RCB vs LSG: ಪ್ಲೇ ಆಫ್ ನಿರೀಕ್ಷೆಯಲ್ಲಿ ಆರ್‌ಸಿಬಿ; ಲಕ್ನೋ ಎದುರಾಳಿ
ಗಾಯದಿಂದಾಗಿ ಈ ಬಾರಿ ಐಪಿಎಲ್‌ನಿಂದಲೇ ಹೊರಬಿದ್ದಿರುವ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ ಕಣಕಿಳಿಯುವ ಸಾಧ್ಯತೆ ಇದೆ. 2011ರಲ್ಲಿ ಆರ್‌ಸಿಬಿ ಪರ ಆಡುವ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದರು.


ಲಕ್ನೋ: ಪ್ಲೇ ಆಫ್‌ಗೆ ಅಧಿಕೃತ ಹೆಜ್ಜೆಯಿಡಲು ತುದಿಗಾಲ್ಲಲಿ ನಿಂತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs LSG) ತಂಡ ಶುಕ್ರವಾರ ನಡೆಯುವ ಐಪಿಎಲ್(IPL 2025) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸವಾಲು ಎದುರಿಸಲಿದೆ. ಹಾಲಿ ಆವೃತ್ತಿಯಲ್ಲಿ ಇದು ಉಭಯ ತಂಡಗಳ ಮೊದಲ ಮುಖಾಮುಖಿ. ಆಡಿರುವ 11 ಪಂದ್ಯಗಳ ಪೈಕಿ 8 ರಲ್ಲಿ ಗೆದ್ದಿದ್ದು, 16 ಅಂಕದೊಂದಿಗೆ ಪ್ಲೇ-ಆಫ್‌ನ ಸನಿಹಲ್ಲಿರುವ ಆರ್‌ಸಿಬಿ ಈ ಪಂದ್ಯ ಗೆದ್ದರೆ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.
ಮತ್ತೊಂದೆಡೆ ಆಡಿರುವ 10 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದ್ದು, 6 ಪಂದ್ಯಗಳಲ್ಲಿ ಸೋತು 7ನೇ ಸ್ಥಾನದಲ್ಲಿರುವ ಲಕ್ನೋ ತಂಡಕ್ಕೆ ತನ್ನ ಪ್ಲೇ ಆಫ್ ರೇಸ್ ಜೀವಂತ ಇರಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಅಗತ್ಯ. ಹೀಗಾಗಿ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ.
ಅಗರ್ವಾಲ್ ಆಡುವ ಸಾಧ್ಯತೆ
ಗಾಯದಿಂದಾಗಿ ಈ ಬಾರಿ ಐಪಿಎಲ್‌ನಿಂದಲೇ ಹೊರಬಿದ್ದಿರುವ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ ಕಣಕಿಳಿಯುವ ಸಾಧ್ಯತೆ ಇದೆ. 2011ರಲ್ಲಿ ಆರ್‌ಸಿಬಿ ಪರ ಆಡುವ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ತಂಡದಿಂದ ಹೊರಬಿದ್ದಿದ್ದ ಅವರು ವಿವಿಧ ತಂಡಗಳ ಪರ ಒಟ್ಟು 127 ಪಂದ್ಯಗಳನ್ನಾಡಿದ್ದಾರೆ.
ಆರ್‌ಸಿಬಿ ಬಲಿಷ್ಠ
ತವರಿನಾಚೆ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಲಕ್ನೋ ವಿರುದ್ಧದವೂ ಫೇವರಿಟ್ ಎನಿಸಿಕೊಂಡಿದೆ. ಆರ್‌ಸಿಬಿ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಕಳೆದ 6 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ, ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ವಿರಾಟ್ ಕೊಹ್ಲಿ ಮತ್ತೆ ಅಬ್ಬರಿಸಲು ಕಾಯುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್, ಶೆಫರ್ಡ್ ಸ್ಫೋಟಕ ಆಟವಾಡುತ್ತಿದ್ದಾರೆ. ಬೆಥೆಲ್ ಕೂಡ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ವೇಗಿ ಜೋಶ್ ಹೇಜಲ್‌ವುಡ್ ಈ ಪಂದ್ಯದ ಮೂಲಕ ಮತ್ತೆ ಕಣಕಿಳ್ಳಿಯಲು ಸಜ್ಜಾಗಿದ್ದಾರೆ.
Nets ➡️ match, same shot, same swagger and our Starboy shining through! 🌟#PlayBold #ನಮ್ಮRCB #IPL2025 pic.twitter.com/jAvcER7rR4
— Royal Challengers Bengaluru (@RCBTweets) May 7, 2025
ಲಕ್ನೋ ತಂಡದಲ್ಲಿ ಕೂಡ ಸ್ಫೋಟಕ ಬ್ಯಾಟರ್‌ಗಳ ಪಡೆಯೇ ಇದೆ. ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಮಾರ್ಕ್ರಮ್, ಡೇವಿಡ್ ಮಿಲ್ಲರ್, ಬದೋನಿ ಇದ್ದಾರೆ. ಆದರೆ ಆರಂಭಿಕ ಕೆಲ ಪಂದ್ಯಳಲ್ಲಿ ಅಬ್ಬರಿಸಿದ ಬಳಿಕ ಇವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇದು ತಂಡಕ್ಕೆ ಹೊಡ್ಡ ಹಿನ್ನಡೆ ಎನ್ನಬಹುದು. ಇನ್ನೊಂದೆಡೆ ನಾಯಕ ಪಂತ್ ಅವರ ಸರಣಿ ಬ್ಯಾಟಿಂಗ್ ವೈಫಲ್ಯ ಕೂಡ ತಂಡದ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿದೆ.
ಇದನ್ನೂ ಓದಿ IPL 2025: ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದ ರಾಜಸ್ಥಾನ್ ತಂಡದ ನಿತೀಶ್ ರಾಣಾ
ಮುಖಾಮುಖಿ: 5
ಆರ್‌ಸಿಬಿ ಗೆಲುವು: 3
ಲಕ್ನೋ ಗೆಲುವು: 2
ಸಂಭಾವ್ಯ ಆಟಗಾರರು
ಆರ್‌ಸಿಬಿ: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್.
ಲಕ್ನೋ: ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಆಕಾಶ್ ಮಹಾರಾಜ್ ಸಿಂಗ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್.