ಫೋಟೋ ಗ್ಯಾಲರಿ: ಕರುನಾಡಿನ ಸಾಧಕರಿಗೆ ಜಾರ್ಜಿಯಾದಲ್ಲಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ
ಜಾರ್ಜಿಯಾದ ರಾಜಧಾನಿ, ಸುಂದರ ಗಿರಿಧಾಮ ಟಿಬಿಲಿಸಿಯಲ್ಲಿ ವಿಶ್ವವಾಣಿ ಮಾಧ್ಯಮಸಂಸ್ಥೆ ಏರ್ಪಡಿಸಿದ ಗ್ಲೋಬಲ್ ಅಚೀವರ್ಸ್ ಸಮ್ಮೇಳನದ ಸುಂದರ ಕಾರ್ಯಕ್ರಮದಲ್ಲಿ 17 ಮಂದಿ ಕನ್ನಡ ನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಾರ್ಜಿಯಾದ ಜನಪ್ರತಿನಿಧಿಗಳು, ರಾಯಭಾರ ಕಚೇರಿಯ ಅಧಿಕಾರಿಗಳು, ಅನಿವಾಸಿ ಭಾರತೀಯರು ಮತ್ತು ಬೆಂಗಳೂರಿನಿಂದ ತೆರಳಿದ್ದ ವಿಶೇಷ ನಿಯೋಗದ ಸದಸ್ಯರ ಸಮ್ಮುಖದಲ್ಲಿ ಜಾರ್ಜಿಯಾ ಕಲಾವಿದರ ಆಕರ್ಷಕ ಸಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಕನ್ನಡ ನಾಡಿನಲ್ಲಿ ಕಲೆ, ಶಿಕ್ಷಣ, ಸಮಾಜ ಸೇವೆ, ಕೃಷಿ, ಕೈಗಾರಿಕೋದ್ಯಮ, ರಾಜಕಾರಣ, ಹೋಟೆಲ್ ಉದ್ಯಮ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆ ಕೈಗೊಂಡ ಸ್ಫೂರ್ತಿವಂತರಿಗೆ ಮತ್ತು ಅನಿವಾಸಿ ಕನ್ನಡಿಗರಿಗೆ ವಿಶ್ವವಾಣಿಯ ಅಂತಾರಾಷ್ಟ್ರೀಯ ಪ್ರಶಸ್ತಿಯ ಕಿರೀಟ ತೊಡಿಸಲಾಯಿತು. ಈ ಸಮಾರಂಭದ ಫೋಟೋಗಳು ಇಲ್ಲಿವೆ.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಜೊತೆಗೆ ಪ್ರಶಸ್ತಿ ಪುರಸ್ಕೃತರು ಮತ್ತು ಅತಿಥಿಗಳು. ಜಾರ್ಜಿಯಾದ ಪ್ರಸಿದ್ಧ ನಟ ನಿಕೊಲಾಜ್ ಸುಲುಕಿಜ್, ಪ್ರಸಿದ್ಧ ಲೇಖಕ ಜಾರ್ಜಿ ಕೆಕೆಲಿಡ್ಜ್, ದರ್ಪಣ್ ಪರಾಶರ್, ಶ್ರೀ ಸ್ವಪ್ರಭು ನೀಲಕಂಠ ಮಹಾಸ್ವಾಮೀಜಿ ಜತೆಗಿದ್ದರು.


ಶ್ರೀ ಸ್ವಪ್ರಭು ನೀಲಕಂಠ ಮಹಾಸ್ವಾಮೀಜಿ ಮೂರುಸಾವಿರ ಮಠ, ಹೊಸೂರು- ಬೈಲಹೊಂಗಲ ಇವರಿಗೆ ಪ್ರಶಸ್ತಿ ಪ್ರದಾನ.

ದುಬೈಯ ಅನಿವಾಸಿ ಭಾರತೀಯ ಉದ್ಯಮಿ, ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬೈ, ಯು.ಎ.ಇ ಸ್ಥಾಪಕ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ.

ಮಾಜಿ ಶಾಸಕ, ಶಿಕ್ಷಣೋದ್ಯಮಿ ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ

ಉದ್ಯಮಿ, ಸೋನಾ ಗ್ರೂಪ್ ಅಧ್ಯಕ್ಷರು ಮತ್ತು ಸಿಇಒ ಯಜ್ಞನಾರಾಯಣ ಕಮ್ಮಾಜೆ ಅವರಿಗೆ ಪ್ರಶಸ್ತಿ ಪ್ರದಾನ

ಉದ್ಯಮಿ, ಸಮಾಜ ಸೇವಕ ಮಂಜುನಾಥ್ ಶಿವಪ್ಪ ಮಕ್ಕಳಗೇರಿ ಅವರಿಗೆ ಪ್ರಶಸ್ತಿ ಪ್ರದಾನ

ನಟ ಶ್ರೀನಗರ ಕಿಟ್ಟಿ ಪರವಾಗಿ ನಾಗರಾಜ್ ಅಡಿಗ ಪ್ರಶಸ್ತಿ ಪಡೆದರು.

ಓಷನ್ ಬ್ಲೂ ವೆಲ್ನೆಸ್ನ ಮುಖ್ಯಸ್ಥೆ ಮಮತಾ ರವಿ ಅವರಿಗೆ ಪ್ರಶಸ್ತಿ ಪ್ರದಾನ.

ರಾಮನಗರ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕ ಹನುಮೇಗೌಡ ಬಿ.ಆರ್ ಅವರಿಗೆ ಪ್ರಶಸ್ತಿ ಪ್ರದಾನ.

ಯಶಸ್ವಿ ಉದ್ಯಮಿ ಡಾ. ಗಂಗಾಧರ ಸಜ್ಜನ್ ಅವರಿಗೆ ಪ್ರಶಸ್ತಿ ಪ್ರದಾನ.

ಕರ್ನಾಟಕ ಹೈಕೋರ್ಟ್ ನ್ಯಾಯವಾದಿ ಆತ್ಮ ವಿ. ಹಿರೇಮಠ ಅವರಿಗೆ ಪ್ರಶಸ್ತಿ ಪ್ರದಾನ

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ರೇಖಾ ಭಟ್ ಕೋಟೆಮನೆ ಅವರಿಗೆ ಪ್ರಶಸ್ತಿ ಪ್ರದಾನ.

ಮಂಗಳೂರು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಸತೀಶ್ ಕುಮಾರ್ ಬಿ.ಎಸ್ ಅವರಿಗೆ ಪ್ರಶಸ್ತಿ ಪ್ರದಾನ.

ಹಾಸನದ ಸಾವಯವ ಕೃಷಿಕ ಬಿ.ಸಿ ಜಯಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ

ಖ್ಯಾತ ಜೇನು ಕೃಷಿಕ ಮಧುಕೇಶ್ವರ ಜನಕ ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ.

ಪ್ರಶಸ್ತಿ ಪುರಸ್ಕೃತರಾದ ವಕೀಲ ಹಾಗೂ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಅಧ್ಯಕ್ಷ ಸಿ.ಎಂ ಧನಂಜಯ, ಮಾದರಿ ಕೃಷಿಕ ಹಾಗೂ ಸಮಾಜ ಸೇವಕ ಹನುಮಂತ ರಾವ್ ಭೂಸನೂರ್, ಅನಿತಾ ರಾಘವೇಂದ್ರ ಹೆಗಡೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಾರ್ಜಿಯಾದ ಪ್ರಸಿದ್ಧ ಲೇಖಕ ಜಾರ್ಜ್ ಕೆಕೆಲಿಡ್ಜ್ ಹಾಗೂ ಬಿಷಪ್ ಸಿಮಿಯೋನ್ ಅವರನ್ನು ವಿಶ್ವೇಶ್ವರ ಭಟ್ ಸನ್ಮಾನಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಚರಲ್ ಡೈವರ್ಸಿಟಿ ಆಫ್ ಪೀಸ್ಫುಲ್ ಫ್ಯೂಚರ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದರ್ಪಣ್ ಪರಾಶರ್ ಅವರನ್ನು ವಿಶ್ವೇಶ್ವರ ಭಟ್ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರ ಜೊತೆಗೆ ವಿಶ್ವವಾಣಿ ಸಂಸ್ಥೆಯ ಸಿಇಒ ಚಿದಾನಂದ ಕಡಲಾಸ್ಕರ.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರಿಂದ ಕಾರ್ಯಕ್ರಮಕ್ಕೆ ಸ್ವಾಗತ.

ಕಾರ್ಯಕ್ರಮ ನಿರೂಪಿಸಿದ ವಿಶ್ವವಾಣಿ ವ್ಯವಸ್ಥಾಪಕ ನಾಗಾರ್ಜುನ್.