ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಎಮೋಷನಲ್ ಎಪಿಸೋಡ್: ಭಾಗ್ಯಾಗೆ ನೀನು ನನ್ನ ಅಮ್ಮ ಎಂದ ಪೂಜಾ

ಗಂಡಿನ ಕಡೆಯವರು ಈ ಸಂಬಂಧ ನಮಗೆ ಬೇಡ ಎಂದು ಹೇಳುತ್ತಾರೆ. ಅಕ್ಕ ಹೀಗೆ ಇದ್ದಾಳೆ.. ಇನ್ನು ತಂಗಿ ಹೇಗೆ ಆಗುತ್ತಾಳೊ ಎಂದು ಹೇಳುತ್ತಾರೆ. ಇದರಿಂದ ಕೋಪಗೊಂಡ ಪೂಜಾ, ನನ್ನ ಅಕ್ಕನಿಗೆ ಮರಿಯಾದೆ ಇರದೆ ಇರುವ ಜಾಗದಲ್ಲಿ ನನ್ನ ಚಪ್ಪಲಿ ಕೂಡ ಬಿಡಲ್ಲ ಎಂದು ಅವರನ್ನು ಗೆಟ್ ಲಾಸ್ಟ್ ಎಂದು ಅವರನ್ನು ಕಳಿಸುತ್ತಾಳೆ. ಇದಾದ ಬಳಿಕ ಭಾಗ್ಯ ಹಾಗೂ ಪೂಜಾ ನಡುವೆ ಭಾವನಾತ್ಮಕ ಸನ್ನಿವೇಶ ನಡೆದಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಎಮೋಷನಲ್ ಎಪಿಸೋಡ್

Bhagya Lakshmi Serial

Profile Vinay Bhat May 8, 2025 12:12 PM

ಕೆಲ ಸಮಯದ ಹಿಂದೆ ಕಥೆಯಲ್ಲಿ ಹಳಿ ತಪ್ಪಿದ್ದ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಈಗ ಮತ್ತೆ ಟ್ರ್ಯಾಕ್​ಗೆ ಬಂದಿದೆ. ವೀಕ್ಷಕರಿಗೆ ಇಷ್ಟವಾಗುವಂತಹ ಎಪಿಸೋಡ್​ಗಳು ಮೂಡಿಬರುತ್ತಿವೆ. ಭಾಗ್ಯ ತನ್ನ ಮಾಜಿ ಗಂಡನ ಸಹಾಯಕ್ಕೆ ನಿಂತು ಆತನಿಗೆ ಗೊತ್ತಿಲ್ಲದೆ ಅದೇ ಹಳೆಯ ಕಂಪನಿಯಲ್ಲಿ ಕೆಲಸ ತೆಗೆಸಿಕೊಟ್ಟಿರುವುದು ಒಂದುಕಡೆಯಾದರೆ, ಭಾಗ್ಯ ಮನೆಯಲ್ಲಿ ಭಾಗ್ಯ ತಂಗಿ ಪೂಜಾಗೆ ಮದುವೆ ಮಾಡಲು ನೋಡುತ್ತಿದ್ದಾರೆ. ಆದರೆ, ಇಲ್ಲಿ ತಾಂಡವ್ ಬಂದು ಹುಳಿ ಹಿಂಡಿದ ಪರಿಣಾಮ ಗಂಡಿನ ಕಡೆಯವರು ಭಾಗ್ಯಾಗೆ ಅವಮಾನ ಮಾಡಿದ್ದಾರೆ. ಇದನ್ನು ಕೇಳಿ ಸುಮ್ಮನಿರದ ಭಾಗ್ಯ ತಂಗಿ ಪೂಜಾ ಬಂದವರಿಗೆ ಗೆಟ್ ಲಾಸ್ಟ್ ಎಂದು ಹೇಳಿ ಅಕ್ಕನ ಪರವಾಗಿ ನಿಂತಿದ್ದಾರೆ. ಈ ಎಪಿಸೋಡ್​ ಅನ್ನು ಜನರು ಇಷ್ಟಪಟ್ಟಿದ್ದಾರೆ.

ಭಾಗ್ಯ ಮನೆಯಲ್ಲಿ ಪೂಜಾಳನ್ನು ನೋಡಲು ಗಂಡಿನ ಕಡೆಯವರು ಬಂದಿರುತ್ತಾರೆ. ಆರಂಭದಲ್ಲಿ ಎಲ್ಲರೂ ಈ ಸಂಬಂಧಕ್ಕೆ ಒಪ್ಪಿಕೊಳ್ಳುತ್ತಾರೆ. ಅಡುಗೆ ಮಾಡಲು- ಸೀರೆ ಉಡಲು ಬರದಿದ್ದರೂ ತೊಂದರೆಯಿಲ್ಲ.. ಮುಂದೆ ಕಲಿಯುತ್ತಾಳೆ ಎಂದು ಹುಡುಗನ ಕಡೆಯವರು ಹೇಳಿ ಒಪ್ಪುತ್ತಾರೆ. ಆದರೆ, ಇದೇವೇಳೆ ಅವರಿಗೆ ಭಾಗ್ಯಾಳ ವೈಯಕ್ತಿಕ ಜೀವನದ ವಿಷಯ ಗೊತ್ತಾಗಿದೆ. ತಾಂಡವ್ ಬಂದು ಎಲ್ಲ ಹೇಳಿದ್ದಾನೆ. ಗಂಡನಿಗೆ ತಾಳಿ ತೆಗೆದುಕೊಟ್ಟು ಬಂದವಳು ಎಂಬುದು ಹುಡುಗನ ಕಡೆಯವರಿಗೆ ತಿಳಿದಿದೆ.

ಗಂಡಿನ ಕಡೆಯವರು ಈ ಸಂಬಂಧ ನಮಗೆ ಬೇಡ ಎಂದು ಹೇಳುತ್ತಾರೆ. ಅಕ್ಕ ಹೀಗೆ ಇದ್ದಾಳೆ.. ಇನ್ನು ತಂಗಿ ಹೇಗೆ ಆಗುತ್ತಾಳೊ ಎಂದು ಹೇಳುತ್ತಾರೆ. ಇದರಿಂದ ಕೋಪಗೊಂಡ ಪೂಜಾ, ನನ್ನ ಅಕ್ಕನಿಗೆ ಮರಿಯಾದೆ ಇರದೆ ಇರುವ ಜಾಗದಲ್ಲಿ ನನ್ನ ಚಪ್ಪಲಿ ಕೂಡ ಬಿಡಲ್ಲ ಎಂದು ಅವರನ್ನು ಗೆಟ್​ ಲಾಸ್ಟ್ ಎಂದು ಅವರನ್ನು ಕಳಿಸುತ್ತಾಳೆ. ಇದಾದ ಬಳಿಕ ಭಾಗ್ಯ ಹಾಗೂ ಪೂಜಾ ನಡುವೆ ಭಾವನಾತ್ಮಕ ಸನ್ನಿವೇಶ ನಡೆದಿದೆ.



ಪೂಜಾಳನ್ನು ಮದುವೆ ಆಗುವುದಕ್ಕೆ ಹುಡುಗನಿಗೆ ಇಷ್ಟವಿತ್ತು. ಆದರೆ, ಮನೆಯವರು ಒಪ್ಪುತ್ತಿಲ್ಲ. ಇತ್ತ ಪೂಜಾಗೂ ಹುಡುಗ ತುಂಬಾ ಇಷ್ಟ ಆಗಿದ್ದಾನೆ. ಆದರೆ, ಅಕ್ಕನಿಗೆ ಗೌರವ ಕೊಡದವರು ತನಗೆ ಬೇಡ ಅಂತಿದ್ದಾಳೆ. ಹುಡುಗನ ಮನೆಯರು ಹೋದ ಮೇಲೆ ಅಕ್ಕ ತಂಗಿ ಮಧ್ಯೆ ಸಂಭಾಷಣೆ ಶುರುವಾಗಿದೆ. ಪೂಜಾ ಕಣ್ಣೀರು ಹಾಕಿಕೊಂಡು ನೀನು ಬರೀ ಅಕ್ಕ ಅಲ್ಲ. ಅನ್ನ ಅಮ್ಮ ಅಂತ ಹೇಳಿದ್ದಾಳೆ.

ನನ್ನ ಬೇಕು-ಬೇಡಗಳಲ್ಲಿ ಎಲ್ಲದರಲ್ಲೂ ನೀನು ನನ್ನ ಜೊತೆಗೆ ಇದ್ದೆ. ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಅದು ನನ್ನ ತನಕೆ ಬಾರದೆ ಗೋಡೆಯಾಗಿ ನೀನು ಪ್ರತಿ ಸಲ ಕಾಪಾಡಿದ್ದೀಯ. ನನ್ನ ಉಸಿರಾಟ ನೋಡಿಯೇ ನನಗೆ ಏನಾಗಿದೆ ಅಂತ ಹೇಳೋಲು ನೀನು.. ಅಂತದ್ರಲ್ಲಿ ನೀನು ನನ್ಗೆ ಒಳ್ಳೆ ಹುಡುಗನ ಹುಡುಕಲ್ವ.. ನೀನು ನನಗೆ ಅಕ್ಕ ಮಾತ್ರ ಅಲ್ಲ ಎರಡನೇ ಅಮ್ಮ.. ನೀನು ನನ್ನ ತಾಯಿ ಎಂದು ಕಣ್ಣೀರಿಟ್ಟಿದ್ದಾಳೆ ಪೂಜಾ. ಇದನ್ನು ನೋಡಿದ ವೀಕ್ಷಕರು ಕೂಡ ಭಾವುಕರಾಗಿದ್ದಾರೆ. ಸದ್ಯ ಪೂಜಾಗೆ ಭಾಗ್ಯ ಗಂಡನ್ನು ಹೇಗೆ ಹುಡುಕುತ್ತಾಳೆ?, ಇದಕ್ಕೆ ತಾಂಡವ್ ಅಡ್ಡಿ ಪಡಿಸುತ್ತಾನ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Chaithra Kundapura Marriage: ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚೈತ್ರಾ ಕುಂದಾಪುರ: ನಾಳೆಯೇ ಮದುವೆ..?