Star Cannes Fashion: ಕಾನ್ಸ್ನಲ್ಲಿ ಬಾರ್ಬಿ ಡಾಲ್ನಂತೆ ಕಂಡ ನಿತಾಂಶಿ ಗೋಯಲ್ !
Star Cannes Fashion: ಲಾಪತಾ ಲೇಡೀಸ್ ಹಿಂದಿ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ಮುದ್ದಾದ ನಟಿ ನಿತಾಂಶಿ ಗೋಯಲ್, ಕಾನ್ಸ್ನಲ್ಲಿ ಮತ್ತೊಮ್ಮೆ ತಮ್ಮ ಲುಕ್ನಿಂದ ಗಮನ ಸೆಳೆದಿದ್ದಾರೆ. ಈ ಬಾರಿ ಪುಟ್ಟ ರಾಜಕುಮಾರಿಯಂತೆ ಕಾಣಿಸುವ ಅವರ ಬಾರ್ಬಿ ಡಾಲ್ ಲುಕ್ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದೆ. ಅವರ ಔಟ್ಲುಕ್ ಕುರಿತಂತೆ ಇಲ್ಲಿದೆ ಸವಿವರ.

ಚಿತ್ರಗಳು: ನಿತಾಂಶಿ ಗೋಯಲ್, ಬಾಲಿವುಡ್ ನಟಿ


ಕಾನ್ಸ್ ಫೆಸ್ಟಿವಲ್ನಲ್ಲಿ ಬಾಲಿವುಡ್ನ ಯುವ ನಟಿ ನಿತಾಂಶಿ ಗೋಯಲ್ ಥೇಟ್ ಬಾರ್ಬಿ ಡಾಲ್ನಂತೆ ಕಾಣಿಸಿಕೊಂಡಿದ್ದಾರೆ. ಅಸ್ಕರ್ಗೆ ನಾಮಿನೇಟ್ ಆಗಿದ್ದ ಹಿಂದಿ ಚಲನಚಿತ್ರ ಲಾಪತಾ ಲೇಡೀಸ್ ಸಿನಿಮಾದಲ್ಲಿ ತನ್ನ ಮುಗ್ದತೆಯಿಂದಲೇ ಗಮನ ಸೆಳೆದಿದ್ದ ನಟಿ ನಿತಾಂಶಿ, ಇದೀಗ ಕಾನ್ಸ್ನಲ್ಲೂ ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ಗಳಿಂದ ಜಾಗತೀಕ ಮಟ್ಟದಲ್ಲಿ ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿದ್ದಾರೆ.

ನಿತಾಂಶಿ ಕಾನ್ಸ್ ಲುಕ್
ನಿತಾಂಶಿ, ಕಾನ್ಸ್ ಆರಂಭದಲ್ಲೆ ವಿಭಿನ್ನ ಡಿಸೈನರ್ವೇರ್ನಲ್ಲಿ ಪರ್ಲ್ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವಾಗಿ, ಹಿಂದಿ ಸಿನಿಮಾದ ಲೆಜೆಂಡ್ ನಟಿಯರ ಪುಟ್ಟ ಪುಟ್ಟ ಫೋಟೋಗ್ರಾಫ್ ಇರುವಂತಹ ಫ್ರೇಮ್ ಹೊಂದಿದ ಜಡೆ ಬಿಲ್ಲೆಗಳನ್ನು ಹೊಂದಿದ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಅಂದು ಅವರ ಔಟ್ಫಿಟ್ ಮಾತ್ರವಲ್ಲ, ಅವರ ಈ ಹೊಸ ಪ್ರಯೋಗ ನೋಡಿ ಫ್ಯಾಷನ್ ಪ್ರಿಯರು ದಂಗಾಗಿದ್ದರು. ಎಲ್ಲರಲ್ಲೂ ಒಬ್ಬರಾಗದೇ ಯೂನಿಕ್ ಆಗಿ ತಮ್ಮದೇ ಆದ ಸ್ಟೈಲಿಂಗ್ನಲ್ಲಿ ಕಾಣಿಸಿಕೊಂಡು, ಎಲ್ಲರ ಗಮನ ಸೆಳೆದಿದ್ದರು. ಇದೀಗ ಮತ್ತೊಮ್ಮೆ ರಾಜಕುಮಾರಿಯಂತೆ ಕಾಣಿಸಿಕೊಂಡು, ಬಾರ್ಬಿ ಡಾಲ್ ಲುಕ್ ಎಂದು ಎಲ್ಲರಿಂದ ಹೊಗಳಿಸಿಕೊಂಡಿದ್ದಾರೆ.

ನಿತಾಂಶಿ ಡಾಲ್ ಲುಕ್
ನಿತಾಂಶಿ ಎರಡನೇ ಬಾರಿ ಫೆರಿಟೇಲ್ ಥೀಮ್ಗೆ ಹೊಂದುವಂತಹ ರಾಜಕುಮಾರಿಯ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಇದು ಅವರನ್ನು ಥೇಟ್ ಬಾರ್ಬಿ ಡಾಲ್ನಂತೆ ಬಿಂಬಿಸಿದೆ. ಸೆಲೆಬ್ರೆಟಿ ಡಿಸೈನರ್ ಶುಭಿಕಾ ವರ್ಮಾ ಅವರ ಡಿಸೈನರ್ವೇರ್ನಲ್ಲಿ, ಶ್ರೇಯಾ ಅವರ ಸ್ಟೈಲಿಂಗ್ನಲ್ಲಿ ಕಾಣಿಸಿಕೊಂಡಿದ್ದು, ರಾಜಕುಮಾರಿಯಂತೆ ಬಿಂಬಿಸುವ ಡಾಲ್ ಲುಕ್ಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಆಕರ್ಷಕ ಪರ್ಲ್ ಡಿಸೈನರ್ವೇರ್
ಇನ್ನು, ಪರ್ಲ್ನಿಂದ ಡಿಸೈನ್ ಮಾಡಿರುವ ಇವರ ಔಟ್ಫಿಟ್ ಸೂಕ್ಷ್ಮ ಕಲಾತ್ಮಕ ಡಿಸೈನ್ಗಳನ್ನು ಹೊಂದಿದೆ. ಪಾಸ್ಟೆಲ್ ಶೇಡ್ ಇವರನ್ನು ಮತ್ತಷ್ಟು ಹೈಲೈಟ್ ಮಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಡ್ರೆಸ್ಗೆ ಬಿಗ್ ಬೋ ವಿನ್ಯಾಸ
ಈ ಉಡುಪಿನ ಹಿಂದೆ ಬಿಗ್ ಬೋ ಡಿಸೈನ್ ಮಾಡಲಾಗಿದ್ದು, ಇದು ಅತ್ಯಂತ ಆಕರ್ಷಣೀಯವಾಗಿದೆ ಎನ್ನುವ ಫ್ಯಾಷನ್ ವಿಮರ್ಶಕರು, ನಿತಾಂಶಿ ನೋಡಲು ಥೇಟ್ ಬಾರ್ಬಿ ಡಾಲ್ ಇಲ್ಲವೇ ರಾಜಕುಮಾರಿಯಂತೆ ಕಾಣಿಸುತ್ತಿದ್ದಾರೆ. ಚಿಕ್ಕ ಹುಡುಗಿಯಾದರೂ ಅವರ ಫ್ಯಾಷನ್ ಸೆನ್ಸ್ ಚೆನ್ನಾಗಿದೆ ಎಂದು ಪ್ರಶಂಸಿದ್ದಾರೆ.