ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mukul Dev: ಬಾಲಿವುಡ್‌‌ ಖ್ಯಾತ ನಟ ಮುಕುಲ್‌ ದೇವ್‌ ನಿಧನ

ಬಾಲಿವುಡ್‌ ನಟ ಮುಕುಲ್ ದೇವ್ ಶುಕ್ರವಾರ ತಡರಾತ್ರಿ ನಿಧನಾರಾಗಿದ್ದಾರೆ. ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಹಾಗಾಗಿ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಹಿಂದಿ, ಪಂಜಾಬಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳು ಹಾಗೂ ದೂರದರ್ಶನದಲ್ಲಿ ಇವರು ಅಭಿನಯಿಸಿದ್ದರು.

ಬಾಲಿವುಡ್‌‌  ನಟ ಮುಕುಲ್‌ ದೇವ್‌ ನಿಧನ

Profile Vishakha Bhat May 24, 2025 12:41 PM

ಮುಂಬೈ: ಬಾಲಿವುಡ್‌ ನಟ ಮುಕುಲ್ ದೇವ್ (Mukul Dev) ಶುಕ್ರವಾರ ತಡರಾತ್ರಿ ನಿಧನಾರಾಗಿದ್ದಾರೆ. ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಹಾಗಾಗಿ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಹಿಂದಿ, ಪಂಜಾಬಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳು ಹಾಗೂ ದೂರದರ್ಶನದಲ್ಲಿ ಇವರು ಅಭಿನಯಿಸಿದ್ದರು. ಮುಕುಲ್ ದೇವ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಮುಕುಲ್‌ ಅವರ ಸಾವಿನ ಸುದ್ದಿಯನ್ನು ಅವರ ಸಹೋದರ ರಾಹುಲ್‌ ದೇವ್‌ (Rahul Dev) ಖಚಿತ ಪಡಿಸಿದ್ದಾರೆ. ಆದರೆ ನಿಧನದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಮುಕುಲ್ ದೇವ್ ನವದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು, ಜಲಂಧರ್ ಬಳಿಯ ಹಳ್ಳಿ ಇವರ ಮೂಲ. ಅವರ ತಂದೆ ಹರಿ ದೇವ್, ಸಹಾಯಕ ಪೊಲೀಸ್ ಆಯುಕ್ತರಾಗಿದ್ದರು ಮತ್ತು ಅವರಿಗೆ ಅಫಘಾನ್ ಸಂಸ್ಕೃತಿಯನ್ನು ಪರಿಚಯಿಸಿದವರು. ಅವರ ತಂದೆ ಪಾಷ್ಟೋ ಮತ್ತು ಪರ್ಷಿಯನ್ ಭಾಷೆಗಳನ್ನು ಮಾತನಾಡಬಲ್ಲರು.ಈ ನಟ ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯಿಂದ ತರಬೇತಿ ಪಡೆದ ಪೈಲಟ್ ಕೂಡ ಆಗಿದ್ದರು. ದಸ್ತಕ್ (1996) ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಅದರಲ್ಲಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ ಕೂಡ ಅಭಿನಯಿಸಿದ್ದರು. ನಂತರ ಮುಕುಲ್‌ ಯಮ್ಲಾ ಪಗ್ಲಾ ದೀವಾನಾ , ಸನ್ ಆಫ್ ಸರ್ದಾರ್ , ಆರ್... ರಾಜ್‌ಕುಮಾರ್ , ಮತ್ತು ಜೈ ಹೋ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Scientist Srinivasan: ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ವಿಜ್ಞಾನಿ ಎಂ.ಆರ್.ಶ್ರೀನಿವಾಸನ್ ನಿಧನ

ಚಾರ್ಲಿ ಛಾಯಾಗ್ರಾಹಕ ನಿಧನ

ಖ್ಯಾತ ಛಾಯಾಗ್ರಾಹಕ ಮತ್ತು ಮಲಯಾಳಂ ನಟ ರಾಧಾಕೃಷ್ಣನ್ ಚಕ್ಯಾತ್ (Radhakrishnan Chakyat) ಮೇ 22 ರಂದು ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು. ರಾಧಾಕೃಷ್ಣನ್ ಚಕ್ಯಾತ್ ತಮ್ಮ ಛಾಯಾಗ್ರಹಣಕ್ಕೆ ಹೆಸರುವಾಸಿಯಾಗಿದ್ದರು. ಚಾರ್ಲಿ ಚಿತ್ರದಲ್ಲಿ ಚಿತ್ರದಲ್ಲಿ ರಾಧಾಕೃಷ್ಣನ್ ಚಕ್ಯಾತ್ ಪ್ರಮುಖ ಪಾತ್ರ ವಹಿಸಿದ್ದರು. ಮಾರ್ಟಿನ್ ಪ್ರಕ್ಕತ್ ನಿರ್ದೇಶಿಸಿದ ಮತ್ತು ಪ್ರಕ್ಕತ್ ಮತ್ತು ಉನ್ನಿ ಆರ್ ಬರೆದ ಈ ಮಲಯಾಳಂ ಚಿತ್ರ 2015 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಪಾರ್ವತಿ ಮೆನನ್‌, ದುಲ್ಕರ್‌ ಸಲ್ಮಾನ್‌ ನಟಿಸಿದ್ದರು.