Star Cannes Fashion: ಕಾನ್ಸ್ನಲ್ಲಿ ಗಮನ ಸೆಳೆಯದ ನಟಿ ಅದಿತಿ ರಾವ್ ಹೈದರಿ ದೇಸಿ ಲುಕ್
Star Cannes Fashion: ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಕೂಡ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ದೇಸಿ ಲುಕ್ ನೀಡುವ ರೆಡ್ ಸೀರೆಯುಟ್ಟು ಸಿಂದೂರ ಹಚ್ಚಿದ್ದರು. ಆದರೆ ಐಶ್ವರ್ಯಾ ರೈ ಅವರಂತೆ ಇವರ ಟ್ರೆಡಿಷನಲ್ ಲುಕ್ ಗಮನ ಸೆಳೆಯುವಲ್ಲಿ ವಿಫಲವಾಯಿತು. ಅದಿತಿ ಲುಕ್ ಹೇಗಿತ್ತು? ವಿಫಲವಾಗಲು ಕಾರಣವೇನು? ಫ್ಯಾಷನ್ ವಿಮರ್ಶಕರು ವಿಶ್ಲೇಷಿಸಿದ್ದಾರೆ.

ಚಿತ್ರಗಳು: ಅದಿತಿ ರಾವ್ ಹೈದರಿ, ಬಾಲಿವುಡ್ ನಟಿ


ಕಾನ್ಸ್ನಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಕೂಡ ಸೀರೆಯುಟ್ಟು, ಸಿಂದೂರ ಹಚ್ಚಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಆದರೆ ಇವರ ಈ ದೇಸಿ ಲುಕ್ ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ವಿಫಲವಾಯಿತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ನಟಿ ಅದಿತಿ ರಾವ್ ದೇಸಿ ಸೀರೆ ಲುಕ್, ಗಮನಸೆಳೆಯುವಲ್ಲಿ ವಿಫಲವಾಗಲು ಕಾರಣವಾದರೂ ಏನು? ಅವರು ಉಟ್ಟಿದ್ದ ಸೀರೆ ಯಾವುದು? ಅವರ ಒಟ್ಟಾರೆ ಲುಕ್ ಹೇಗಿತ್ತು? ಎಂಬುದರೆಲ್ಲರ ಬಗ್ಗೆ ಫ್ಯಾಷನ್ ವಿಮರ್ಶಕರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ದೇಸಿ ಲುಕ್ ನೀಡುವ ಅದಿತಿ ರೆಡ್ ಸೀರೆ ಲುಕ್
ಅಂದಹಾಗೆ, ಕಾನ್ಸ್ನಲ್ಲಿ ನಟಿ ಅದಿತಿ ಹೈದರ್ ಉಟ್ಟಿದ್ದ ಸೀರೆ ತೀರಾ ಸಿಂಪಲ್ ಆಗಿತ್ತು. ಚಿಕ್ಕ ನೀಲಿ ಬಾರ್ಡರ್ ಹೊಂದಿದ್ದ, ಈ ಸೀರೆಯು ಮಶ್ರೂ ಸಿಲ್ಕ್ನದ್ದಾಗಿದೆ. ಶೀರ್ ಫ್ಯಾಬ್ರಿಕ್ನದ್ದಾಗಿದೆ. ಸ್ಲಿವ್ಲೆಸ್ ಬ್ಲೌಸ್ನೊಂದಿಗೆ, ನೀಟಾಗಿ ಉಟ್ಟಿದ್ದ ಈ ಸೀರೆ ಪ್ರಿಯರನ್ನು ಸೆಳೆಯಿತಾದರೂ, ಸೆಲೆಬ್ರೆಟಿಗಳ ಮಧ್ಯೆ ವಿಶೇಷವೇನಿಸಲಿಲ್ಲ! ಅಲ್ಲದೇ ಯಾವುದೇ ವಿಶೇಷ ಡಿಸೈನ್ ಹೊಂದಿರಲಿಲ್ಲ. ಅಲ್ಲದೇ, ಗ್ಲಾಮರಸ್ ಆಗಿಯೂ ಕಾಣಿಸಲಿಲ್ಲ! ಸಾಮಾನ್ಯ ಮಹಿಳೆಯ ಲುಕ್ ನೀಡಿತ್ತು ಎಂದಿದ್ದಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ ವಿವೇಕ್. ಅವರ ಪ್ರಕಾರ, ಕಾನ್ಸ್ನಂತ ದೊಡ್ಡ ರೆಡ್ ಕಾರ್ಪೆಟ್ಗಳಲ್ಲಿ ಜನರು ಹಾಗೂ ಫ್ಯಾಷನ್ ಪ್ರಿಯರು ತೀರಾ ವಿಶೇಷತೆ ಹೊಂದಿರುವ ಕಾಸ್ಟ್ಯೂಮ್ಸ್ ಅಥವಾ ಔಟ್ಫಿಟ್ ನೋಡಬಯಸುತ್ತಾರೆ. ಹಾಗಾಗಿ ಅದಿತಿ ಅವರ ಈ ದೇಸಿ ಸೀರೆ ಲುಕ್ ವಿಶೇಷ ಔಟ್ಫಿಟ್ಗಳ ಸಾಲಿಗೆ ಸೇರಲಿಲ್ಲ ಎಂದಿದ್ದಾರೆ.

ಅದಿತಿ ಹಣೆಯಲ್ಲಿ ಕಂಗೊಳಿಸಿದ ಬಿಂದಿ-ಸಿಂದೂರ
ಬಾಲಿವುಡ್ನ ಒಂದು ಪಾತ್ರದಲ್ಲಿರುವಂತೆ ಕಾಣಿಸುತ್ತಿದ್ದ ಅದಿತಿ, ಹಣೆಗೆ ಕೆಂಪು ಬಿಂದಿ, ಬೈತಲೆಗೆ ಸಿಂದೂರವನ್ನು ಇಟ್ಟು ಥೇಟ್ ಭಾರತೀಯ ನಾರಿಯನ್ನು ಪ್ರತಿಬಿಂಬಿಸಿದರು. ಇದೇ ಸಂದರ್ಭದಲ್ಲಿ ನಟಿ ಐಶ್ವರ್ಯಾ ರೈ ಕೂಡ ಕಾಣಿಸಿಕೊಂಡಿದ್ದರಿಂದ, ಅದಿತಿಯ ಈ ಲುಕ್ ಹೈಲೈಟಾಗಲಿಲ್ಲ! ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಸ್ಟೇಟ್ಮೆಂಟ್ ಜ್ಯುವೆಲರಿ ಮ್ಯಾಚಿಂಗ್
ಈ ರೆಡ್ ಸೀರೆಗೆ ಭಾರಿ ವಿನ್ಯಾಸ ಹೊಂದಿಲ್ಲದ ಸಿಂಪಲ್ ಸ್ಟೇಟ್ಮೆಂಟ್ ನೆಕ್ಲೇಸ್ ಹಾಗೂ ಇಯರಿಂಗ್ಸ್ ಅದಿತಿಯವರನ್ನು ಸಿಂಪಲ್ ದೇಸಿ ಲುಕ್ನಲ್ಲಿ ಕಾಣಿಸುವಂತೆ ಮಾಡಿತು ಎನ್ನುವ ಸೀರೆ ಸ್ಟೈಲಿಸ್ಟ್ ದಿಯಾ ಹೇಳುವಂತೆ, ಈ ಲುಕ್ ಕಾನ್ಸ್ನಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾದರೂ, ಭಾರತೀಯ ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ.

ಮಾರುಕಟ್ಟೆಯಲ್ಲಿ ಅದಿತಿ ಉಟ್ಟ ಸೀರೆ
ಕಾನ್ಸ್ ಫೆಸ್ಟಿವಲ್ನಲ್ಲಿ ಸೀರೆ ಖ್ಯಾತಿ ಗಳಿಸದಿದ್ದರೂ, ಈಗಾಗಲೇ ಈ ಸೀರೆಯ ಖರೀದಿ ಈಗಾಗಲೇ ಆನ್ಲೈನ್ನಲ್ಲಿ ಹೆಚ್ಚಾಗಿದೆಯಂತೆ. ಹೌದು. ರಾ ಮ್ಯಾಂಗೋ ಎಂಬ ಬ್ರಾಂಡ್ನ ಈ ಸೀರೆ ಸದ್ಯ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಆಕರ್ಷಿಸಿದೆ. ಈ ಸೀರೆಯ ಬೆಲೆ 30,800 ರೂ.ಗಳಾಗಿದೆ. ಕೈಮಗ್ಗದಿಂದ ತಯಾರಿಸಲಾದ ಈ ಸೀರೆ ಸದ್ಯದಲ್ಲೆ ಲೋಕಲ್ ಸೀರೆ ಪ್ರಿಯರನ್ನು ಆಕರ್ಷಿಸಲಿದೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ದಿಯಾ.