Rajath Kishan: ನಡುರಾತ್ರಿ ರೋಡ್ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ರಜತ್ ಕಿಶನ್: ವಿಡಿಯೋ
ಹೀಗಿರುವಾಗ ರಜತ್ ಕಿಶನ್ ಅವರು ತಮ್ಮ ಪತ್ನಿ ಅಕ್ಷಿತಾ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿ ಸುದ್ದಿಯಲ್ಲಿದ್ದಾರೆ. ರಜತ್ ಕಿಶನ್ ಹಾಗೂ ಅಕ್ಷಿತಾ ದಂಪತಿ ರಾತ್ರಿ ವೇಳೆ ರಸ್ತೆಯಲ್ಲಿ ಮ್ಯಾರೇಜ್ ಆನಿವರ್ಸರಿಯನ್ನು ಭರ್ಜರಿ ಆಗಿ ಆಚರಿಸಿಕೊಂಡಿದ್ದಾರೆ. ರಸ್ತೆ ಪಕ್ಕದಲ್ಲಿ ಕೇಕ್ ಕಟ್ ಮಾಡಿ ರಜತ್ - ಅಕ್ಷಿತಾ ಸಂತಸಪಟ್ಟಿದ್ದಾರೆ.

Rajath Kishan Akshitha

ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಬಳಿಕ ರಜತ್ ಕಿಶನ್ (Rajath Kishan) ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ಒಂದಲ್ಲ ಒಂದು ವಿಚಾರದ ಮೂಲಕ ಇವರು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್ Vs ಗರ್ಲ್ಸ್ ರಿಯಾಲಿಟಿ ಶೋನಲ್ಲೂ ಇವರು ಮಿಂಚುತ್ತಿದ್ದಾರೆ. ಇವರ ಪಂಚಿಂಗ್ ಡೈಲಾಗ್ಗೆಂದೇ ಅಭಿಮಾನಿ ಬಳಗ ಹುಟ್ಟುಕೊಂಡಿದೆ. ಇತ್ತೀಚೆಗಷ್ಟೆ ಇವರು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಜೈಲಿಗೆ ಹೋಗಿ ಬಂದಿದ್ದರು. ಈ ಪ್ರಕರಣದಿಂದ ಇವರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಹೀಗಿರುವಾಗ ರಜತ್ ಕಿಶನ್ ಅವರು ತಮ್ಮ ಪತ್ನಿ ಅಕ್ಷಿತಾ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿ ಸುದ್ದಿಯಲ್ಲಿದ್ದಾರೆ. ರಜತ್ ಕಿಶನ್ ಹಾಗೂ ಅಕ್ಷಿತಾ ದಂಪತಿ ರಾತ್ರಿ ವೇಳೆ ರಸ್ತೆಯಲ್ಲಿ ಮ್ಯಾರೇಜ್ ಆನಿವರ್ಸರಿಯನ್ನು ಭರ್ಜರಿ ಆಗಿ ಆಚರಿಸಿಕೊಂಡಿದ್ದಾರೆ. ರಸ್ತೆ ಪಕ್ಕದಲ್ಲಿ ಕೇಕ್ ಕಟ್ ಮಾಡಿ ರಜತ್ - ಅಕ್ಷಿತಾ ಸಂತಸಪಟ್ಟಿದ್ದಾರೆ.
ರಜತ್ - ಅಕ್ಷಿತಾ ಮದುವೆ ವಾರ್ಷಿಕೋತ್ಸವದ ಸೆಲೆಬ್ರೇಷನ್‌ನಲ್ಲಿ ಸ್ನೇಹಿತರು, ಆಪ್ತರು ಹಾಜರಿದ್ದರು. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ಯಾವುದೇ ಸ್ಪರ್ಧಿಗಳು ಇದರಲ್ಲಿ ಇರಲಿಲ್ಲ. ಪರಸ್ಪರ ಪ್ರೀತಿಸಿ ಮದುವೆಯಾದ ಅಕ್ಷಿತಾ - ರಜತ್ ಮಧ್ಯರಾತ್ರಿಯಲ್ಲಿ ರಸ್ತೆಪಕ್ಕದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ದಂಪತಿಗೆ ಹಾರ ಹಾಕಿ ಸ್ನೇಹಿತರು ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಕನ್ನಡ 11 ರಲ್ಲಿ ಯಾರೂ ಊಹಿಸದಂತೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಜತ್ ಇತರೆ ಸ್ಪರ್ಧಿಗಳಿಗೆ ಸಖತ್ ಆಗಿ ಠಕ್ಕರ್ ಕೊಟ್ಟಿದ್ದರು. ವೈಲ್ಡ್ ಕಾರ್ಡ್ ಮೂಲಕ ಬಂದರೂ ಫಿನಾಲೆಯಲ್ಲಿ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಸದ್ಯ ಇವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಸ್ಪರ್ಧಿಯಾಗಿದ್ದು, ಸಖತ್ ಮನರಂಜನೆ ನೀಡುತ್ತಿದ್ದಾರೆ. ಇದೇ ಶೋನಲ್ಲಿ ಇವರು ಸ್ನೇಹಿತರಾದ ವಿನತ್ ಗೌಡ ಜೊತೆ ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಸದ್ಯ ರಜತ್ ಬೇಲ್ ಮೇಲೆ ಹೊರಬಂದಿದ್ದಾರೆ.
Bhagya Lakshmi Serial: ಪತಿಯ ಆಫೀಸ್ನಲ್ಲಿ ಭಾಗ್ಯಾಳ ಹವಾ: ತಾಂಡವ್-ಶ್ರೇಷ್ಠಾಳನ್ನು ಕೆಲಸದಿಂದ ಕಿತ್ತೆಸೆದ ಬಾಸ್