Mumbai News: ಕುಡಿದ ಮತ್ತಿನಲ್ಲಿ 2 ಕುಟುಂಬಗಳ ನಡುವೆ ಜಗಳ; ಮೂವರು ಸಾವು, ನಾಲ್ವರು ಗಂಭೀರ
ಮುಂಬೈಯ ಗಣಪತ್ ಪಾಟೀಲ್ ನಗರದಲ್ಲಿ ಭಾನುವಾರ ಸಂಜೆ ಎರಡು ಕುಟುಂಬಗಳು ಪರಸ್ಪರ ಜಗಳ ಮಾಡಿಕೊಂಡಿದ್ದು, ಇದು ಹಿಂಸಾತ್ಮಕರೂಪ ತಾಳಿದೆ. ಇದರಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಣಪತ್ ಪಾಟೀಲ್ ನಗರದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಶೇಖ್ ಮತ್ತು ಗುಪ್ತಾ ಕುಟುಂಬಗಳು ಬಹಳ ಹಿಂದಿನಿಂದಲೇ ವೈಷ್ಯಮ್ಯ ಹೊಂದಿತ್ತು. ಪದೇ ಪದೆ ಜಗಳ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಎರಡು ಕುಟುಂಬಗಳು 2022ರಲ್ಲಿ ಪರಸ್ಪರ ಪೊಲೀಸ್ ಪ್ರಕರಣಗಳನ್ನು ದಾಖಲಿಸಿದ್ದರು.


ಮುಂಬೈ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನೆರೆಹೊರೆಯವರೊಂದಿಗೆ ಜಗಳ ಮಾಡಿದ್ದು, ಇದು ಮೂವರ ಸಾವಿಗೆ (Murder case) ಕಾರಣವಾದ ಘಟನೆ ಮುಂಬೈಯ (Mumbai crime) ಗಣಪತ್ ಪಾಟೀಲ್ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಹಿಂದಿನ ದ್ವೇಷವೇ ಈ ದುರಂತ ಅಂತ್ಯಕ್ಕೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ರಾಮ್ ನವಲ್ ಗುಪ್ತಾ, ಅರವಿಂದ್ ಗುಪ್ತಾ ಮತ್ತು ಹಮೀದ್ ನಾಸಿರುದ್ದೀನ್ ಶೇಖ್ ಎಂಬವರು ಸಾವನ್ನಪ್ಪಿದ್ದು, ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೇಖ್ ಮತ್ತು ಗುಪ್ತಾ ಕುಟುಂಬಗಳ ನಡುವಿನ ವೈಷ್ಯಮ್ಯ ಈಗ ಮೂವರ ಸಾವಿನ ಮೂಲಕ ಅಂತ್ಯವಾಗಿದೆ.
ಮುಂಬೈಯ ಗಣಪತ್ ಪಾಟೀಲ್ ನಗರದಲ್ಲಿ ಭಾನುವಾರ ಸಂಜೆ ಎರಡು ಕುಟುಂಬಗಳು ಪರಸ್ಪರ ಜಗಳ ಮಾಡಿಕೊಂಡಿದ್ದು, ಇದು ಹಿಂಸಾತ್ಮಕ ರೂಪ ತಾಳಿತ್ತು. ಇದರಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಣಪತ್ ಪಾಟೀಲ್ ನಗರದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಶೇಖ್ ಮತ್ತು ಗುಪ್ತಾ ಕುಟುಂಬಗಳ ನಡುವೆ ಬಹಳ ಹಿಂದಿನಿಂದಲೇ ವೈಷ್ಯಮ್ಯ ಹೊಂದಿತ್ತು. ಪದೇ ಪದೆ ಜಗಳ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಎರಡು ಕುಟುಂಬಗಳು 2022ರಲ್ಲಿ ಪರಸ್ಪರ ಪೊಲೀಸ್ ಪ್ರಕರಣಗಳನ್ನು ದಾಖಲಿಸಿದ್ದವು. ಇದರಿಂದ ಶತ್ರುತ್ವ ಇನ್ನೂ ಹೆಚ್ಚಾಗಿತ್ತು.
ಭಾನುವಾರ ಸಂಜೆ 4.30ರ ಸುಮಾರಿಗೆ ಹಮೀದ್ ನಾಸಿರುದ್ದೀನ್ ಶೇಖ್ ಕುಡಿದ ಮತ್ತಿನಲ್ಲಿ ರಾಮ್ ನವಲ್ ಗುಪ್ತಾ ಅವರ ತೆಂಗಿನಕಾಯಿ ಅಂಗಡಿಯ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆಗ ಇಬ್ಬರ ನಡುವೆ ತೀವ್ರ ವಾಗ್ವಾದ ಪ್ರಾರಂಭವಾಯಿತು ಎನ್ನಲಾಗಿದೆ.
ಇವರ ವಾಗ್ವಾದ ಎಷ್ಟು ಉಲ್ಬಣಗೊಂಡಿತೆಂದರೆ ಎರಡೂ ಕುಟುಂಬಗಳು ಇದಕ್ಕೆ ಸೇರಿಕೊಂಡವು. ರಾಮ್ ನವಲ್ ಗುಪ್ತಾ ಅವರ ಪುತ್ರರಾದ ಅಮರ್ ಗುಪ್ತಾ, ಅರವಿಂದ್ ಗುಪ್ತಾ ಮತ್ತು ಅಮಿತ್ ಗುಪ್ತಾ ಹರಿತವಾದ ಆಯುಧಗಳೊಂದಿಗೆ ಬಂದರೆ ಹಮೀದ್ ನಾಸಿರುದ್ದೀನ್ ಶೇಖ್ ಮತ್ತು ಅವರ ಪುತ್ರರಾದ ಅರ್ಮಾನ್ ಹಮೀದ್ ಶೇಖ್ ಮತ್ತು ಹಸನ್ ಹಮೀದ್ ಶೇಖ್ ಅವರು ಕೂಡ ಆಯುಧಗಳನ್ನು ಹಿಡಿದುಕೊಡು ಬಂದು ಅವರನ್ನು ಎದುರಿಸಿದರು.
ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ರಾಮ್ ನವಲ್ ಗುಪ್ತಾ ಮತ್ತು ಅರವಿಂದ್ ಗುಪ್ತಾ ಸ್ಥಳದಲ್ಲೇ ಸಾವನ್ನಪ್ಪಿದರೆ ಅಮರ್ ಗುಪ್ತಾ ಮತ್ತು ಅಮಿತ್ ಗುಪ್ತಾ ಗಂಭೀರವಾಗಿ ಗಾಯಗೊಂಡರು.
ಇದನ್ನೂ ಓದಿ: Drowned: ಯಾದಗಿರಿಯಲ್ಲಿ ಈಜಲು ಹೋದ ಯುವಕರಿಬ್ಬರು ನೀರುಪಾಲು
ಶೇಖ್ ಕುಟುಂಬದಲ್ಲಿ ಹಮೀದ್ ನಾಸಿರುದ್ದೀನ್ ಶೇಖ್ ಸಾವನ್ನಪ್ಪಿದ್ದು, ಅವರ ಪುತ್ರರಾದ ಅರ್ಮಾನ್ ಮತ್ತು ಹಸನ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಣಪತ್ ಪಾಟೀಲ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶತಾಬ್ದಿ ಆಸ್ಪತ್ರೆಗೆ ಕಳುಹಿಸಿದರು. ಒಬ್ಬ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆದರೆ ಆತನ ಸ್ಥಿತಿ ಗಂಭೀರವಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಮತ್ತು ಘಟನೆ ನಡೆದ ಪ್ರದೇಶದಲ್ಲಿ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.