ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Raj: ಕರ್ಣ ಸೀರಿಯಲ್ ಶೂಟಿಂಗ್ ಶುರುವಾಗೇ ಇಲ್ವಾ?: ಸಿನಿಮಾದಲ್ಲಿ ಬ್ಯುಸಿಯಾದ ಕಿರಣ್ ರಾಜ್

ಝೀ ಕನ್ನಡ ವಾಹಿನಿಯು ಈ ಹೊಸ ಧಾರಾವಾಹಿಯನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ ಎನ್ನಲಾಗಿತ್ತು. ಆದರೆ, ಒಂದು ಪ್ರೊಮೋ ಬಿಟ್ಟು ಸುಮಾರು ಒಂದು ತಿಂಗಳಾದರೂ ಈ ಧಾರಾವಾಹಿ ಕಡೆಯಿಂದ ಅಥವಾ ಚಾನೆಲ್ ಕಡೆಯಿಂದ ಯಾವುದೇ ಅಪ್ಡೇಟ್ ಇಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಈ ಧಾರಾವಾಹಿಗೆ ಹೀರೋಯಿನ್ ಎಂದು ಹೇಳಲಾಗಿತ್ತು.

ಕರ್ಣ ಶೂಟಿಂಗ್ ಶುರುವಾಗೇ ಇಲ್ವಾ?: ಸಿನಿಮಾದಲ್ಲಿ ಕಿರಣ್ ರಾಜ್ ಬ್ಯುಸಿ

Karna Serial

Profile Vinay Bhat Apr 28, 2025 7:23 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟ ಕಿರಣ್​ ರಾಜ್​ಗೆ (Kiran Raj) ದೊಡ್ಡ ಅಭಿಮಾನಿಗಳ ಬಳಗವಿದೆ. 2020 ಜನವರಿಯಲ್ಲಿ ಶುರುವಾದ ಈ ಧಾರಾವಾಹಿಯು 2023ರಲ್ಲಿ ಮುಕ್ತಾಯಗೊಂಡರೂ ಇಂದಿಗೂ ಹರ್ಷ ಪಾತ್ರ ಹಸಿರಾಗಿದೆ. ಇವರ ಸ್ಟೈಲ್, ಮಾತುಗಾರಿಕೆಗೆ ಅನೇಕ ಮಂದಿ ಫ್ಯಾನ್ಸ್ ಇದ್ದಾರೆ. ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ​​ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿದ್ದು ಸೀರಿಯಲ್. ಹೀಗಿದ್ದರೂ ಇವರು ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿಲ್ಲ.

ಇದರ ಮಧ್ಯೆ ಇತ್ತೀಚೆಗಷ್ಟೆ ಕಿರಣ್ ರಾಜ್ ಕಿರುತೆರೆಗೆ ಎಂಟ್ರಿ ಕೊಡುವ ಬಗ್ಗೆ ಘೋಷಿಸಿದರು. ಕಿರಣ್ ಸದ್ಯ ಹೊಸ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಕಲರ್ಸ್ ಕನ್ನಡದ ಬದಲು ಝೀ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರ್ಣನಾಗಿ ಮತ್ತೆ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಅವರು ಸಜ್ಜಾಗಿದ್ದಾರೆ. ಈಗಾಗಲೇ ಹೊಸ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದ್ದು ಅದ್ಭುತ ಪ್ರತಿಕ್ರಿಯೆ ಕೇಳಿಬಂದಿದೆ. ಝೀ ಕನ್ನಡ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಅಪ್ ಲೋಡ್ ಆಗಿರುವ ಈ ಪ್ರೋಮೋ ಈಗಾಗಲೇ ದಾಖಲೆಯ ವೀವ್ಸ್ ಪಡೆದಿದೆ.

ಝೀ ಕನ್ನಡ ವಾಹಿನಿಯು ಈ ಹೊಸ ಧಾರಾವಾಹಿಯನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ ಎನ್ನಲಾಗಿತ್ತು. ಆದರೆ, ಒಂದು ಪ್ರೊಮೋ ಬಿಟ್ಟು ಸುಮಾರು ಒಂದು ತಿಂಗಳಾದರೂ ಈ ಧಾರಾವಾಹಿ ಕಡೆಯಿಂದ ಅಥವಾ ಚಾನೆಲ್ ಕಡೆಯಿಂದ ಯಾವುದೇ ಅಪ್ಡೇಟ್ ಇಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಈ ಧಾರಾವಾಹಿಗೆ ಹೀರೋಯಿನ್ ಎಂದು ಹೇಳಲಾಗಿತ್ತು. ಕಿರಣ್ ರಾಜ್ ಜೊತೆಗಿನ ಪ್ರೊಮೋ ಶೂಟಿಂಗ್​ನ ವಿಡಿಯೋ ಕೂಡ ಲೀಕ್ ಆಗಿತ್ತು. ಆದರೆ, ಇದರ ಬಗ್ಗೆ ಈಗ ಯಾವುದೇ ಸುದ್ದಿಯಿಲ್ಲ.

ಇವೆಲ್ಲದರ ಮಧ್ಯೆ ಕಿರಣ್ ರಾಜ್ ತಮ್ಮ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ರಾನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಿರಣ್ ರಾಜ್ ಈಗ ಜಾಕಿ 42 ಅನ್ನೋ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿದ್ದು, ಶೂಟಿಂಗ್ ಸ್ಟಾರ್ಟ್ ಆದಂತಿದೆ. ಕಿರಣ್ ತಮ್ಮ ಇನ್​ಸ್ಟಾ ಪೇಜ್​ನಲ್ಲಿ ಶೂಟಿಂಗ್ ಫೋಟೋವನ್ನು ಹಂಚಿಕೊಳ್ಳುತ್ತಾ ಇದ್ದಾರೆ. ಆದರೆ, ಕರ್ಣ ಧಾರಾವಾಹಿ ಬಗ್ಗೆ ಮಾತ್ರ ಯಾವುದೇ ಅಪ್ಡೇಟ್ ಇಲ್ಲ.

Rajath Kishan: ನಡುರಾತ್ರಿ ರೋಡ್​ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ರಜತ್ ಕಿಶನ್: ವಿಡಿಯೋ

ಶ್ರುತಿ ನಾಯ್ಡು ನಿರ್ಮಾಣದ ಕರ್ಣ ಸೀರಿಯಲ್‌ನಲ್ಲಿ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಶ್ಯಾಮ್ ಸಿಮ್ರನ್, ವರಲಕ್ಷ್ಮೀ ಶ್ರೀನಿವಾಸ್‌ ಮುಂತಾದವರು ನಟಿಸಲಿದ್ದಾರೆ. ಈ ಧಾರಾವಾಹಿಯಲ್ಲಿ ಕರ್ಣ (ಕಿರಣ್‌ ರಾಜ್‌) ಪ್ರಶಸ್ತಿ ಪುರಸ್ಕೃತ ಸ್ತ್ರೀರೋಗ ತಜ್ಞನಾಗಿದ್ದಾನೆ. ಆದರೆ, ಈತ ತನ್ನದೇ ಮನೆಯಲ್ಲಿ ಅನಾಥನಂತೆ ಬದುಕುತ್ತಿರುತ್ತಾನೆ. ಹೊರಗಿನ ಪ್ರಪಂಚಕ್ಕೆ ಜನಪ್ರಿಯ ಡಾಕ್ಟರ್‌ ಆಗಿದ್ದರೂ ಕೂಡ ಮನೆಯಲ್ಲಿ ಮಾತ್ರ ಕೆಲಸಗಾರನಂತೆ ಇರುತ್ತಾನೆ. ಮನೆಯ ಎಲ್ಲಾ ಸದಸ್ಯರ ಕೆಲಸವನ್ನು ತಾನೇ ಮಾಡುವ ಕರ್ಣ ಅಮ್ಮ, ಅಜ್ಜಿಯ ಪಾಲಿಗೆ ಮುದ್ದಿನ ಮಗ. ಎಲ್ಲ ನೋವನ್ನು ನುಂಗುತ್ತಾ, ಕಷ್ಟಗಳನ್ನು ಎದುರಿಸುವುದೇ ಈ ಧಾರಾವಾಹಿಯ ಕಥಾ ವಸ್ತು. ಆದರೆ, ಇದು ಯಾವಾಗ ಶುರುವಾಗುತ್ತೆ ಎಂಬುದು ಕಾದುನೋಡಬೇಕಿದೆ.