ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

1303 ಕೋಟಿ ರು ನಿವ್ವಳ ಲಾಭ ದಾಖಲಿಸಿದ ಸೌತ್‌ ಇಂಡಿಯನ್‌ ಬ್ಯಾಂಕ್‌: ಲಾಭಾಂಶ ಹಂಚಿಕೆಗೂ ಶಿಫಾರಸ್ಸು

2024-25 ಹಣಕಾಸು ವರ್ಷಕ್ಕೆ ₹1,302.88 ಕೋಟಿ ಲಾಭವನ್ನು ಘೋಷಿಸಿದ್ದು ಕಳೆದ ಹಣಕಾಸು ವರ್ಷ 2023-24 ರ ₹1,070.08 ಕೋಟಿಯ ಲಾಭದೊಂದಿಗೆ ಹೋಲಿಸಿದರೆ ಇದು 21.75% ರಷ್ಟು ಅಧಿಕ ಬೆಳವಣಿಗೆ ದಾಖಲಿಸಿದೆ. ನಿರ್ದೇಶಕರ ಮಂಡಳಿ 40% ಲಾಭಾಂಶ ಹಂಚಿಕೆಯನ್ನು ಕೂಡ ಶಿಫಾರಸು ಮಾಡಿದೆ

1303 ಕೋಟಿ ರು ನಿವ್ವಳ ಲಾಭ ದಾಖಲಿಸಿದ ಸೌತ್‌ ಇಂಡಿಯನ್‌ ಬ್ಯಾಂಕ್‌

Profile Ashok Nayak May 19, 2025 3:15 PM

ಸೌತ್ ಇಂಡಿಯನ್‌‌ ಬ್ಯಾಂಕ್ ಹಣಕಾಸು ಫಲಿತಾಂಶ ಘೋಷಣೆ ಮಾಡಿದ್ದು 1303 ಕೋಟಿ ರು ನಿವ್ವಳ ಲಾಭ ದಾಖಲಿಸಿದೆ. ಜತೆಗೆ ಷೇರುದಾರರಿಗೆ ಡಿವಿಡೆಂಡ್‌ (ಲಾಭಾಂಶ) ಹಂಚಿಕೆಯ ಶಿಫಾ ರಸ್ಸನ್ನು ಕೂಡ ಮುಂದಿಟ್ಟಿದೆ. 2024-25 ಹಣಕಾಸು ವರ್ಷಕ್ಕೆ ₹1,302.88 ಕೋಟಿ ಲಾಭವನ್ನು ಘೋಷಿಸಿದ್ದು ಕಳೆದ ಹಣಕಾಸು ವರ್ಷ 2023-24 ರ ₹1,070.08 ಕೋಟಿಯ ಲಾಭದೊಂದಿಗೆ ಹೋಲಿಸಿದರೆ ಇದು 21.75% ರಷ್ಟು ಅಧಿಕ ಬೆಳವಣಿಗೆ ದಾಖಲಿಸಿದೆ. ನಿರ್ದೇಶಕರ ಮಂಡಳಿ 40% ಲಾಭಾಂಶ ಹಂಚಿಕೆಯನ್ನು ಕೂಡ ಶಿಫಾರಸು ಮಾಡಿದೆ.

ಸೌತ್ ಇನ್ಡಿಯನ್ ಬ್ಯಾಂಕ್ ಎಂ.ಡಿ ಮತ್ತು ಸಿಇಒ ಶ್ರೀ ಪಿ.ಆರ್. ಶೇಷಾದ್ರಿ ಸಂತಸ ವ್ಯಕ್ತಪಡಿಸಿದ್ದು ನಮ್ಮ ತಂತ್ರಗಾರಿಕೆ ಸುಸ್ಥಿರ ಲಾಭ, ಉತ್ಕೃಷ್ಟ ಅಸ್ಸೆಟ್‌ ಗುಣಮಟ್ಟ, ಗುಣಮಟ್ಟದ ಸಾಲ ವೃದ್ಧಿ, ಬಲಿಷ್ಠ ಚಿಲ್ಲರೆ ಠೇವಣಿ ಮತ್ತು ಡಿಜಿಟಲ್ ರೂಪಾಂತರದ ಸುತ್ತ ಮುಂದುವರೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: IPL 2025: ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಅಯ್ಯರ್‌; ಈ ಸಾಧನೆ ಮಾಡಿದ ಮೊದಲ ನಾಯಕ

ಐತಿಹಾಸಿಕ ಸಾಧನೆಗಳು FY25-ರಲ್ಲಿ:

  • ಬ್ಯಾಂಕ್‌ನ ಇತಿಹಾಸದಲ್ಲೇ ₹1,95,104.12 ಕೋಟಿರೂಗಳ ಅತಿದೊಡ್ಡ ವ್ಯವಹಾರ

ನಿವ್ವಳ ಲಾಭ ₹1,302.88 ಕೋಟಿ

ಕಾರ್ಯಾಚರಣಾ ಲಾಭ: ₹2,270.08 ಕೋಟಿ

ನಿವ್ವಳ ಬಡ್ಡಿ ಆದಾಯ (NII): ₹3,485.64 ಕೋಟಿ

ಇತರೆ ಆದಾಯ: ₹1,813.43 ಕೋಟಿ

ನಿಬಂಧನೆ ವ್ಯಾಪ್ತಿ ಅನುಪಾತ: 85.03%

ಆಸ್ತಿ ಮೇಲೆ ಆದಾಯ (RoA): 1.05% (20 ವರ್ಷಗಳ ಗರಿಷ್ಠ)

ಇಕ್ವಿಟಿಯ ಮೆಲೆ ಆದಾಯ (RoE): 12.90% (11 ವರ್ಷಗಳ ಗರಿಷ್ಠ)

ನೆಟ್‌ ಎನ್‌ಪಿಎ ಶೇ. 1 ಕ್ಕೂ ಕಡಿಮೆ

ಶ್ರೇಷ್ಠತೆಗಾಗಿ ಪ್ರಶಸ್ತಿಗಳು – FY25 IBA ಬ್ಯಾಂಕಿಂಗ್ ಟೆಕ್ನಾಲಜಿ ಅವಾರ್ಡ್ಸ್

ಅತ್ಯುತ್ತಮ ತಂತ್ರಜ್ಞಾನ ಕೌಶಲ್ಯ ಮತ್ತು ಸಂಸ್ಥೆ – ವಿಜೇತೆ

ಬೆಸ್ಟ್‌ ಫೈನಾನ್ಶಿಯಲ್‌ ಇನ್‌ಕ್ಲೂಶನ್‌– ರನ್ನರ್ ಅಪ್

ಡಿಜಿಟಲ್ ಮಾರಾಟ ಮತ್ತು ಪಾವತಿ – ವಿಶೇಷ ಮಾನ್ಯತೆ

ಬೆಸ್ಟ್‌ ಐಟಿ ರಿಸ್ಕ್‌ ಮ್ಯಾನೇಜ್ಮೆಂಟ್‌– ವಿಶೇಷ ಮಾನ್ಯತೆ

ಬೆಸ್ಟ್‌ ಫಿನ್‌ಟೆಕ್‌ ಮತ್ತು ಡಿಪಿಐ ಅನುಷ್ಠಾನ – ವಿಶೇಷ ಮಾನ್ಯ