Naxal Encounter: ಭದ್ರತಾ ಪಡೆಗಳಿಂದ ಕಾರ್ಯಾಚರಣೆ; 10 ಲಕ್ಷ ರೂ. ಬಹುಮಾನ ಹೊಂದಿದ್ದ ಇಬ್ಬರು ನಕ್ಸಲರ ಹತ್ಯೆ
ಛತ್ತೀಸ್‌ಗಢದ ನಾರಾಯಣಪುರದಲ್ಲಿ ಮಾವೋವಾದಿ ನಾಯಕ ನಂಬಲ ಕೇಶವ್ ರಾವ್ ಅಲಿಯಾಸ್ ಬಸವರಾಜು ಎನ್‌ಕೌಂಟರ್ ನಡೆದ ಕೆಲವು ದಿನಗಳ ನಂತರ, ಶನಿವಾರ ಜಾರ್ಖಂಡ್‌ನ ಲತೇಹಾರ್‌ನಲ್ಲಿ ಭದ್ರತಾ ಪಡೆಗಳು ಮತ್ತೊಬ್ಬ ಮಾವೋವಾದಿ ನಾಯಕನನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದು ಬಂದಿದೆ.


ರಾಂಚಿ: ಛತ್ತೀಸ್‌ಗಢದ ನಾರಾಯಣಪುರದಲ್ಲಿ ಮಾವೋವಾದಿ ನಾಯಕ (Naxal Encounter) ನಂಬಲ ಕೇಶವ್ ರಾವ್ ಅಲಿಯಾಸ್ ಬಸವರಾಜು ಎನ್‌ಕೌಂಟರ್ ನಡೆದ ಕೆಲವು ದಿನಗಳ ನಂತರ, ಶನಿವಾರ ಜಾರ್ಖಂಡ್‌ನ ಲತೇಹಾರ್‌ನಲ್ಲಿ ಭದ್ರತಾ ಪಡೆಗಳು ಮತ್ತೊಬ್ಬ ಮಾವೋವಾದಿ ನಾಯಕನನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದು ಬಂದಿದೆ. 10 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ ಪಪ್ಪು ಲೋಹರಾನನ್ನು ಹತ್ಯೆ ಮಾಡಲಾಗಿದೆ. ಆತನ ಸಹಚರ 5 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ ಪ್ರಭಾತ್ ಗಂಜು ಎಂಬಾತನನ್ನೂ ಕೂಡ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ಗುಂಪಿನ ಸದಸ್ಯನೊಬ್ಬ ಗಾಯಗೊಂಡಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನಿಂದ INSAS ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಬಸವರಾಜು ಹತ್ಯೆಯಾದ ಮೂರು ದಿನಗಳ ನಂತರ ಈ ಎನ್‌ಕೌಂಟರ್ ನಡೆದಿದೆ . ನಾರಾಯಣಪುರ-ಬಿಜಾಪುರ ಗಡಿಯಲ್ಲಿ 50 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟ 27 ಮಾವೋವಾದಿಗಳಲ್ಲಿ ಬಸವರಾಜು ಕೂಡ ಒಬ್ಬ.
ಹತರಾದವರ ಪೈಕಿ ಬಸವರಾಜು ಈತ ಛತ್ತೀಸ್‌ಗಢದ ಮೋಸ್ಟ್ ವಾಂಟೆಂಡ್ ಮಾವೋವಾದಿ ಆಗಿದ್ದ. ಈತನ ಹತ್ಯೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರ್ದೇಶಕ ಸುಂದರರಾಜ್ ಪಿ ತಿಳಿಸಿದ್ದಾರೆ. ಮಾವೋವಾದಿಗಳ ಕೇಂದ್ರ ಸಮಿತಿ ಮತ್ತು ಪಾಲಿಟ್‌ಬ್ಯೂರೋ ಸದಸ್ಯರು, ಹಿರಿಯ ಮಾಡ್ ವಿಭಾಗದ ಕಾರ್ಯಕರ್ತರು ಮತ್ತು ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಸದಸ್ಯರು ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಮೇ 18 ರಂದು ನಾರಾಯಣಪುರ, ದಂತೇವಾಡ, ಬಿಜಾಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಡಿಆರ್‌ಜಿ ಸಿಬ್ಬಂದಿಯನ್ನು ಒಳಗೊಂಡ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಈ ಸುದ್ದಿಯನ್ನೂ ಓದಿ: Maoists Killed: 1ಕೋಟಿ ರೂ. ಇನಾಮು ಘೋಷಣೆಯಾಗಿದ್ದ ನಕ್ಸಲ್ ಮುಖಂಡನ ಹತ್ಯೆ - ಭರ್ಜರಿ ಕಾರ್ಯಾಚರಣೆಯಲ್ಲಿ 8 ನಕ್ಸಲರ ಎನ್‌ಕೌಂಟರ್
ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಕ್ಸಲ್‌ರನ್ನು ಬೇಟೆಯಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದ 27 ಮಾವೋವಾದಿಗಳಲ್ಲಿ 12 ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಹತರಾದ 27 ಮಾವೋವಾದಿಗಳು 3.33 ಕೋಟಿ ರೂ. ಬಹುಮಾನ ಹೊಂದಿದ್ದರು ಎಂದು ತಿಳಿದು ಬಂದಿದೆ. ಬಿಜಾಪುರ-ನಾರಾಯಣಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯ ಪ್ರದೇಶ ಅಭುಜ್ಮದ್‌ನಲ್ಲಿ ಬುಧವಾರ ಈ ಎನ್‌ಕೌಂಟರ್ ನಡೆದಿದೆ.