Doctors Age Limit: ವೈದ್ಯರ ನಿವೃತ್ತಿ ವಯಸ್ಸು ಏರಿಕೆಗೆ ಅರವತ್ತೈದು ವಿಘ್ನ!
ತಾರತಮ್ಯ ಮಾಡದೆ ಎಲ್ಲಾ ವೈದ್ಯಕೀಯ ಕಾಲೇಜು ಬೋಧನಾ ವಿಭಾಗದ ನಿವೃತ್ತಿ ಹೆಚ್ಚಳದ ಕುರಿತು ಕೆಲ ವೈದ್ಯರು ಆಗ್ರಹಿಸಿದ್ದಾರೆ. ಕರ್ನಾಟಕ ವ್ಯಾಪ್ತಿಯ ಎಲ್ಲಾ ವೈದ್ಯ ಕೀಯ ಕಾಲೇಜು ಬೋಧನಾ ವಿಭಾ ಗದ ನಿವೃತ್ತಿ 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸಬೇಕೆಂದು ಸ್ವತಃ ಕೆಲ ಸಚಿವರೇ ಮುಖ್ಯ ಮಂತ್ರಿ ಬಳಿ ಮನವಿ ಮಾಡಿದ್ದರು


ಶಿವಕುಮಾರ್ ಬೆಳ್ಳಿತಟ್ಟೆ
ಸರಕಾರದ ಪ್ರಸ್ತಾವನೆಗೆ ಒಪ್ಪದ ಆರ್ಥಿಕ ಇಲಾಖೆ
ವೈದ್ಯರಲ್ಲಿಯೇ ಭಿನ್ನಮತ ಸೃಷ್ಟಿಸುವ ಸಚಿವ ಸಂಪುಟ ನಿರ್ಧಾರಕ್ಕೆ ವಿರೋಧಿ
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋ ನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಳ ಸಂಬಂಧ ಹಲವು ವಿರೋಧಗಳು ವ್ಯಕ್ತವಾಗಿದೆ. ಕಳೆದ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಿಸುವುದಾಗಿ ಸರಕಾರ ತಿಳಿಸಿದೆ.
ಆದರೆ, ಇದಕ್ಕೆ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ ಎಲ್ಲಾ ವೈದ್ಯಕೀಯ ಕಾಲೇಜು ಬೋಧನಾ ವಿಭಾಗದಲ್ಲಿ ತಾರತಮ್ಯ ಹುಟ್ಟು ಹಾಕುವಂತೆ ಮಾಡಿದೆ. ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಪಡೆದ ನಂತರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ತಜ್ಞರಾಗಿ ಕರ್ತವ್ಯ ನಿರ್ವಹಿಸಲು ಅತ್ಯಂತ ಕಡಿಮೆ ಸೇವಾವಧಿ ಸಿಗುತ್ತದೆ. ಇದನ್ನು ವಿಸ್ತರಿಸಿದರೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ನಿವೃತ್ತಿ 60 ವರ್ಷದಿಂದ 65 ವಯೋಮಿತಿ ಹೆಚ್ಚಳಕ್ಕೆ ಮುಂದಾಗಿದೆ.
ಆದರೆ, ಮತ್ತೊಂದೆಡೆ, ತಾರತಮ್ಯ ಮಾಡದೆ ಎಲ್ಲಾ ವೈದ್ಯಕೀಯ ಕಾಲೇಜು ಬೋಧನಾ ವಿಭಾಗದ ನಿವೃತ್ತಿ ಹೆಚ್ಚಳದ ಕುರಿತು ಕೆಲ ವೈದ್ಯರು ಆಗ್ರಹಿಸಿದ್ದಾರೆ. ಕರ್ನಾಟಕ ವ್ಯಾಪ್ತಿಯ ಎಲ್ಲಾ ವೈದ್ಯ ಕೀಯ ಕಾಲೇಜು ಬೋಧನಾ ವಿಭಾ ಗದ ನಿವೃತ್ತಿ 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸಬೇಕೆಂದು ಸ್ವತಃ ಕೆಲ ಸಚಿವರೇ ಮುಖ್ಯ ಮಂತ್ರಿ ಬಳಿ ಮನವಿ ಮಾಡಿದ್ದರು. ಆದರೂ, ಕೆಲವೊಂದಷ್ಟು ಮಂದಿಗೆ ಮಾತ್ರ ವಯೋಮಿತಿ ಹೆಚ್ಚಿಸಿರುವ ನಿರ್ಧಾರ ದಿಂದ, ವೈದ್ಯಕೀಯ ಕಾಲೇಜುಗಳಲ್ಲಿ ಯೂ ನಿವೃತ್ತಿ ತಾರತಮ್ಯ ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ..ಇದು ಭಾಗ್ಯ !
ಸಿಎಂ ಭೇಟಿಗೆ ಮುಂದಾದ ವೈದ್ಯರ ನಿಯೋಗ: ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳದ ರಾಜ್ಯ ಸರಕಾರದ ಆದೇಶ ಹೊರಡಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವೈದ್ಯರ ನಿಯೋಗ ಶನಿವಾರ ಸಭೆ ನಡೆಸಿದೆ. ಸರಕಾರ ಹೊರಡಿಸಿರುವ ಆದೇಶದಲ್ಲಿ ಎಲ್ಲಾ ವೈದ್ಯರಿಗೂ ನಿವೃತ್ತಿ ವಯಸ್ಸು ಹೆಚ್ಚಳದ ಪ್ರಸ್ತಾವನೆಯನ್ನು ಸೇರಿಸಬೇಕು. ವೈದ್ಯರಲ್ಲಾಗುವ ತಾರತಮ್ಯವನ್ನು ತಪ್ಪಿಸಬೇಕು. ಸರಕಾರಿ ಆಸ್ಪತ್ರೆಗಳ ಏಳಿಗೆಗೆ ಸೂಪರ್ ಸ್ಪೆಷಾಲಿಟಿ ವೈದ್ಯರೊಂದಿಗೆ ಎಲ್ಲಾ ವೈದ್ಯರು ಶ್ರಮಿಸುತ್ತಿರುವುದನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೋರಾಟ, ಕೋರ್ಟ್ ಕದ ತಟ್ಟಲಿರುವ ವೈದ್ಯರು: ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಳಕ್ಕೆ ಕೆಲ ವೈದ್ಯರು ವಿರೋಧ ವ್ಯಕ್ತಪಡಿಸಿದ್ದು, ಹೋರಾಟದ ಎಚ್ಚರಿಕೆ ನೀಡಿರುವುದಲ್ಲದೆ ಕೋರ್ಟ್ ಮೆಟ್ಟಿರುವುದಾಗಿ ಸೂಚಿಸಿದ್ದಾರೆ. ಮುಂಬರುವ ಸಚಿವ ಸಂಪುಟದಲ್ಲಿ ಇತರೆ ವೈದ್ಯರ ನಿವೃತ್ತಿ ವಯಸ್ಸು 65ಕ್ಕೆ ಹೆಚ್ಚಳ ಮಾಡಬೇಕೆಂದು ವೈದ್ಯರ ನಿಯೋಗ ಒತ್ತಾಯಿಸಿದೆ.
ಆರ್ಥಿಕ ಇಲಾಖೆಯ ಆಕ್ಷೇಪಣೆಗಳೇನು?
ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸು 65ಕ್ಕೆ ಏರಿಕೆಯ ಪ್ರಸ್ತಾವನೆ ಆಡಳಿತ ಇಲಾಖೆಯು ಪ್ರಸ್ತಾವಿತ ತಾರ್ಕಿಕತೆಯೊಂದಿಗೆ ಸಮರ್ಥಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲ.
ಇದೇ ರೀತಿಯ ಸ್ಥಾನದಲ್ಲಿರುವ ಇತರ ಸಂಸ್ಥೆಗಳು ಮತ್ತು ಸರಕಾರದ ಮೇಲೆ ಬೀರುವ ಪರಿಣಾಮ ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಇಂತಹ ಪ್ರಮುಖ ನೀತಿ ಬದಲಾವಣೆ ಆರ್ಥಿಕ ಪರಿಣಾಮಕ್ಕೆ ಕಾರಣವಾಗಲಿದೆ.
ಎರಡನೇ ಹಂತದ ಆಡಳಿತಾತ್ಮಕ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಕಾನೂನು ಸವಾಲು ಗಳಿಗೆ ಕಾರಣವಾಗಲಿದೆ. ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಯ ಅಭಿಪ್ರಾಯ ಗಣನೆಗೆ ತೆಗೆದುಕೊಂಡಿಲ್ಲ.
ಲಭ್ಯವಿರುವ ಪೀಢರ್ ಕೇಡರ್‌ಗಳ ಆಧಾರದ ಮೇಲೆ ಉದ್ಭವಿಸುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸಿಬ್ಬಂದಿ ಲಭ್ಯವಿದೆ. ಪ್ರಸ್ತಾವಿತ ನಿವೃತ್ತಿ ವಯಸ್ಸು ಹೆಚ್ಚಳ ಅಗತ್ಯ ವಾಸ್ತವಿಕವಾಗಿ ತೆಗೆದು ಹಾಕಲಿದೆ.
ವಿರೋಧಗಳೇನು?
ಸರಕಾರದ ಆದೇಶದಂತೆ ಯಾವುದೇ ಆಡಳಿತಾತ್ಮಕ ಹುದ್ದೆಗಳಿಂದ ದೂರವಿಟ್ಟಿರುವುದು 60 ವಯೋ ನಿವೃತ್ತಿಯ ನಂತರ ವೈದ್ಯರು ಸೇವೆ ಸಲ್ಲಿಸಲು ಹಿಂಜರಿಕೆ.
ಎಂಸಿಎಚ್ ಮತ್ತು ಡಿಎಂ ವೈದ್ಯಕೀಯ ಕೋರ್ಸ್ ಓದಿರುವವ ವೈದ್ಯರಿಗೆ ಮಾತ್ರ 65 ನಿವೃತ್ತಿ ಏರಿಕೆ ಯಿಂದ ಉಳಿದ ವೈದ್ಯರು ವಿರೋಧ.
ಎಂಬಿಬಿಎಸ್ ಹಾಗೂ ಎಂ.ಡಿ ಸೇರಿದಂತೆ ಇತರೆ ವೈದ್ಯಕೀಯ ಕೋರ್ಸ್ ಓದಿರುವ ವೈದ್ಯರ ನಿವೃತ್ತಿ ವಯಸ್ಸು ಏರಿಕೆ ಮಾಡದಿರುವುದು ವೈದ್ಯರಲ್ಲಿ ಭಿನ್ನಮತ ಸೃಷ್ಟಿ.
ವೈದ್ಯರ ನಿವೃತ್ತಿ ವಯಸ್ಸು 65 ಹೆಚ್ಚಳಕ್ಕೆ ಆರ್ಥಿಕ ಇಲಾಖೆ ವಿರೋಧದ ನಡುವೆಯೂ ಸಚಿವ ಸಂಪುಟ ನಿರ್ಣಯಕ್ಕೆ ಕೆಲ ವೈದ್ಯರ ವಿರೋಧ.
ಇಂತಹ ಹುದ್ದೆಗಳನ್ನು ಒಪ್ಪಂದದ ಮೇಲೆ ಭರ್ತಿ ಮಾಡಬಹುದು. ಅರ್ಹವಲ್ಲದ ಪ್ರಸ್ತಾವನೆ ಯನ್ನು ಮುಂದುವರಿಸಬಾರದು ಎಂದು ಆಡಳಿತ ಇಲಾಖೆಗೆ ಹಣಕಾಸು ಇಲಾಖೆ ಸ್ಪಷ್ಟವಾಗಿ ಸಮ್ಮತಿಸುವುದಿಲ್ಲ.