ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Deverakonda: ಹಿಂದಕ್ಕೆ ಹೋಗೋ ಚಾನ್ಸ್ ಸಿಕ್ರೆ ಔರಂಗಜೇಬನ ಕಪಾಳಕ್ಕೆ ಬಾರಿಸುತ್ತಿದೆ- ವಿಜಯ್ ದೇವರಕೊಂಡ

ರೆಟ್ರೋ ಟೀಂ ಬಗ್ಗೆ ನಟ ವಿಜಯ್ ದೇವರಕೊಂಡ ಮನಸಾರೆ ಮೆಚ್ಚಿ ಹೊಗಳಿದ್ದಾರೆ. ರೆಟ್ರೋ ಸಿನಿಮಾದ ಹಲವು ವಿಚಾರಗಳ ಬಗ್ಗೆ    ಕೆಲವು ಇನ್ ಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ರೆಟ್ರೋ ಚಾನ್ಸ್ ನಿಮ್ಮ ನಿಜ ಬದುಕಿಗೆ ಸಿಕ್ಕರೆ ಏನು ಮಾಡ್ತೀರಿ ಎಂದು ನಿರೂಪಕಿ ಒಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ನಟ, ತಾವು ಔರಂಗಜೇಬನನ್ನು ಸರಿಯಾಗಿ ಹೊಡೆಯಬೇಕು ಎಂದು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಅರೇ ವಿಜಯ್ ದೇವರಕೊಂಡ ಅವರು ಈ ಪರಿಯಾಗಿ ಔರಂಗಜೇಬನನ್ನು  ದ್ವೇಷ ಮಾಡಲು ಕಾರಣ ಏನಿರಬಹುದು ಎಂಬ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಉಂಟಾಗಿದೆ.

ರೆಟ್ರೋ ಸಿನಿಮಾದ ಬಗ್ಗೆ ನಟ ವಿಜಯ್ ದೇವರಕೊಂಡ ಹೇಳಿಕೊಂಡಿದ್ದೇನು?

Profile Pushpa Kumari Apr 28, 2025 3:16 PM

ನವದೆಹಲಿ: ತಮಿಳು ಸೂಪರ್‌ಸ್ಟಾರ್ ಸೂರ್ಯ ಅಭಿನಯದ  ರೆಟ್ರೋ ಸಿನಿಮಾತಂಡ  ಈಗಾಗಲೇ ಭರ್ಜರಿ ಪ್ರಚಾರ ಮಾಡುತ್ತಿದೆ. ಈ ಹಿಂದೆ ಟ್ರೈಲರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿ, ಇದೀಗ ನಟ ವಿಜಯ ದೇವರಕೊಂಡ (Vijay Deverakonda) ಸಾರಥ್ಯದಲ್ಲಿ ಪ್ರೀ ರಿಲೀಸ್ ಇವೆಂಟ್ ಕೂಡ ಅದ್ಧೂರಿಯಾಗಿಯೇ ನೆರವೇರಿದೆ. ರೆಟ್ರೋ ಟೀಂ ಬಗ್ಗೆ ನಟ ವಿಜಯ್ ದೇವರಕೊಂಡ ಮನಸಾರೆ ಮೆಚ್ಚಿ ಹೊಗಳಿದ್ದಾರೆ. ರೆಟ್ರೋ ಸಿನಿಮಾದ ಹಲವು ವಿಚಾರಗಳ ಬಗ್ಗೆ ಕೆಲವು ಇನ್‌ಟ್ರೆಸ್ಟಿಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ. ರೆಟ್ರೋ ಚಾನ್ಸ್ ನಿಮ್ಮ ನಿಜ ಬದುಕಿಗೆ ಸಿಕ್ಕರೆ ಏನು ಮಾಡ್ತೀರಿ ಎಂದು ನಿರೂಪಕಿ ಒಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ನಟ, ತಾವು ಔರಂಗಜೇಬನನ್ನು ಸರಿಯಾಗಿ ಹೊಡೆಯಬೇಕು ಎಂದು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಅರೇ ವಿಜಯ್ ದೇವರಕೊಂಡ ಅವರು ಈ ಪರಿಯಾಗಿ ಔರಂಗಜೇಬನನ್ನು  ದ್ವೇಷ ಮಾಡಲು ಕಾರಣ ಏನಿರಬಹುದು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಉಂಟಾಗಿದೆ.

ರೆಟ್ರೋ ಸಿನಿಮಾದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಸೂರ್ಯ ಜೀವತುಂಬಿದ್ದಾರೆ. ಜಯರಾಂ, ಪ್ರಕಾಶ್ ರಾಜ್, ನಾಸರ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಕೆಲವು  ಸಾಂಗ್  ರಿಲೀಸ್ ಆಗಿ ಹೈಪ್ ಸೃಷ್ಟಿ ಮಾಡಿತ್ತು. ರಿಲೀಸ್ ಆಗಲು ಇನ್ನೇನು ಕೆಲವೇ ದಿನ ಬಾಕಿ ಇದ್ದ ಕಾರಣ ಹೈದ್ರಾಬಾದ್ ನಲ್ಲಿ ರೆಟ್ರೋ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿದ್ದು ನಟ  ವಿಜಯ್ ದೇವರಕೊಂಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ರೆಟ್ರೋ ಸಿನಿಮಾದ ಬಗ್ಗೆ  ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ನಿರೂಪಕಿ ಸುಮಾ ಅವರು ನಟ ವಿಜಯ್ ಅವರಿಗೆ ನೀವು ರೆಟ್ರೋ ಕಾಲಕ್ಕೆ ಹೋದರೆ ಯಾರನ್ನು ಭೇಟಿ ಮಾಡಲು ಇಷ್ಟ ಪಡುತ್ತೀರಿ ? ಎಂದು ಪ್ರಶ್ನೆ ಕೇಳಿದ್ದಾಗ ನಟ ವಿಜಯ್ ದೇವರಕೊಂಡ ಉತ್ತರಿಸಿದ್ದಾರೆ. ನಾನು ಬ್ರಿಟಿಷರನ್ನು ಭೇಟಿಯಾಗಿ ಅವರಿಗೆ ಹೊಡೆಯಲು ಬಯಸುತ್ತೇನೆ. ನಾನು ಇತ್ತೀಚೆಗೆ ಛಾವಾ ಸಿನಿಮಾ ನೋಡಿದೆ  ಅದು ನನ್ನ ಕೋಪವನ್ನು ಕೆರಳಿಸಿತು. ನಾನು ರೆಟ್ರೋ  ಅವಕಾಶವನ್ನು ಬಳಸಿಕೊಂಡು ಔರಂಗಜೇಬ್‌ಗೆ ಎರಡು ಮೂರು ಬಾರಿ ಹೊಡೆದು ಸರಿಯಾಗಿ ಪಾಠ ಕಲಿಸಿ ತಕ್ಕ ಶಿಕ್ಷೆ ಕೊಡಲು ಬಯಸುತ್ತೇನೆ ಎಂದು ನಟ ವಿಜಯ್ ದೇವರ ಕೊಂಡ ಅವರು ನಿರೂಪಕಿಯ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: Actor Vijay: ಇಸ್ಲಾಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾದ ನಟ ವಿಜಯ್- ಏನಿದು ವಿವಾದ?

ರೆಟ್ರೋ ಕಾಲದಲ್ಲಿ ಹಿಂದಿರುಗಲು ಸಾಧ್ಯವಾದರೆ  ಸಿಮ್ರಾನ್ ಮತ್ತು ಸೋನಾಲಿ ಬೇಂದ್ರೆ ಅಥವಾ ಜ್ಯೋತಿಕಾ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಆದರೆ ಜ್ಯೋತಿಕಾ  ಸೂರ್ಯ ಅವರನ್ನು ಮದುವೆ‌ಯಾಗಿ ರುವುದರಿಂದ ಅವರ ಹೆಸರು ಹೇಳಲು ಸ್ವಲ್ಪ ಹಿಂಜರಿಯುತ್ತಿರುವುದಾಗಿ ಕೂಡ ಅವರು ತಿಳಿಸಿದ್ದಾರೆ. ನಟ ವಿಜಯ್ ದೇವರಕೊಂಡ ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಚಿತ್ರದಲ್ಲಿ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡು ಇದು ಉತ್ತಮ ಪ್ರತಿಕ್ರಿಯೆ ಪಡೆಯಿತು. ಸದ್ಯ ಇವರು ಗೌತಮ್ ತಿನ್ನನುರಿ ಅವರ ಕಿಂಗ್‌ಡಮ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಸೂರ್ಯ ಅಭಿನಯದ ರೆಟ್ರೋ ಸಿನಿಮಾ ಬಿಡುಗಡೆಗೂ ಮುನ್ನವೇ ಈಗಾಗಲೇ ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡು ಕೊಂಡಿದೆ. ಸಿನಿಮಾ ತೆರೆಕಂಡು 40 ದಿನಗಳ ಬಳಿಕ ಓಟಿಟಿಗೆ ಬರುವ ಸಾಧ್ಯತೆಯಿದೆ. ಸೂರ್ಯ ಮತ್ತು ಪೂಜಾ ಹೆಗ್ಡೆ ಅಭಿನಯದ ರೆಟ್ರೋ ಚಿತ್ರವು ಮೇ 1ರಿಲೀಸ್ ಆಗಲಿದೆ. ಅದೇ ದಿನ ನಾನಿ ಅವರ HIT 3 ಚಿತ್ರವು ಸಹ ಬಿಡುಗಡೆ ಆಗಲಿದ್ದು  ಈ ಎರಡೂ ಚಿತ್ರಗಳಿಗೂ ಸಾಕಷ್ಟು ನಿರೀಕ್ಷೆ ಇದೆ. ಯಾವ ಸಿನಿಮಾ ಅಭಿಮಾನಿಗಳ ಮನ ಗೆಲ್ಲುತ್ತೆ ಎಂದು ಕಾದು ನೋಡಬೇಕು.