RCB vs CSK: ʻ19ನೇ ಓವರ್‌ನಲ್ಲಿ 33 ರನ್ʼ-ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಖಲೀಲ್ ಅಹ್ಮದ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಖಲೀಲ್ ಅಹ್ಮದ್, ಬೌಲ್ ಮಾಡಿದ ಮೂರು ಓವರ್‌ಗಳಿಗೆ 65 ರನ್ ಕೊಟ್ಟರು. ಆ ಮೂಲಕ ಐಪಿಎಲ್‌ನ 3 ಓವರ್‌ಗಳ ಸ್ಪೆಲ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಖಲೀಲ್ ಅಹ್ಮದ್ ಹೆಗಲೇರಿಸಿಕೊಂಡಿದ್ದಾರೆ.

ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಖಲೀಲ್ ಅಹ್ಮದ್.

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಖಲೀಲ್ ಅಹ್ಮದ್ (Khaleel Ahmed) ಅವರು ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಕಳೆದ ಪಂದ್ಯಗಳಲ್ಲಿ ತಮ್ಮ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದರು. ಆದರೆ, ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅತ್ಯಂತ ದುಬಾರಿಯಾದರು. ಆ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಹೆಗಲೇರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಿಗೆ 213 ರನ್‌ಗಳನ್ನು ಕಲೆ ಹಾಕಿತ್ತು.
ಈ ಪಂದ್ಯದಲ್ಲಿ ಖಲೀಲ್ ಅಹ್ಮದ್ ತಮ್ಮ ಬೌಲಿಂಗ್‌ನಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ಬ್ಯಾಟಿಂಗ್ ಸ್ನೇಹಿ ವಿಕೆಟ್‌ನಲ್ಲಿ ಸಿಎಸ್‌ಕೆ ವೇಗಿ ಮ್ಯಾಜಿಕ್ ಮಾಡುವಲ್ಲಿ ವಿಫಲರಾದರು. ಅವರು ವಿಶೇಷವಾಗಿ 19ನೇ ಓವರ್‌ನಲ್ಲಿ ರೊಮ್ಯಾರಿಯೊ ಶೆಫರ್ಡ್ 4 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 33 ರನ್‌ಗಳನ್ನು ಚಚ್ಚಿದ್ದರು. ಈ ಪಂದ್ಯದಲ್ಲಿ ಒಟ್ಟು ಮೂರು ಓವರ್‌ಗಳನ್ನು ಬೌಲ್ ಮಾಡಿದ್ದ ಖಲೀಲ್ ಅಹ್ಮದ್, 21.70 ಎಕಾನಮಿ ರೇಟ್‌ನಲ್ಲಿ ಬರೋಬ್ಬರಿ 65 ರನ್‌ಗಳನ್ನು ಸಿಡಿಸಿದರು. ಇದರಲ್ಲಿ ಇವರು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.
IPL 2025: ಆರ್‌ಸಿಬಿ ಪರ 300 ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ!
ಪವರ್‌ಪ್ಲೇನಲ್ಲಿ ಖಲೀಲ್ ಅಹ್ಮದ್‌ಗೆ ವಿರಾಟ್ ಕೊಹ್ಲಿ ಹಾಗೂ ಜಾಕೋಬ್ ಬೆಥೆಲ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ನಂತರ ಡೆತ್ ಓವರ್‌ಗಳಲ್ಲಿ ಖಲೀಲ್ ಅಹ್ಮದ್ ಎದುರು ರೊಮ್ಯಾರಿಯೊ ಶೆಫರ್ಡ್ ಅಬ್ಬರಿಸಿದರು. ಆ ಮೂಲಕ ಸಿಎಸ್‌ಕೆ ವೇಗದ ಬೌಲರ್ ಈ ಪಂದ್ಯದಲ್ಲಿ ಚೆನ್ನೈಗೆ ಯಾವುದೇ ರೀತಿಯಲ್ಲಿ ನೆರವಾಗಿಲ್ಲ.
𝙍𝙤𝙢𝙖𝙧𝙞𝙤 𝙍𝙖𝙢𝙥𝙖𝙜𝙚 🔥
— IndianPremierLeague (@IPL) May 3, 2025
Most runs in a single over this season, courtesy of the power-packed Romario Shepherd 😮💪
Watch the video here: https://t.co/GvsbUiBPdx#TATAIPL | #RCBvCSK | @RCBTweets pic.twitter.com/MGCcIpRlIi
ಅನಗತ್ಯ ದಾಖಲೆ ಬರೆದ ಖಲೀಲ್
ಖಲೀಲ್ ಅಹ್ಮದ್ ಅವರು ಬೌಲ್ ಮಾಡಿದ ಮೂರು ಓವರ್‌ಗಳಲ್ಲಿ 65 ರನ್‌ಗಳನ್ನು ಬಿಟ್ಟುಕೊಟ್ಟರು. ಐಪಿಎಲ್ ಟೂರ್ನಿಯ ಪಂದ್ಯವೊಂದರ ಮೂರು ಓವರ್‌ಗಳ ಸ್ಪೆಲ್‌ನಲ್ಲಿ ಅತಿ ಹೆಚ್ಚು ರನ್ ಹೊಡೆಸಿಕೊಂಡ ಮೊದಲ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಖಲೀಲ್ ಅಹ್ಮದ್ ಹೆಗಲೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್, ಐಪಿಎಲ್ ಇತಿಹಾಸದ 4 ಓವರ್‌ಗಳ ಅತ್ಯಂತ ದುಬಾರಿ ಸ್ಪೆಲ್ ಬೌಲ್ ಮಾಡಿದ್ದರು. ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 4 ಓವರ್‌ಗಳಿಗೆ ಬರೋಬ್ಬರಿ 76 ರನ್‌ಗಳನ್ನು ನೀಡಿದ್ದರು.
IPL 2025: ಆರ್‌ಸಿಬಿ ಈ ಸಲ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದ ಸುನೀಲ್ ಗವಾಸ್ಕರ್!
ಅಂದ ಹಾಗೆ ಓವರ್ ಲೆಕ್ಕದಲ್ಲಿ ಖಲೀಲ್ ಅಹ್ಮದ್ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪೆಲ್ ಆಗಿದೆ. ಆರ್‌ಸಿಬಿ 17.4 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 157 ರನ್‌ಗಳನ್ನು ಕಲೆ ಹಾಕಿತ್ತು. ಈ ವೇಳೆ ಆರ್‌ಸಿಬಿ 200 ರನ್‌ಗಳ ಗಡಿಯನ್ನು ತಲುಪುವುದೂ ಅನುಮಾನ ಎಂದು ಹೇಳಲಾಗಿತ್ತು. ಆದರೆ, ರೊಮ್ಯಾರಿಯೊ ಶೆಫರ್ಡ್ ಸ್ಪೋಟಕ ಬ್ಯಾಟ್ ಮಾಡಿ, ಸಿಎಸ್‌ಕೆ ಬೌಲರ್‌ಗಳ ಆತ್ಮ ವಿಶ್ವಾಸವನ್ನು ಕುಗ್ಗಿಸಿದರು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ, ಸಿಎಸ್‌ಕೆ ಸವಾಲಿನ ಮೊತ್ತದ ಗುರಿಯನ್ನು ನೀಡುವಲ್ಲಿ ಸಫಲವಾಯಿತು.