೆ ಉತ್ತರ ನೀಡುತಿದ್ದು, ಇದು ನನ್ನ ದೈನಂದಿನ ಸಂಗಾತಿಯಾಗಿದೆ. ಮಗುವಿನ ಒದೆತವನ್ನು ಟ್ರ್ಯಾಕ್ ಮಾಡುವುದು, ಲಕ್ಷಣಗಳನ್ನು ಗಮನಿಸುವುದು, 'ಗರ್ಭದೊಂದಿಗೆ ಮಾತುಕತೆ' ನಡೆಸುವುದು ಅಥವಾ 24*7 ತಜ್ಞರ ಸಲಹೆಯನ್ನು ಪಡೆಯುವುದು ಹೀಗೆ ಅನೇಕ ಸೌಲಭ್ಯಗಳನ್ನು ಈ ಆಪ್ ಒದಗಿಸಿದೆ. ಇದು ನನ್ನ ಗರ್ಭಾವಸ್ಥೆಯ ಪ್ರಯಾಣವನ್ನು ಸುಗಮ ಗೊಳಿಸಿದೆ ಮತ್ತು ಭಾವನಾತ್ಮಕವಾಗಿ ಧೈರ್ಯ ತುಂಬಿದೆ" ಎಂದು ಹೇಳಿದರು.