Qutub Minar: ಕುತುಬ್ ಮಿನಾರ್‌ನ 1,600 ವರ್ಷ ಹಳೆಯ ಕಬ್ಬಿಣದ ಕಂಬ ಒಂದಿಷ್ಟು ತುಕ್ಕು ಹಿಡಿದಿಲ್ಲ- ಇದಕ್ಕೆ ಕಾರಣ ಏನು ಗೊತ್ತಾ?
Qutub Minar: ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾದ ದೆಹಲಿಯ(Delhi) ಕುತುಬ್ ಮಿನಾರ್ ಸಂಕೀರ್ಣದಲ್ಲಿ (Qutub Minar Complex) ನಿಂತಿರುವ 1600 ವರ್ಷಗಳಷ್ಟು ಹಳೆಯ ಕಬ್ಬಿಣದ ಕಂಬವು (Iron Pillar) ತುಕ್ಕು ಹಿಡಿಯದೇ ಇಂದಿಗೂ ಶಾಶ್ವತವಾಗಿ ನಿಂತಿದೆ. 7.2 ಮೀಟರ್ ಎತ್ತರ ಮತ್ತು 6 ಟನ್ ತೂಕದ ಈ ಕಂಬವು ವಿಜ್ಞಾನಿಗಳಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ.

ವಿಶ್ವ ಪರಂಪರೆಯ ತಾಣ ಕುತುಬ್ ಮಿನಾರ್

ನವದೆಹಲಿ: ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾದ ದೆಹಲಿಯ(Delhi) ಕುತುಬ್ ಮಿನಾರ್ ಸಂಕೀರ್ಣದಲ್ಲಿ (Qutub Minar Complex) ನಿಂತಿರುವ 1600 ವರ್ಷಗಳಷ್ಟು ಹಳೆಯ ಕಬ್ಬಿಣದ ಕಂಬವು (Iron Pillar) ತುಕ್ಕು ಹಿಡಿಯದೇ ಇಂದಿಗೂ ಶಾಶ್ವತವಾಗಿ ನಿಂತಿದೆ. 7.2 ಮೀಟರ್ ಎತ್ತರ ಮತ್ತು 6 ಟನ್ ತೂಕದ ಈ ಕಂಬವು ವಿಜ್ಞಾನಿಗಳಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ.
ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನಿಗೆ ಸಮರ್ಪಿತ
ಭಾರತೀಯ ಪುರಾತತ್ವ ಸರ್ವೇಕ್ಷಣೆ (ASI) ಪ್ರಕಾರ, ಈ ಕಬ್ಬಿಣದ ಕಂಬದ ಮೇಲೆ ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನಿಗೆ ಸಮರ್ಪಿತವಾದ ಶಾಸನಗಳಿವೆ. ಆದರೆ, ಈ ಕಂಬವು ಕುತುಬ್ ಮಿನಾರ್ ಸಂಕೀರ್ಣಕ್ಕಿಂತಲೂ ಹಳೆಯದು. ಸಾಮಾನ್ಯವಾಗಿ, ಕಬ್ಬಿಣ ಅಥವಾ ಕಬ್ಬಿಣದ ಮಿಶ್ರಲೋಹಗಳು ತೇವಾಂಶಕ್ಕೆ ಒಡ್ಡಿಕೊಂಡಾಗ ಕಾಲಾನಂತರದಲ್ಲಿ ತುಕ್ಕು ಹಿಡಿಯುತ್ತವೆ. ಆದರೆ, ಈ ಕಂಬವು ಯಾವುದೇ ರಕ್ಷಣಾತ್ಮಕ ಬಣ್ಣದ ಪದರವಿಲ್ಲದೇ ಇಂದಿಗೂ ತನ್ನ ಮೂಲ ಸ್ಥಿತಿಯಲ್ಲಿದೆ.
ತುಕ್ಕು ಹಿಡಿಯದಿರುವ ರಹಸ್ಯ ಏನು?
1912ರಲ್ಲಿ ಭಾರತ ಮತ್ತು ವಿದೇಶದ ವಿಜ್ಞಾನಿಗಳು ಈ ಕಂಬದ ರಹಸ್ಯವನ್ನು ಅನ್ವೇಷಿಸಲು ಆರಂಭಿಸಿದರು. ರೂರ್ಕಿಯ ಎಂಜಿನಿಯರಿಂಗ್ ಕಾಲೇಜಿನ ಮುರ್ರೆ ಥಾಂಪ್ಸನ್ ಮತ್ತು ಸ್ಕೂಲ್ ಆಫ್ ಮೈನ್ಸ್‌ನ ಪರ್ಸಿ ಈ ಕಂಬದ ರಾಸಾಯನಿಕ ವಿಶ್ಲೇಷಣೆ ನಡೆಸಿ, ಇದು 7.66 ನಿರ್ದಿಷ್ಟ ಗುರುತ್ವಾಕರ್ಷಣೆಯ ಒರಿಜಿನಲ್ ಕಬ್ಬಿಣ (wrought iron) ಎಂದು ದೃಢಪಡಿಸಿದರು.
ಆದರೆ, 2003ರಲ್ಲಿ ಐಐಟಿ-ಕಾನ್ಪುರದ ಸಂಶೋಧಕರ ಒಂದು ಅಧ್ಯಯನವು ಈ ಕಂಬದ ನಿಜವಾದ ಎಂಜಿನಿಯರಿಂಗ್ ರಹಸ್ಯವನ್ನು ಬಯಲಿಗೆಳೆಯಿತು. ಈ ಕಂಬವು ಪ್ರಾಥಮಿಕವಾಗಿ ಒರಿಜಿನಲ್ ಕಬ್ಬಿಣದಿಂದ ಮಾಡಲ್ಪಟ್ಟಿದ್ದು, ಸುಮಾರು 1% ರಂಜಕ (Phosphorus) ಅಂಶವನ್ನು ಹೊಂದಿದೆ. ಇದರ ಜೊತೆಗೆ, ಕಂಬದ ಮೇಲ್ಮೈಯಲ್ಲಿ ಕಬ್ಬಿಣ, ಆಮ್ಲಜನಕ ಮತ್ತು ಜಲಜನಕದ ಸಂಯುಕ್ತವಾದ "ಮಿಸಾವೈಟ್" ಎಂಬ ತೆಳುವಾದ ಪದರ ಕಂಡುಬಂದಿದೆ.
ಈ ಸುದ್ದಿಯನ್ನು ಓದಿ: Tourism Sector: ಪ್ರವಾಸೋದ್ಯಮವು ಐಟಿ ಕ್ಷೇತ್ರ ಮೀರಿಸುವ ಸಾಮರ್ಥ್ಯ ಹೊಂದಿದೆ: ಆರ್.ಕೆ. ಹೊಳ್ಳ
ರಂಜಕದ ಪಾತ್ರ ಮತ್ತು ಪ್ರಾಚೀನ ತಂತ್ರಜ್ಞಾನ
ಅಧ್ಯಯನದ ಪ್ರಕಾರ, ದೆಹಲಿಯ ಕಂಬದ ಕಬ್ಬಿಣದಲ್ಲಿರುವ ಉನ್ನತ ರಂಜಕ ಅಂಶವು ತುಕ್ಕು-ನಿರೋಧಕತೆಗೆ ಪ್ರಮುಖ ಕಾರಣವಾಗಿದೆ. ಆಧುನಿಕ ಕಬ್ಬಿಣದಿಂದ ಭಿನ್ನವಾಗಿ, ಈ ಕಂಬವು ಗಂಧಕ (Sulfur) ಮತ್ತು ಮೆಗ್ನೀಸಿಯಮ್‌ನಿಂದ (Magnesium) ಮುಕ್ತವಾಗಿದೆ. ಪ್ರಾಚೀನ ಕುಶಲಕರ್ಮಿಗಳು "ಫೋರ್ಜ್-ವೆಲ್ಡಿಂಗ್" ಎಂಬ ತಂತ್ರವನ್ನು ಬಳಸಿದ್ದರು, ಇದರಲ್ಲಿ ಕಬ್ಬಿಣವನ್ನು ಬಿಸಿಮಾಡಿ, ಗುದ್ದಿ ರೂಪಿಸಲಾಗುತ್ತದೆ. ಈ ವಿಧಾನವು ರಂಜಕದ ಅಂಶವನ್ನು ಕಾಪಾಡಿಕೊಂಡು ಕಂಬಕ್ಕೆ ಶಕ್ತಿ ನೀಡಿದೆ ಎಂದು ವರದಿಯನ್ನು ಬರೆದ ಆರ್ಕಿಯೊ-ಮೆಟಲರ್ಜಿಸ್ಟ್ ಆರ್. ಬಾಲಸುಬ್ರಮಣಿಯಂ ಹೇಳಿದ್ದಾರೆ.
ಈ ಅಸಾಮಾನ್ಯ ತಂತ್ರಜ್ಞಾನವು ಕಂಬವನ್ನು ಶತಮಾನಗಳವರೆಗೆ ತುಕ್ಕುರಹಿತವಾಗಿರಿಸಿದೆ. ಆಧುನಿಕ ಕಾಲದಲ್ಲಿ ಈ ರೀತಿಯ ತಂತ್ರಜ್ಞಾನವನ್ನು ಬಳಸುವುದು ವಿರಳವಾಗಿದ್ದು, ಈ ಕಂಬವು ಭಾರತದ ಪ್ರಾಚೀನ ಲೋಹವಿಜ್ಞಾನದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.