ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs CSK: ವಿಕೆಟ್‌ ಕಿತ್ತು ಅತಿಯಾಗಿ ಸಂಭ್ರಮಿಸಿದ ಚಕ್ರವರ್ತಿಗೆ ಬಿತ್ತು ಭಾರೀ ದಂಡ

ಚೆನ್ನೈ ಸೂಪರ್‌ ಕಿಂಗ್ಸ್‌ ಚೇಸಿಂಗ್‌ ವೇಳೆ ಅಬ್ಬರದ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದ್ದ ಬ್ರೆವಿಸ್ ಅವರು ಚಕ್ರವರ್ತಿ ಓವರ್‌ನಲ್ಲಿ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ರಿಂಕು ಸಿಂಗ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. ವಿಕೆಟ್‌ ಕಿತ್ತ ಜೋಶ್‌ನಲ್ಲಿ ಚಕ್ರವರ್ತಿ ಕೈ ಸನ್ನೇ ಮೂಲಕ ಜಾಗ ಖಾಲಿ ಮಾಡು ಎನ್ನುವಂತೆ ಸಂಭ್ರಮಿಸಿದ್ದರು.

ವಿಕೆಟ್‌ ಕಿತ್ತು ಅತಿಯಾಗಿ ಸಂಭ್ರಮಿಸಿದ ಚಕ್ರವರ್ತಿಗೆ ಬಿತ್ತು ಭಾರೀ ದಂಡ

Profile Abhilash BC May 8, 2025 1:27 PM

ಕೋಲ್ಕತ್ತ: ಐಪಿಎಲ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (KKR vs CSK) ತಂಡದ ಮಧ್ಯಮ ವೇಗದ ಬೌಲರ್‌ ಸ್ಪಿನ್ನರ್ ವರುಣ್ ಚಕ್ರವರ್ತಿ(Varun Chakaravarthy) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬುಧವಾರ ರಾತ್ರಿ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ಹಾಕಲಾಗಿದೆ. ಜತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಚಕ್ರವರ್ತಿ 'ಐಪಿಎಲ್‌ ನೀತಿ ಸಂಹಿತೆಯ ಆರ್ಟಿಕಲ್‌ 2.5 ಅಡಿಯಲ್ಲಿ ಮೊದಲ ಬಾರಿ ಲೆವಲ್‌ 1 ಅಪರಾಧ ಮಾಡಿದ್ದಾರೆ' ಎಂದು ಐಪಿಎಲ್‌ ಹೇಳಿಕೆ ಬಿಡುಗಡೆ ಮಾಡಿದೆ. ಆರ್ಟಿಕಲ್‌ 2.5 ವಿಕೆಟ್ ಪಡೆದ ವೇಳೆ ಸಂಭ್ರಮಿಸುವಾಗ ಬ್ಯಾಟರ್‌ ಅನ್ನು ಕೆರಳಿಸುವಂತೆ ಅತಿಯಾಗಿ ವರ್ತಿಸುವುದು, ಪ್ರಚೋದನಕಾರಿ ಭಾಷೆ ಅಥವಾ ಸನ್ನೆ ಬಳಸುವುದಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ಡೆವಾಲ್ಡ್ ಬ್ರೆವಿಸ್ ವಿಕೆಟ್‌ ಪಡೆದಾಗ ಸಂಭ್ರಮಿಸಿದ್ದಕ್ಕಾಗಿ ಚಕ್ರವರ್ತಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.



ಚೆನ್ನೈ ಸೂಪರ್‌ ಕಿಂಗ್ಸ್‌ ಚೇಸಿಂಗ್‌ ವೇಳೆ ಅಬ್ಬರದ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದ್ದ ಬ್ರೆವಿಸ್ ಅವರು ಚಕ್ರವರ್ತಿ ಓವರ್‌ನಲ್ಲಿ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ರಿಂಕು ಸಿಂಗ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. ವಿಕೆಟ್‌ ಕಿತ್ತ ಜೋಶ್‌ನಲ್ಲಿ ಚಕ್ರವರ್ತಿ ಕೈ ಸನ್ನೇ ಮೂಲಕ ಜಾಗ ಖಾಲಿ ಮಾಡು ಎನ್ನುವಂತೆ ಸಂಭ್ರಮಿಸಿದ್ದರು. ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ ಬ್ರೆವಿಸ್ 25 ಎಸೆತಗಳಿಂದ 52 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ ತಲಾ 4 ಸಿಕ್ಸರ್‌ ಮತ್ತು ಬೌಂಡರಿ ಒಳಗೊಂಡಿತ್ತು.