ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonu Sigam: ಗೂಂಡಾಗಳಂತೆ ವರ್ತಿಸುತ್ತಿದ್ದರು.... ಮತ್ತೆ ಕನ್ನಡಿಗರನ್ನು ಕೆಣಕಿದ ಸೋನು ನಿಗಮ್‌

Sonu Nigam Controversy: ಕೆಲವು ದಿನಗಳ ಹಿಂದೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ಗಾಯಕ ಸೋನು ನಿಗಮ್‌ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಲು ಹೋಗಿ ಮತ್ತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಮತ್ತೆ ಕನ್ನಡಿಗರನ್ನು ಅಣಕಿಸಿ ಕನ್ನಡಿಗರನ್ನು ಕೆಣಕಿದ್ದಾರೆ.

ಕನ್ನಡ ಕನ್ನಡ ಎಂದವರನ್ನು ಮತ್ತೆ ಅಣಕಿಸಿದ ಸೋನು ನಿಗಮ್!

Profile Rakshita Karkera May 3, 2025 4:52 PM

ಬೆಂಗಳೂರು: ಇತ್ತೀಚೆಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ (Sonu Nigam) ಇದೀಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿದ್ದಾರೆ. ತಮ್ಮ ವಿವಾದಾತ್ಮಕ ಹೇಳಿಕೆಗೆ ವಿಡಿಯೊವೊಂದನ್ನು ರಿಲೀಸ್‌ ಮಾಡಿ ಸ್ಪಷ್ಟನೆ ಕೊಟ್ಟಿರುವ ಸೋನು ನಿಗಮ್‌ ಮತ್ತೆ ಕನ್ನಡಿಗರನ್ನು ಕೆಣಕಿದ್ದಾರೆ. ವಿಡಿಯೊದಲ್ಲಿ ಕನ್ನಡಿಗರನ್ನು ಅಣಕಿಸಿದ್ದು ಮಾತ್ರವಲ್ಲದೇ ಗೂಂಡಾಗಳು ಎಂಬ ಪದ ಬಳಕೆ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು,ಸೋನು ನಿಗಮ್‌ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಡಿಯೊದಲ್ಲಿ ಸೋನು ನಿಗಮ್‌ ಹೇಳಿದ್ದೇನು?

ತಮ್ಮ ಹೇಳಿಕೆಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸೋನು ನಿಗಮ್‌ ವಿಡಿಯೊವೊಂದನ್ನು ರಿಲೀಸ್‌ ಮಾಡಿದ್ದಾರೆ. ವಿಡಿಯೊದಲ್ಲಿ ಕನ್ನಡ... ಕನ್ನಡ... ಕೂಗುವಲ್ಲಿ ವ್ಯತ್ಯಾಸ ಇದೆ. ನಾಲ್ಕೈದು ಜನ ಗೂಂಡಾ ರೀತಿಯಲ್ಲಿ ವರ್ತಿಸುತ್ತಾ ಅಲ್ಲಿ ಕನ್ನಡ ಕನ್ನಡ ಎಂದು ಕೂಗುತ್ತಿದ್ದರು. ಸುಮ್ಮನಿರುವಂತೆ ಅಲ್ಲಿ ಅನೇಕರು ಅವರಿಗೆ ಮನವಿ ಮಾಡುತ್ತಿದ್ದರು. ಕಾರ್ಯಕ್ರಮದ ವಾತಾವರಣ ಹಾಳು ಮಾಡದಿರಿ ಎಂದು ಹೇಳುವುದು ಅನಿವಾರ್ಯವಾಗಿತ್ತು. ಪ್ರೇಕ್ಷಕರಾಗಿ ಬೆದರಿಕೆ ಹಾಕುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಉಗ್ರರು ಭಾಷೆ ಯಾವುದೆಂದು ಕೇಳಿರಲಿಲ್ಲ. ಹೀಗಾಗಿ ಅವರಿಗೆ ತಿಳಿ ಹೇಳುವುದು ಅನಿವಾರ್ಯವಾಗಿತ್ತು. ಹಾಗಂತ ಹೇಳಿ ಕನ್ನಡಿಗೆರೆಲ್ಲರೂ ಕೆಟ್ಟವರೆಂದಲ್ಲ. ಅಲ್ಲಿನ ಜನರು ಬಹಳ ಒಳ್ಳೆಯವರು. ದೇಶದ ಯಾವ ಭಾಗಕ್ಕೆ ಹೋದರೂ ಇಂತಹ ಕೆಲವೊಂದು ಜನರಿರುತ್ತಾರೆ. ಅಂತಹವರನ್ನು ಆ ಕ್ಷಣವೇ ತಡೆಯುವುದು ಅತ್ಯವಶ್ಯಕ. ಪ್ರೀತಿಯ ಭೂಮಿಯಲ್ಲಿ ದ್ವೇಷದ ಬೀಜ ಬಿತ್ತುವುದನ್ನು ತಡೆಯಲೇಬೇಕು. ಅಲ್ಲಿದ್ದ ನಾಲ್ಕೈದು ಜನ ಕನ್ನಡ ಹಾಡುವಂತೆ ಬೇಡಿಕೆ ಇಟ್ಟಿರಲಿಲ್ಲ. ಬದಲಾಗಿ ಅವರು ನನಗೆ ಬೆದರಿಕೆ ಹಾಕಿದ್ದರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಸೋನು ನಿಗಮ್‌ ವಿಡಿಯೊ ಇಲ್ಲಿದೆ

ಈ ಸುದ್ದಿಯನ್ನೂ ಓದಿ: Sonu Nigam: ಕನ್ನಡಿಗರ ಕುರಿತು ವಿವಾದಾತ್ಮಕ ಹೇಳಿಕೆ; ಗಾಯಕ ಸೋನು ನಿಗಮ್‌ ವಿರುದ್ಧ ಎಫ್‌ಐಆರ್‌ ದಾಖಲು

ಇದೀಗ ಸೋನು ನಿಗಮ್‌ ಅವರ ಈ ವಿಡಿಯೊ ಭಾರೀ ವೈರಲಾಗುತ್ತಿದ್ದು, ಕನ್ನಡಿಗರನ್ನು ಗೂಂಡಾ ಎಂದು ಕರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.