Shobha Shetty: ದೀಪಿಕಾ ದಾಸ್ ಬೆನ್ನಲ್ಲೇ ಸೋಷಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳಿದ ಶೋಭಾ ಶೆಟ್ಟಿ: ಏನಾಯ್ತು?
ಇನ್ಸ್ಟಾಗ್ರಾಮ್ನಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿರುವ ಶೋಭಾ ಶೆಟ್ಟಿ ಆಗಾಗ್ಗೆ ಫೋಟೋಶೂಟ್ ಮಾಡಿಸಿಕೊಂಡು ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಆದರೀಗ ಶೋಭಾ ದಿಢೀರ್ ಆಗಿ ಸೋಷಿಯಲ್ ಮೀಡಿಯಾದಿಂದ ಹೊರಬಂದಿದ್ದಾರೆ. ಈ ಕುರಿತು ಅವರೇ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Shobha Shetty

ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೂಲಕ ಕನ್ನಡಿಗರ ಮನೆಮಾತಾದ ಶೋಭಾ ಶೆಟ್ಟಿ (Shobha Shetty) ಇದೀಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಕನ್ನಡ, ತೆಲುಗು ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿದ್ದ ಶೋಭಾ ಶೆಟ್ಟಿ ಬಳಿಕ ಬಿಗ್ ಬಾಸ್ಗೆ ಕಾಲಿಟ್ಟರು. ಅಲ್ಲಿಂದ ಹೊರಬಂದ ಬಳಿಕ ಯಾವುದೇ ಧಾರಾವಾಹಿಯಲ್ಲಿ ಇವರು ನಟಿಸಿಲ್ಲ. ಇತ್ತೀಚೆಗಷ್ಟೆ ಎಂಗೇಜ್ಮೆಂಟ್ ವಾರ್ಷಿಕೋತ್ಸವ ಆಚರಿಸಿ ಸುದ್ದಿಯಾಗಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿರುವ ಶೋಭಾ ಆಗಾಗ್ಗೆ ಫೋಟೋಶೂಟ್ ಮಾಡಿಸಿಕೊಂಡು ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಆದರೀಗ ಶೋಭಾ ದಿಢೀರ್ ಆಗಿ ಸೋಷಿಯಲ್ ಮೀಡಿಯಾದಿಂದ ಹೊರಬಂದಿದ್ದಾರೆ. ಈ ಕುರಿತು ಅವರೇ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ನಾನು ಕೆಲವು ದಿನಗಳವರೆಗೆ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ದಿಢೀರ್ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ಪಡೆದುಕೊಂಡಿರುವ ವಿಚಾರ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. ಶೋಭಾ ಅವರು ಇತ್ತೀಚೆಗೆ ಬಟ್ಟೆ ಉದ್ಯಮವನ್ನು ಆರಂಭಿಸಿದ್ದರು. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಹಾಗಾಗಿ ಶೋಭಾ ಖಿನ್ನತೆಗೆ ಒಳಗಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ವೈಯಕ್ತಿಕ ಸಮಸ್ಯೆಯೇ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಇವರು ಒಂಬತ್ತನೇ ವಾರ ಮನೆಯಿಂದ ಹೊರಹೋದರು. ಎಲಿಮಿನೇಷನ್ನಿಂದ ಪಾರಾದರೂ ತನ್ನ ಸ್ವ-ಇಚ್ಚೆಯ ಮೇಲೆ ಶೋಭಾ ಅವರು ಬಿಗ್ ಬಾಸ್ ತೊರೆದರು. ಅನಾರೋಗ್ಯದ ಕಾರಣ ಇವರು ಅರ್ಧಕ್ಕೆ ಶೋನಿಂದ ಹಿಂದೆ ಸರಿದರು.
ಈ ಹಿಂದೆ ತೆಲುಗು ಬಿಗ್ಬಾಸ್ ಸೀಸನ್ 7 ರಲ್ಲಿ ಕೂಡ ಶೋಭಾ ಭಾಗಿಯಾಗಿದ್ದರು. ಅಲ್ಲಿ ತಮ್ಮ ಜಗಳ, ಮಾತುಗಳ ಮೂಲಕವೇ ಜನಪ್ರಿಯ ಆಗಿದ್ದರು. ಮೂಲತ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. ಕಾರ್ತಿಕ ದೀಪಂ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯೊಂದಿಗೆ ಕಳೆದ ವರ್ಷ ಎಂಗೇಜ್ಮೆಂಟ್ ಕೂಡ ಆಗಿತ್ತು.
Bhagya Lakshmi Serial: ಬಾಸ್ ಮುಖಕ್ಕೆ ರೆಸಿಗ್ನೇಷನ್ ಲೆಟರ್ ಬಿಸಾಕಿದ ತಾಂಡವ್: ಭಾಗ್ಯ ಮನೆಗೆ ಬಂದು ಅವಾಜ್