ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: ಚೆನ್ನೈ ಸೂಪರ್‌ ಕಿಂಗ್ಸ್‌ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಎಂಎಸ್‌ ಧೋನಿ!

MS Dhoni on CSK's Lost against RCB: ರಾಯಲ್‌ ಚಾಲೆಂಜರ್ಸ್‌ ಬೆಂಗಳುರು ವಿರುದ್ಧ ಕೊನೆಯ ಎಸೆತದವರೆಗೂ ಕಠಿಣ ಹೋರಾಟ ನಡೆಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಕೇವಲ ಎರಡು ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಪಂದ್ಯದ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ತಮ್ಮ ತಂಡದ ಸೋಲಿಗೆ ಕಾರಣವಾದ ಅಂಶವನ್ನು ರಿವೀಲ್‌ ಮಾಡಿದ್ದಾರೆ.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ಸೋಲಿಗೆ ಕಾರಣ ತಿಳಿಸಿದ ಎಎಸ್‌ಡಿ!

ಸಿಎಸ್‌ಕೆ ಸೋಲಿನ ಬಗ್ಗೆ ಎಂಎಸ್‌ ಧೋನಿ ಪ್ರತಿಕ್ರಿಯಿಸಿದ್ದಾರೆ.

Profile Ramesh Kote May 4, 2025 2:15 AM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳುರು(RCB) ತಂಡದ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ (CSK)ತಂಡದ ಸೋಲಿಗೆ ಜವಾಬ್ದಾರಿಯನ್ನು ಸಿಎಸ್‌ಕೆ ನಾಯಕ ಎಂಎಸ್‌ ಧೋನಿ (MS Dhoni) ತೆಗೆದುಕೊಂಡಿದ್ದಾರೆ. ಚೇಸಿಂಗ್‌ ಸಮಯದಲ್ಲಿ ಕೆಲ ಎಸೆತಗಳನ್ನು ದೊಡ್ಡ ಹೊಡೆತಗಳನ್ನಾಗಿ ಪರಿವರ್ತಿಸಬೇಕಾಗಿತ್ತೆಂದು ಹೇಳಿದ್ದಾರೆ. ಈ ಆಯುಷ್‌ ಮ್ಹಾತ್ರೆ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ ಬಲದಿಂದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಬಹುತೇಕ ಗೆಲುವಿನ ಸನಿಹದಲ್ಲಿತ್ತು. ಆದರೆ, ಯಶ್‌ ದಯಾಳ್‌ ಸೇರಿದಂತೆ ಆರ್‌ಸಿಬಿ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಸಿಎಸ್‌ಕೆ ಅಂತಿಮ ಕೇವಲ ಎರಡು ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು.

ಪಂದ್ಯದ ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಗೆಲ್ಲಲು 15 ರನ್‌ ಅಗತ್ಯವಿತ್ತು. ಕೊನೆಯ ಓವರ್‌ನಲ್ಲಿ ಯಶ್‌ ದಯಾಳ್‌ ಅವರು ಅಚ್ಚುಕಟ್ಟಾಗಿ ಬೌಲ್‌ ಮಾಡಿದರು. ನೋ ಬಾಲ್‌ ಎಸೆತದಲ್ಲಿ ಸಿಕ್ಸರ್‌ ಕೊಟ್ಟರೂ ಎಂಎಸ್‌ ಧೋನಿಯನ್ನು ಸರಿಯಾದ ಸಮಯದಲ್ಲಿ ದಯಾಳ್‌ ಔಟ್‌ ಮಾಡಿದರು. ಕೊನೆಯ ಮೂರು ಎಸೆತಗಳಲ್ಲಿ ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಅವರನ್ನು ಕಟ್ಟಿ ಹಾಕಿದರು. ಆ ಮೂಲಕ ಆರ್‌ಸಿಬಿಗೆ ಎರಡು ರನ್‌ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಐಪಿಎಲ್‌ ಇತಿಹಾಸದಲ್ಲಿಯೇ ಆರ್‌ಸಿಬಿ ಇದೇ ಮೊದಲ ಬಾರಿ ಏಕೈಕ ಸೀಸನ್‌ಗೆ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು.

IPL 2025: ಆರ್‌ಸಿಬಿ ಪರ 300 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಸೋಲಿನ ಹೊಣೆಯನ್ನು ಹೊತ್ತ ಎಂಎಸ್‌ ಧೋನಿ

ಎಂಎಸ್‌ ಧೋನಿ ಕೊನೆಯಲ್ಲಿ 8 ಎಸೆತಗಳಲ್ಲಿ 12 ರನ್‌ ಗಳಿಸಿದ್ದರು. ಸುಯಶ್‌ ಶರ್ಮಾ ಹಾಗೂ ಯಶ್‌ ದಯಾಳ್‌ ಅವರ ಎಸೆತಗಳಲ್ಲಿ ಎಂಎಸ್‌ ಧೋನಿ ಬೌಂಡರಿ ಹಾಗೂ ಸಿಕ್ಸರ್‌ ಸಿಡಿಸುವಲ್ಲಿ ವಿಫಲರಾದರು.

ಸಿಎಸ್‌ಕೆ ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಎಂಎಸ್‌ ಧೋನಿ, "ನಾನು ಕ್ರೀಸ್‌ಗೆ ಹೋಗಿದ್ದಾಗ, ಆ ಎಸೆತಗಳಲ್ಲಿ ನಮಗೆ ರನ್‌ಗಳು ಅಗತ್ಯವಿತ್ತು. ಕೆಲವೊಂದು ಎಸೆತಗಳನ್ನು ನಾನು ದೊಡ್ಡ ಹೊಡೆತಗಳನ್ನಾಗಿ ಪರಿವರ್ತಿಸಬೇಕಾಗಿತ್ತು. ಆ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದಿತ್ತು. ಹಾಗಾಗಿ ಇದಕ್ಕೆ ನಾನು ಹೊಣೆಯಾಗುತ್ತೇನೆ," ಎಂದು ಹೇಳಿದ್ದಾರೆ.



"ಇದನ್ನು ಹೊರತುಪಡಿಸಿದರೆ, ನಾವು ಒಳ್ಳೆಯ ಆರಂಭವನ್ನು ಪಡೆದಿದ್ದೆವು. ನಂತರ ಮಧ್ಯಮ ಓವರ್‌ಗಳಲ್ಲಿ ಆರ್‌ಸಿಬಿಯನ್ನು ಕಟ್ಟಿ ಹಾಕಿದ್ದೆವು. ಆದರೆ, ಡೆತ್‌ ಓವರ್‌ಗಳಲ್ಲಿ ರೊಮ್ಯಾರಿಯಾ ಶೆಫರ್ಡ್‌ ಅವರ ಬ್ಯಾಟಿಂಗ್‌ ಪಂದ್ಯಕ್ಕೆ ನಿರ್ಣಾಯಕವಾಯಿತು," ಎಂದು ಸಿಎಸ್‌ಕೆ ನಾಯಕ ತಿಳಿಸಿದ್ದಾರೆ.

ಯಾರ್ಕರ್‌ಗಳಲ್ಲಿ ಸುಧಾರಣೆಯನ್ನು ಕಾಣಬೇಕಾಗಿದೆ

"ಹೆಚ್ಚಿನ ಯಾರ್ಕರ್‌ಗಳನ್ನು ಹಾಕಲು ನಾವು ಅಭ್ಯಾಸ ನಡೆಸಬೇಕಾಗಿದೆ. ಯಾವಾಗ ಬ್ಯಾಟ್ಸ್‌ಮನ್‌ ಚೆಂಡನ್ನು ಕನೆಕ್ಟ್‌ ಮಾಡಲು ಪ್ರಾರಂಭಿಸಿದಾಗ, ನೀವು ಯಾರ್ಕರ್‌ ಪ್ರಯೋಗ ಮಾಡಬೇಕಾಗುತ್ತದೆ. ಇಲ್ಲಿ ತಪ್ಪುಗಳು ಸಣ್ಣ ಪ್ರಮಾಣದಲ್ಲಿರಬೇಕು. ನೀವು ಯಾರ್ಕರ್‌ ಅನ್ನು ಕಳೆದುಕೊಂಡರೆ, ಮುಂದಿನ ಎಸೆತದಲ್ಲಿ ಬೌನ್ಸರ್‌ ಹಾಕಬೇಕಾಗುತ್ತದೆ. ಏಕೆಂದರೆ ಬೌನ್ಸರ್‌ನಲ್ಲಿ ದೊಡ್ಡ ಹೊಡೆತವನ್ನು ಹೊಡೆಯಲು ಸಾಧ್ಯವಾಗುವುದಿಲ್ಲ. ಇದರಲ್ಲಿ ನಾವು ಸುಧಾರಣೆ ಕಂಡುಕೊಳ್ಳಬೇಕಾಗಿದೆ," ಎಂದು ಹೇಳಿದ್ದಾರೆ.



ಆಯುಷ್‌ ಮ್ಹಾತ್ರೆಯನ್ನು ಶ್ಲಾಘಿಸಿದ ಧೋನಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ಮಾತನಾಡಿದ ಸಿಎಸ್‌ಕೆ ನಾಯಕ,"ಉರಿಯುತ್ತಿರುವ ಬೆಳಕು ಎಂದರೆ, ಆಯುಷ್‌ ಮ್ಹಾತ್ರೆ ನಿಜವಾಗಿಯೂ ಉತ್ತಮವಾಗಿ ಬ್ಯಾಟ್‌ ಮಾಡಿದ್ದಾರೆ. ನೀವು ಒಂದು ಘಟಕವಾಗಿ ಈ ಪಂದ್ಯದಲ್ಲಿಯೂ ಆಡಬೇಕಾಗಿತ್ತು. ಬ್ಯಾಟಿಂಗ್‌ ದೃಷ್ಟಿಕೋನದಲ್ಲಿ ನಾವು ತುಂಬಾ ಚೆನ್ನಾಗಿ ಆಡಿದ್ದೇವೆಂದು ನನಗೆ ಅನಿಸುತ್ತಿದೆ. ನಾವು ಹೆಚ್ಚಿನ ರನ್‌ಗಳನ್ನು ನೀಡಿದ್ದರೆ, ಬ್ಯಾಟಿಂಗ್‌ನಲ್ಲಿ ಕಮ್‌ಬ್ಯಾಕ್‌ ಮಾಡಬೇಕು. ಈವ ವಿಷಯದಲ್ಲಿ ನಾವು ಸ್ವಲ್ಪ ಎಡವಿದ್ದೇವೆ, ಇದರಲ್ಲಿ ನಾವು ಸ್ವಲ್ಪ ಸುಧಾರಣೆಯನ್ನು ಕಂಡುಕೊಳ್ಳಬೇಕಾಗುತ್ತದೆ," ಎಂದು ತಿಳಿಸಿದ್ದಾರೆ.