ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಕಚೇರಿಯಲ್ಲಿ ಸಮೃದ್ಧಿ ತುಂಬಿ ತುಳುಕಬೇಕಾದರೆ ಹೀಗೆ ಮಾಡಿ

ಮನೆಯಲ್ಲಿ ನೆಮ್ಮದಿ, ಕಚೇರಿಯಲ್ಲಿ ಸವೃದ್ಧಿ ಎಲ್ಲರೂ ಬಯಸುತ್ತಾರೆ. ಯಾಕೆಂದರೆ ಇದು ಎರಡೂ ಕೂಡ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಕಚೇರಿಯಲ್ಲಿ ನಿರಂತರ ವೃದ್ಧಿಯಾದರೆ ಮಾತ್ರ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಇರಲು ಸಾಧ್ಯ. ಕಚೇರಿಯ ಸಮೃದ್ಧಿಯಾಗಬೇಕಾದರೆ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಲೇಬೇಕು. ಆಗ ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯನ್ನು ತಂದುಕೊಳ್ಳಬಹುದು.

ಕಚೇರಿಯ ಸಮೃದ್ಧಿಗೆ ಪಾಲಿಸಬೇಕು ಕೆಲವು ನಿಯಮ

ಬೆಂಗಳೂರು: ಕೆಲಸದ ಸ್ಥಳದಲ್ಲಿ (Vastu for office) ನಿರಂತರ ಪ್ರಗತಿ, ಸಮೃದ್ಧಿಯನ್ನು (vastu for prosperity) ಎಲ್ಲರೂ ಬಯಸುತ್ತಾರೆ. ಆದರೆ ಯಾವುದು ಕೂಡ ಸುಲಭವಾಗಿ ಸಿಗುವುದಿಲ್ಲ. ಇದಕ್ಕಾಗಿ ಕಠಿಣ ಪರಿಶ್ರಮದೊಂದಿಗೆ ಕೆಲವೊಮ್ಮೆ ಅದೃಷ್ಟವೂ ಕೈಹಿಡಿಯಬೇಕು. ಅದಕ್ಕಾಗಿ ಜೀವನದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಕಚೇರಿಯಲ್ಲೂ ಸಕಾರಾತ್ಮಕ ಶಕ್ತಿ ನೆಲೆಯಾಗಿರಬೇಕು. ಇದರಿಂದ ನಮ್ಮ ಮನೆಯಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಕಚೇರಿಯಲ್ಲಿ ಯಶಸ್ಸು, ಸಮೃದ್ಧಿ, ನಿತ್ಯ ಮಾಡುವ ಕೆಲಸದಲ್ಲಿ ಪ್ರಗತಿ ಸಾಧಿಸಬೇಕಾದರೆ ಕೆಲವು ವಾಸ್ತು ನಿಯಮಗಳನ್ನು (Vastu Tips) ಪಾಲಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು.

ಕೆಲಸದ ಸ್ಥಳದಲ್ಲಿ ನಿರಂತರ ಸಮೃದ್ಧಿಯಾಗಬೇಕಾದರೆ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಲೇಬೇಕು. ಇದರಿಂದ ಕಚೇರಿ ಸ್ಥಳಕ್ಕೆ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು.

VT1

ಯಾವುದು ಎಲ್ಲಿ, ಹೇಗಿರಬೇಕು?

ಸಕಾರಾತ್ಮಕ ಶಕ್ತಿಯ ಆಹ್ವಾನಕ್ಕೆ ಕಚೇರಿ ಸ್ಥಳದಲ್ಲಿ ಇಡುವಂತಹ ಕೆಲವೊಂದು ವಸ್ತುಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು.

ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಉತ್ತರಕ್ಕೆ ಎದುರಾಗಿರುವ ಸೇಫ್‌ ಲಾಕರ್‌ನಲ್ಲಿ ಇಡಬೇಕು. ವಾಸ್ತು ತತ್ತ್ವಗಳ ಪ್ರಕಾರ ಲೆಕ್ಕಪತ್ರ ವಿಭಾಗವನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎನ್ನುತ್ತಾರೆ ವಾಸ್ತು ತಜ್ಞರು.

ಕಚೇರಿಯಲ್ಲಿ ದೇವರ ಚಿತ್ರ, ಮೂರ್ತಿಗಳನ್ನು ಮಾಲೀಕರ ಆಸನದ ಹಿಂಭಾಗದಲ್ಲಿ ಎಂದಿಗೂ ಇಡಬಾರದು. ಮಾಲೀಕರ ಆಸನವು ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರಬೇಕು. ಪಶ್ಚಿಮಕ್ಕೂ ಇಡಬಹುದು. ಆದರೆ ಎಂದಿಗೂ ಅದು ದಕ್ಷಿಣಕ್ಕೆ ಎದುರಾಗಿರಬಾರದು.

ಕಚೇರಿ ಮಾಲೀಕರ ಆಸನದ ಹಿಂದೆ ಯಾವಾಗಲೂ ಘನವಾದ ಗೋಡೆ ಇರಬೇಕು. ಮಾಲೀಕರ ಮೇಜು ಯಾವಾಗಲೂ ಆಯತಾಕಾರದಲ್ಲಿರಬೇಕು. ಫ್ಯಾಶನ್ ಅಥವಾ ಸೌಂದರ್ಯಕ್ಕೆಂದು ಬೇರೆಬೇರೆ ಆಕಾರದ ಮೇಜುಗಳನ್ನು ಇಡುವುದು ಸರಿಯಲ್ಲ.

ಕಾರ್ಖಾನೆ ಅಥವಾ ಕಚೇರಿಯ ಮಧ್ಯದ ಸ್ಥಳ ಯಾವತ್ತೂ ಖಾಲಿಯಾಗಿರಬೇಕು. ಇಲ್ಲಿ ಯಾವುದೇ ಭಾರವಾದ ವಸ್ತುಗಳನ್ನು ಇಡುವಂತಿಲ್ಲ.

ಇದನ್ನೂ ಓದಿ: Vastu Tips: ನೆಮ್ಮದಿಯ ನಿದ್ರೆಗಾಗಿ ಪಾಲಿಸಬೇಕು ವಾಸ್ತು ನಿಯಮ

ವ್ಯವಸ್ಥಾಪಕರು, ಕಾರ್ಯನಿರ್ವಾಹಕರು ಮತ್ತು ನಿರ್ದೇಶಕರ ಆಸನವು ಕಚೇರಿ ಆವರಣದ ದಕ್ಷಿಣ, ಪಶ್ಚಿಮ ಮತ್ತು ನೈಋತ್ಯ ಭಾಗದಲ್ಲಿ ಇರಬೇಕು.

ಕಚೇರಿಯಲ್ಲಿರುವ ಸ್ವಾಗತ ವಿಭಾಗವನ್ನು ಈಶಾನ್ಯ ದಿಕ್ಕಿನಲ್ಲಿ ಹಾಗೂ ಮಾರ್ಕೆಟಿಂಗ್ ವಿಭಾಗವನ್ನು ವಾಯವ್ಯ ದಿಕ್ಕಿನಲ್ಲಿ ಇಟ್ಟರೆ ಕಚೇರಿಯಲ್ಲಿ ನಿರಂತರ ಸಮೃದ್ಧಿಯನ್ನು ಕಾಣಬಹುದು ಎನ್ನುತ್ತಾರೆ ವಾಸ್ತು ತಜ್ಞರು.