Stars Cannes Fashion: ಕಾನ್ಸ್ನಲ್ಲಿ ಮತ್ತೊಮ್ಮೆ ಫ್ಯಾಷನ್ ಹವಾ ಎಬ್ಬಿಸಿದ ಐಶ್ವರ್ಯಾ ರೈ, ಊರ್ವಶಿ ರೌಟೇಲಾ
Stars Cannes Fashion: ನಟಿ ಐಶ್ವರ್ಯಾ ರೈ ಹಾಗೂ ಊರ್ವಶಿ ರೌಟೇಲಾ ಕಾನ್ಸ್ನಲ್ಲಿ ಮತ್ತೊಮ್ಮೆ ಫ್ಯಾಷನ್ ಹವಾ ಎಬ್ಬಿಸಿದ್ದಾರೆ. ಇಬ್ಬರೂ ಕೂಡ ತಮ್ಮದೇ ಆದ ಫ್ಯಾಷನ್ & ಸ್ಟೈಲ್ ಸ್ಟೇಟ್ಮೆಂಟ್ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಹಾಗಾದಲ್ಲಿ, ಇವರಿಬ್ಬರ ಔಟ್ಫಿಟ್ ಹೇಗಿತ್ತು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಚಿತ್ರಗಳು: ಐಶ್ವರ್ಯಾ ರೈ , ಬಾಲಿವುಡ್ ನಟಿ ಮತ್ತು ಊರ್ವಶಿ ರೌಟೇಲಾ, ಬಾಲಿವುಡ್ ನಟಿ


ನಮ್ಮ ಬಾಲಿವುಡ್ ನಟಿಯರಾದ ಐಶ್ವರ್ಯಾ ರೈ ಹಾಗೂ ಊರ್ವಶಿ ರೌಟೇಲಾ ಕಾನ್ಸ್ನಲ್ಲಿ ಮತ್ತೊಮ್ಮೆ ಫ್ಯಾಷನ್ ಹವಾ ಎಬ್ಬಿಸಿದ್ದಾರೆ. ಹೌದು, ಇವರಿಬ್ಬರೂ ಕೂಡ ತಮ್ಮದೇ ಆದ ಡಿಫರೆಂಟ್ ಫ್ಯಾಷನ್ ಸ್ಟೇಟ್ಮೆಂಟ್ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಮತ್ತೊಮ್ಮೆ ಫ್ಯಾಷನ್ ಪ್ರಿಯರನ್ನು ಸೆಳೆದಿದ್ದಾರೆ. ಕಾನ್ಸ್ ಫ್ಯಾಷನ್ ವಿಮರ್ಶಕರ ಪ್ರಕಾರ, ನಟಿ ಐಶ್ವರ್ಯಾ ಹಾಗೂ ಊರ್ವಶಿ ಮಾತ್ರ, ಪ್ರತಿ ಬಾರಿಯೂ ಒಂದೊಂದು ಡಿಫರೆಂಟ್ ಡಿಸೈನರ್ವೇರ್ ಧರಿಸಿ, ಹೆಜ್ಜೆ ಹಾಕಿದಾಗ ಸುದ್ದಿಯಾಗುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಅವರ ಎಕ್ಸ್ಕ್ಲೂಸೀವ್ ಡಿಸೈನರ್ವೇರ್ಗಳು. ಧರಿಸುವ ಡಿಸೈನರ್ವೇರ್ಗೆ ಅರ್ಥ ಕಲ್ಪಿಸುವ ಕಾನ್ಸೆಪ್ಟ್! ಈ ಕಾನ್ಸೆಪ್ಟ್ ಇವರಿಬ್ಬರನ್ನು ಕಾನ್ಸ್ನಲ್ಲಿ ಪ್ರತಿಬಾರಿ ಹೈಲೈಟ್ ಮಾಡುತ್ತದೆ ಎನ್ನುತ್ತಾರೆ.

ಮತ್ತೊಮ್ಮೆ ಮಿನುಗಿದ ಐಶ್ವರ್ಯಾ
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕಾನ್ಸ್ನಲ್ಲಿ, ಮತ್ತೊಮ್ಮೆ ರೆಡ್ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದಾಗ ಕಂಪ್ಲೀಟ್ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿ ಡಿಸೈನರ್ ಗೌರವ್ ಗುಪ್ತಾ ಅವರ ಡಿಸೈನರ್ವೇರ್ನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ, ಬ್ಲ್ಯಾಕ್ ಶೇಡ್ ಎಂದೆನಿಸುವ ಕಸ್ಟಮೈಸ್ಡ್ ಗೌನ್ ಧರಿಸಿದ್ದರು. ಈ ಗೌನ್ ಮೇಲೆ ಗೋಲ್ಡ್, ಸಿಲ್ವರ್ ಶೇಡ್ ಕಾಂಬಿನೇಷನ್ ಹಾಗೂ ಮೈಕ್ರೋ ಗ್ಲಾಸ್ ಕ್ರಿಸ್ಟಲ್ ವಿನ್ಯಾಸ ಅವರು ಧರಿಸಿದ್ದ ಗೌನನ್ನು ಮತ್ತಷ್ಟು ಹೈಲೈಟ್ ಮಾಡಿತ್ತು.

ಗೌನ್ ಮೇಲೆ ಬನಾರಸಿ ಕೇಪ್
ಐಶ್ವರ್ಯಾ ರೈ, ಗೌನ್ ಮೇಲೆ ಬನಾರಸಿ ಫ್ಯಾಬ್ರಿಕ್ನಲ್ಲಿ ಸಿದ್ಧಪಡಿಸಿದ ಮೇಲುಡುಗೆ ಅಂದರೆ ಕೇಪ್ ಧರಿಸಿದ್ದರು. ಅವರ ಕೇಪ್ನ ಹಿಂಭಾಗದಲ್ಲಿ, ಮೇಲ್ಭಾಗದಲ್ಲಿ ಭಗವದ್ಗೀತೆಯಿಂದ ಆಯ್ದ ಎರಡು ಲೈನಿನ ಶ್ಲೋಕವನ್ನು ಸಂಸ್ಕೃತದಲ್ಲಿ ಬರೆದು ವಿನ್ಯಾಸ ಮಾಡಿರುವುದು ಎಲ್ಲರ ಗಮನ ಸೆಳೆಯಿತು. ಇದು ಈ ಡಿಸೈನರ್ವೇರ್ನ ವಿಶೇಷತೆಯಾಗಿತ್ತು ಎಂದಿದ್ದಾರೆ ಡಿಸೈನರ್ ಗೌರವ್.

ಊರ್ವಶಿ ರೌಟೇಲಾ ಗೋಲ್ಡನ್ ಗೌನ್
ಅಂದ ಹಾಗೆ, ನಟಿ ಊರ್ವಶಿ ರೌಟೇಲಾ, ಎಂದಿನಂತೆ ಕಸ್ಟಮೈಸ್ಡ್ ಗೋಲ್ಡ್ ಗೌನ್ ಧರಿಸಿದ್ದು, ಎಂಜೆಲ್ನಂತೆ ಕಾಣಿಸಿಕೊಂಡಿದ್ದಾರೆ. ಶೀರ್ ಕೇಪ್ ಜತೆ ಧರಿಸಿರುವ ಅವರ ಗೋಲ್ಡನ್ ಬಾಡಿಕಾನ್ ಗೌನ್, ಕ್ರಿಸ್ಟಲ್ ಹಾಗೂ ವೈಟ್ ಸ್ಟೂನ್ಗಳಿಂದ ಡಿಸೈನ್ ಮಾಡಲಾಗಿತ್ತು. ಈ ಫಿಶ್ ಟೇಲ್ ಗೌನ್ ಊರ್ವಶಿಯನ್ನು ಥೇಟ್ ಏಂಜೆಲ್ನಂತೆ ಬಿಂಬಿಸಿತು ಎಂದಿದ್ದಾರೆ ಸ್ಟೈಲಿಸ್ಟ್ಸ್. ಇನ್ನು, ಊರ್ವಶಿಯವರ ಔಟ್ಫಿಟ್ ಜತೆ ಹೈಲೈಟ್ ಆಗಿರುವುದು, ಕೈಯಲ್ಲಿ ಹಿಡಿದಿರುವ ಗೋಲ್ಡ್ನ ಬಿಕಿನಿ ಡೈಮಂಡ್ ಮಿನಿ ಬ್ಯಾಗ್. ಇದು ಯಾವ ಮಟ್ಟಿಗೆ ಜನರನ್ನು ಆಕರ್ಷಿಸಿದೆ ಎಂದರೆ, ಈ ಬ್ಯಾಗ್ ಇದೀಗ ವೈರಲ್ ಆಗಿದೆ.

ಒಟ್ಟಾರೆ, ಬಾಲಿವುಡ್ ನಟಿಯರಾದ ಐಶ್ವರ್ಯಾ ರೈ ಹಾಗೂ ಊರ್ವಶಿ ರೌಟೇಲಾ ಅವರ ಔಟ್ಫಿಟ್ ಹಾಗೂ ಲುಕ್ ಮತ್ತೊಮ್ಮೆ ಕಾನ್ಸ್ ಫ್ಯಾಷನ್ ಪ್ರಿಯರ ಮನ ಗೆದ್ದಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.