Cannes 2025: ರೆಡ್ ಕಾರ್ಪೆಟ್ ಮೇಲೆ ಹೂವಿನ ಫಿಶ್ಟೇಲ್ ಗೌನ್ನಲ್ಲಿ ಮಿಂಚಿದ ಅಲಿಯಾ
ಕಾನ್ಸ್ ಚಲನಚಿತ್ರೋತ್ಸವ (Cannes 2025) ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿ ಅಲಿಯಾ ಭಟ್ (Alia Bhatt) ಹೂವಿನ ಫಿಶ್ಟೇಲ್ ಗೌನ್ನಲ್ಲಿ ಹೆಜ್ಜೆ ಹಾಕಿದಾಗ ಎಲ್ಲರ ಕಣ್ಣುಗಳು ಆಕೆಯತ್ತ ನೆಟ್ಟಿತ್ತು. ಹಾಲಿವುಡ್ ತಾರೆಯರಿಗಿಂತ ಕಡಿಮೆ ಏನಲ್ಲ ನಮ್ಮ ಬಾಲಿವುಡ್ ಬೆಡಗಿಯರು ಎನ್ನುವಂತೆ ಬಿಳಿ ಬಣ್ಣದ ಗೌನ್ ನಲ್ಲಿ ಅವರು ಸರಳವಾದ ಮೇಕಪ್ ಲುಕ್ ನಲ್ಲಿ ಎಲ್ಲರ ದೃಷ್ಟಿಯನ್ನೂ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾದರು.



ಫ್ರಾನ್ಸ್ನಲ್ಲಿ ನಡೆಯುತ್ತಿರುವ 2025ರ ಕಾನ್ಸ್ ಚಲನಚಿತ್ರೋತ್ಸವ ಮತ್ತು ಅದರ ಪ್ರಸಿದ್ಧ ರೆಡ್ ಕಾರ್ಪೆಟ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿವೆ. ಎರಡು ವಾರಗಳ ಕಾಲ ನಡೆಯಲಿರುವ 78ನೇ ವಾರ್ಷಿಕ ಚಲನಚಿತ್ರೋತ್ಸವದಲ್ಲಿ ಅನೇಕ ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದಾರೆ. ಇದೀಗ ಬಾಲಿವುಡ್ ನಟಿ ಅಲಿಯಾ ಭಟ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.

2025ರ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅದ್ಭುತವಾಗಿ ಪಾದಾರ್ಪಣೆ ಮಾಡಿದ್ದಾರೆ. ಸಾಕಷ್ಟು ಮಂದಿ ಅವರ ನಿರೀಕ್ಷೆಯಲ್ಲಿದ್ದು, ತಮ್ಮ ಅದ್ಭುತ ಲುಕ್ ಮೂಲಕ ಎಲ್ಲರನ್ನೂ ಬೆರಗುಗೊಳ್ಳುವಂತೆ ಮಾಡಿದ್ದಾರೆ. ಕ್ಯಾಸ್ಕೇಡಿಂಗ್ ಫಿಶ್ಟೇಲ್ ಹೆಮ್ನೊಂದಿಗೆ ನೀಲಿಬಣ್ಣದ ಹೂವಿನ ಗೌನ್ ಧರಿಸಿದ್ದ ನಟಿ ತಾನು ಹಾಲಿವುಡ್ ತಾರೆಯರಿಗಿಂತ ಕಡಿಮೆ ಏನಲ್ಲ ಎಂದು ಸಾಬೀತು ಪಡಿಸಿದ್ದಾರೆ.

ಆಫ್ ಶೋಲ್ಡರ್ ಸಿಲೂಯೆಟ್ ಅವರ ಭುಜಗಳನ್ನು ಸುಂದರವಾಗಿ ಕಾಣುವಂತೆ ಮಾಡಿತ್ತು. ಸಂಕೀರ್ಣವಾದ ಬಿಳಿ ಹೂವಿನ ಅಪ್ಲಿಕ್ ಹೊಂದಿರುವ ದಿರಿಸು ಹಾಗೂ ಗೌನ್ನ ರಫಲ್ಡ್ ಅಲಿಯಾ ಅವರನ್ನು ಮತ್ಸ್ಯಕನ್ಯೆಯಂತೆ ಕಾಣುವಂತೆ ಮಾಡಿತು. ರೆಡ್ ಕಾರ್ಪೆಟ್ ಮೇಲೆ ಅವರು ಹೆಜ್ಜೆ ಹಾಕುವಾಗ ಪರಿಪೂರ್ಣ ಕಾಲ್ಪನಿಕ ಕ್ಷಣವನ್ನು ಸೃಷ್ಟಿಸಿದಂತೆ ಭಾಸವಾಗುತ್ತಿತ್ತು.

ಆತ್ಮವಿಶ್ವಾಸದಿಂದ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದ ಆಲಿಯಾ ಅವರ ಪ್ರಶಾಂತ ನಗು, ಕಣ್ಣೋಟಗಳು, ಸೊಂಟದ ಮೇಲೆ ಕೈಹಿಡಿದಿರುವ ಅವರ ಭಂಗಿ ಹಾಗೂ ಅವರ ಪ್ರತಿ ಸನ್ನೆಯು ಸಮತೋಲನ ಮತ್ತು ನಿರಾಳತೆಯನ್ನು ತೋರಿಸುತ್ತಿತ್ತು. ಒಂದು ಚಿತ್ರದಲ್ಲಿ ಅವರು ಕೆಳಗೆ ನೋಡುತ್ತಾ ಲವಲವಿಕೆಯ ನಗುವನ್ನು ಬೀರಿದ್ದಾರೆ. ಇದನ್ನು ಅವರ ಅಭಿಮಾನಿಗಳು "ಡಿಸ್ನಿ ಪ್ರಿನ್ಸೆಸ್ ಎನರ್ಜಿ" ಎಂದು ಕರೆದಿದ್ದಾರೆ.

ಅಲಿಯಾ ಅವರು ಕೂದಲನ್ನು ಅಚ್ಚುಕಟ್ಟಾಗಿ ಬನ್ ರೂಪದಲ್ಲಿ ಕಟ್ಟಿದ್ದರು. ಅವರ ಮುಖದ ಮೇಲೆ ಕೆಲವು ಕೂದಲುಗಳನ್ನು ಸುರುಳಿ ಮಾಡಿ ಇಳಿಬಿಡಲಾಗಿದೆ. ನೈಸರ್ಗಿಕ ಹೊಳಪಿನಲ್ಲಿ ಕಂಗೊಳಿಸುತ್ತಿದ್ದ ನಟಿ ಕನಿಷ್ಠ ಮೇಕಪ್ ನಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು. ಆಭರಣವಾಗಿ ಕೇವಲ ಪರ್ಲ್ ಸ್ಟಡ್ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅವರ ಚಿತ್ರಗಳನ್ನು ನೋಡಿ ಅಭಿಮಾನಿಗಳು ಆಲಿಯಾ ಭಟ್ ಓಹ್... ನನ್ನ ಡಿಸ್ನಿ ರಾಜಕುಮಾರಿ.. ಎಂದು ಕರೆದಿದ್ದಾರೆ. ಮತ್ತೊಬ್ಬರು.. ಅವರು ತಮ್ಮ ಆತ್ಮವಿಶ್ವಾಸವನ್ನು ತೋರಿಸಿದ್ದಾರೆ. ಅವರ ಉಡುಗೆ ತುಂಬಾ ಸುಂದರವಾಗಿದೆ ಎಂದು ಹೇಳಿದರೆ ಇನ್ನೊಬ್ಬರು ಆಲಿಯಾ ಭಟ್ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಅದ್ಭುತವಾಗಿ ಕಾಣುತ್ತಾರೆ. ಆದರೆ ಕೂದಲನ್ನು ಬನ್ ಮಾಡಬಾರದಿತ್ತು ಎಂದು ಹೇಳಿದ್ದಾರೆ.