Aamir Khan: ಮಹಾಭಾರತ ಸಿನಿಮಾದಲ್ಲಿ ಆಮೀರ್ ಖಾನ್ ಪಾತ್ರ ಏನು? ನಟ ಹೇಳಿದ್ದೇನು?
ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಪೌರಾಣಿಕ ಚಿತ್ರಗಳ ಟ್ರೆಂಡ್ ಶುರು ಆಗಿದೆ.ಈಗಾಗಲೇ ಹಲವಾರು ಪೌರಾಣಿಕ ಕಥೆಯ ಸಿನಿಮಾಗಳು ತೆರೆಗೆ ಬಂದಿದ್ದು ಇದೀಗ ಬಾಲಿವುಡ್ನ ಪ್ರಸಿದ್ದ ನಟ, ನಿರ್ಮಾಪಕ ಆಮೀರ್ ಖಾನ್ ಮಹಾಭಾರತʼ ಸಿನಿಮಾ ಮಾಡುವ ಆಸಕ್ತಿ ತೋರಿದ್ದಾರೆ. ಇತ್ತೀಚೆಗಿನ ಕಾರ್ಯಕ್ರಮ ಮೊಂದರಲ್ಲಿ ಮಾತ ನಾಡಿರುವ ಆಮೀರ್ ಖಾನ್, ತಾನು ಇದೇ ವರ್ಷ ಮಹಾಭಾರತ ಸಿನಿಮಾ ಪ್ರಾರಂಭ ಮಾಡುವುದಾಗಿ ಹೇಳಿಕೊಂಡಿದ್ದು, ತನಗೆ ಮಹಾಭಾರತದಲ್ಲಿ ಯಾವ ಪಾತ್ರ ಇಷ್ಟ ಎಂಬುದನ್ನು ಕೂಡ ಬಹಿರಂಗ ಪಡಿಸಿದ್ದಾರೆ.



ಸೂಪರ್ಸ್ಟಾರ್ ಅಮೀರ್ ಖಾನ್ ತಮ್ಮ ಕನಸಿನ ಯೋಜನೆಯಾದ 'ಮಹಾಭಾರತ' ಚಿತ್ರದ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಇತ್ತೀಚೆಗೆ ಮಹಾಭಾರತದ ಯಾವ ಪಾತ್ರ ತನಗೆ ಇಷ್ಟ ಎಂಬುದನ್ನು ತಿಳಿಸಿದ್ದಾರೆ. ಆಮೀರ್ ಖಾನ್ ಈ ಮಹತ್ವಾಕಾಂಕ್ಷೆಯ ಸಿನಿಮಾವನ್ನು ನಿರ್ಮಿಸುತ್ತಿದ್ದರೂ, ಸಿನಿಮಾ ಪರದೆಯ ಮೇಲೆ ಕಾಣಿಸಿಕೊಳ್ಳು ತ್ತಾರೋ ಇಲ್ಲವೋ ಎಂಬುದನ್ನು ದೃಢಪಡಿಸಿಲ್ಲ,ಆದರೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟ ಎಂಬುದನ್ನು ದೃಢಪಡಿಸಿದ್ದಾರೆ.

ಇತ್ತೀಚೆಗೆ, ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಅಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಮಹಾಭಾರತದ ಬಗ್ಗೆ ಮಾತನಾಡಿದ್ದಾರೆ. ಮಹಾಭಾರತ ನನ್ನ ದೊಡ್ಡ ಕನಸುಗಳಲ್ಲಿ ಒಂದು ಎಂದು ಆಮೀರ್ ಖಾನ್ ಹೇಳಿದ್ದಾರೆ. ಪಾತ್ರದ ಬಗ್ಗೆ ಕೇಳಿದಾಗ ತನಗೆ ಶ್ರೀಕೃಷ್ಣನ ಪಾತ್ರ ತುಂಬ ಇಷ್ಟ. ನನಗೆ ಈ ಪಾತ್ರದಿಂದ ಬಹಳ ಪ್ರೇರಣೆಯಿದೆ. ಅದು ನನ್ನ ಮೆಚ್ಚಿನ ಪಾತ್ರ ಎಂದಿದ್ದಾರೆ.

ಮಹಾಭಾರತವು ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ, ಜೂನ್ 20 ರಂದು ಸೀತಾರೆ ಜಮೀನ್ ಪರ್ ಬಿಡುಗಡೆ ಯಾದ ನಂತರ, ನಾನು ಮಹಾಭಾರತದ ಕೆಲಸವನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿದ್ದಾರೆ. ಮಹಾಭಾರತ ಕತೆಯನ್ನು ಒಂದು ಭಾಗದಲ್ಲಿ ಹೇಳಲು ಸಾಧ್ಯವೇ ಇಲ್ಲ. ಹಲವಾರು ನಿರ್ದೇಶಕರು ಈ ಪ್ರಾಜೆಕ್ಟ್ ನಲ್ಲಿ ಭಾಗವಹಿಸಿ ಒಂದೇ ಬಾರಿಗೆ ಹಲವು ಪಾರ್ಟ್ಗಳ ಚಿತ್ರೀಕರಣ ಮಾಡಿ ಒಂದರ ಮೇಲೆ ಒಂದರಂತೆ ರಿಲೀಸ್ ಮಾಡುವ ಯೋಜನೆಯಿದೆ ಎಂದಿದ್ದಾರೆ..

ಬಿಗ್ ಬಜೆಟ್ನಲ್ಲಿ ತಯಾರಾಗುವ 'ಮಹಾಭಾರತ' ಚಿತ್ರದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಕೂಡ ನಟಿಸಲಿದ್ದಾರಾ ಎನ್ನುವ ಕುತೂಹಲ ಹೆಚ್ಚಿನ ಸಿನಿ ಪ್ರಿಯರಿಗೆ ಇದೆ. ಆದರೆ ಮಹಾಭಾರತದಲ್ಲಿ ನಟಿಸುತ್ತೇನೋ ಇಲ್ಲವೋ ಎಂಬುದು ಇನ್ನೂ ಖಚಿತವಿಲ್ಲ ಎಂದು ತಿಳಿಸಿದ್ದು ಅವರ ತಂಡವು ಪ್ರತಿಯೊಂದು ಪಾತ್ರಕ್ಕೂ ಸೂಕ್ತವಾದ ನಟನನ್ನು ಆಯ್ಕೆ ಮಾಡುತ್ತದೆ ಎಂದು ಅಮೀರ್ ಖಾನ್ ತಿಳಿಸಿದ್ದಾರೆ.

ನಟ ಅಮೀರ್ ಖಾನ್ ನಟಿಸಿರುವ ಸಿತಾರೆ ಜಮೀನ್ ಪರ್ ಸಿನಿಮಾದ ನಿರೀಕ್ಷೆ ಹೆಚ್ಚಿದ್ದು ಈ ಹಿಂದೆಯೇ ರಿಲೀಸ್ ಆದ ಫಸ್ಟ್ ಲುಕ್ ಪೋಸ್ಟರ್ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಸಿತಾರ್ ಜಮೀನ್ ಪರ್' ಚಿತ್ರವನ್ನು ಆರ್.ಎಸ್. ಪ್ರಸನ್ನ ನಿರ್ದೇಶಿಸುತ್ತಿದ್ದು ಜೂನ್ 20ರಂದು ತೆರೆಗೆ ಬರಲಿದೆ. ಆಮಿರ್ ಖಾನ್ಗೆ ಜೆನೆಲಿಯಾ ದೇಶಮುಖ್ ಜೋಡಿಯಾಗಲಿದ್ದು ಅರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ಶರ್ಮಾ, ಸೇರಿದಂತೆ ಮುಂತಾದ ಪ್ರತಿಭೆಗಳು ಇರಲಿದ್ದಾರೆ